December 22, 2024

Bhavana Tv

Its Your Channel

ಮುಂಬೈನಿOದ ತಾಯ್ನಾಡಿಗೆ ಆಗಮಿಸುತ್ತಿರುವ ಕನ್ನಡಿಗರು : ಹಂತಹOತವಾಗಿ ಆಗಮಿಸಿ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಲು ಸಚಿವ ಡಾ.ನಾರಾಯಣಗೌಡ ಮನವಿ.

ಮಂಡ್ಯ: ಮುಂಬೈನಿoದ ಕೃಷ್ಣರಾಜಪೇಟೆ ತಾಲ್ಲೂಕಿನ ತಮ್ಮ ಹುಟ್ಟೂರಿಗೆ ಆಗಮಿಸುತ್ತಿರುವ ಕನ್ನಡಿಗರು ಒಂದೇ ಬಾರಿಗೆ ನೂರಾರು ಸಂಖ್ಯೆಯಲ್ಲಿ ಆಗಮಿಸದೇ ಹಂತ ಹಂತವಾಗಿ ಆಗಮಿಸಿದರೆ ಹೋಂ ಕ್ವಾರಂಟೈನ್ ಮಾಡಿ ಎಲ್ಲಾ ಬಗೆಯ ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ವದಂತಿಗಳಿಗೆ ಕಿವಿಗೊಡದೇ ಗ್ರಾಮಕ್ಕೆ ಆಗಮಿಸಿದಾಗ ತಾಲೂಕಿನ ಗಡಿಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ಹೆಸರನ್ನು ನೊಂದಾಯಿಸಿಕೊoಡು ಕ್ವಾರಂಟೈನ್ ಅವಧಿ ಮುಗಿಸಿಕೊಂಡ ನಂತರವೇ ತಮ್ಮ ಮನೆಗೆ ತೆರಳಬೇಕು.ವಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಕೊರೋನಾ ಯುದ್ಧದಲ್ಲಿ ಗೆದ್ದುಬರಬೇಕು..ಯಾವುದೇ ಕಾರಣಕ್ಕೂ ದೃತಿಗೆಟ್ಟು ಆತ್ಮವಿಶ್ವಾಸ ಕಳೆದುಕೊಳ್ಳಬಾರದು..ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಎಂಬ ಸತ್ಯ ಅರಿಯಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು.

error: