September 17, 2024

Bhavana Tv

Its Your Channel

ಸುಟ್ಟು ಕೆಟ್ಟಿರುವ ವಿದ್ಯುತ್ ಪರಿವರ್ತಕ; ನಿಲಕ್ಷತ ವಹಿಸಿದ ಇಲಾಖೆಯ ಅಧಿಕಾರಿಗಳು ಕತ್ತಲಲ್ಲಿ ಮುಳುಗಿರುವ ಕಾಪನಹಳ್ಳಿ ಗ್ರಾಮ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಪನಹಳ್ಳಿ ಗ್ರಾಮದಲ್ಲಿ ೧೫ ದಿನಗಳ ಹಿಂದೆ ೧೦೦ ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದ್ದರೂ ಕೆ.ಇ.ಬಿ
ಅಧಿಕಾರಿಗಳಾಗಲಿ ಅಥವಾ ಸಂಬAಧಪಟ್ಟ ಸೆಸ್ಕ್ ಸಿಬ್ಬಂದಿ ವರ್ಗದವರಾಗಲೀ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ದೀಡೀರ್ ಪ್ರತಿಭಟನೆ ನಡೆಸಿದರು. ಕೊರಾನಾ ವೈರಸ್ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿಕೊಂಡು ಪ್ರತಿಭಟನೆ ನಡೆಸಿರುವುದು ವಿಶೇಷವಾಗಿತ್ತು.

ಹೆಚ್ಚಿನ ರೈತರು ಹೊಂದಿರುವ ಗ್ರಾಮವಾಗಿರುದರಿಂದ ಕೃಷಿಗೆ ನೀರು ಹರಿಸಲು ವಿದ್ಯುತ್ ಕೈಕೊಟ್ಟ ಪರಿಣಾಮ ಸಮಸ್ಯೆಯಾಗುತ್ತಿತ್ತು. ಹಲವು ಬಾರಿ ಕಚೇರಿಗೆ ಬಂದು ಲಿಖಿತವಾಗಿ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸದೇ ಇರುದರಿಂದ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ವಿಠಲಾಪುರ ಗ್ರಾ.ಪಂ.ಅಧ್ಯಕ್ಷ ಹರೀಶ್ ಮಾತನಾಡಿ ನಮ್ಮ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದ ಪರಿಣಾಮವಾಗಿ ಮಕ್ಕಳು, ಮಹಿಳೆಯರು ರಾತ್ರಿ ವೇಳೆಯಲ್ಲಿ ಕತ್ತಲೆಯಲ್ಲಿ ಜೀವನ ನಡೆಸುವಂತಾಗಿದೆ. ಅಷ್ಟೆ ಅಲ್ಲದೇ ರೈತರು ಬೆಳದಿರುವ ಕಬ್ಬು, ಬಾಳೆ, ತೆಂಗು ಅಡಿಕೆ ಸೇರಿದಂತೆ ತರಕಾರಿಗಳು ಹಾಗೂ ಹಣ್ಣಿನ ಗಿಡಗಳಿಗೆ ನೀರಿಲ್ಲದೇ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ವಿದ್ಯುತ್ ಪರಿವರ್ತಕವನ್ನು ಬದಲಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

error: