December 6, 2024

Bhavana Tv

Its Your Channel

ಮುಖ್ಯಮಂತ್ರಿ ಪರಿಹಾರ ನಿಧಿಗೆ ೨೫ ಸಾವಿರ ಮೊತ್ತ ಚೆಕ್ ವಿತರಣೆ.

ಮಂಡ್ಯ; ಕೆ.ಆರ್.ಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆರ್.ಎಸ್.ಶಿವರಾಮೇಗೌಡರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಕೊರೋನಾ ತಡೆ ಪರಿಹಾರ ನಿಧಿಗೆ ವೆಯಕ್ತಿಕವಾಗಿ ೨೫ಸಾವಿರ ರೂಗಳ ಚೆಕ್ ಅನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಹಸ್ತಾಂತರಿಸಿದರು.
ಇಡೀ ದೇಶವೇ ಇಂದು ಕೊರೋನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಸಂಕಷ್ಠಕ್ಕೆ ಸಿಲುಕಿದೆ. ಒಕ್ಕಲಿಗರ ಸಂಘವು ಕೊರೋನಾ ನಿಯಂತ್ರಣಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಅಲ್ಪ ಕಾಣಿಕೆಯನ್ನು ನೀಡಿ ಸಹಕರಿಸಿದೆ. ಸಮಾಜದಲ್ಲಿನ ಉಳ್ಳವರು ಹಾಗೂ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಉದಾರವಾಗಿ ಮಾಡಬೇಕು ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ ಮನವಿ ಮಾಡಿದರು. ಕೊರೋನಾ ಸಂಕಷ್ಠದ ಸಮಯದಲ್ಲಿ ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಾಲ್ಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು ತಮ್ಮ ಕೈಲಾದ ಸಹಾಯಮಾಡಿ ಹೃದಯ ಶ್ರೀಮಂತಿಕೆಯನ್ನು ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ವಿ.ನಾಗೇಗೌಡ, ಆಡಳಿತ ಮಂಡಳಿಯ ಸದಸ್ಯರಾದ ಜವರಾಯಿಗೌಡ, ವಸಂತಕುಮಾರ್, ಎಂ.ಬಿ.ತಿಮ್ಮೇಗೌಡ, ಬಸವರಾಜು, ಹೆಚ್.ಎಂ.ಶಿವರಾಮೇಗೌಡ, ಎ.ಟಿ.ನಾಗರಾಜು, ಕೆ.ಟಿ.ತಿಮ್ಮೇಗೌಡ, ಜಿ.ಎಂ.ಶ್ರೀಧರ್, ರಾಮಕೃಷ್ಣೇಗೌಡ, ಚನ್ನಿಂಗೇಗೌಡ ಮತ್ತು ಎಂ.ಆರ್.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

error: