ಮಂಡ್ಯ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ. ಜೆ ಡಿ ಎಸ್ ಪಕ್ಷದ ನಾಯಕರಾದ ಬಿ.ಎಂ
ಕಿರಣ್ ಮಾಸ್ಕ್ ಹಾಗೂ ಸ್ಯಾನಿಟೇಜರ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ…ನಂತರ ಕಿಕ್ಕೇರಿ ಪೋಲೀಸ್ ಠಾಣೆಯ ಪಿ.ಎಸ್. ಐ ನವೀನ್ ಮಾತನಾಡಿ ಬಿ.ಎಂ ಕಿರಣ್‌ರವರು ಕೊರೋನಾ ವೈರಸ್‌ನಿಂದ ಸಂಕಷ್ಟದಲ್ಲಿದ್ದ ಕಿಕ್ಕೇರಿ ಹೋಬಳಿಯ ಕಡು ಬಡವ ಕುಟುಂಬಗಳಿಗೆ ಆಹಾರದ ಕಿಟ್, ತರಕಾರಿ, ವಿತರಿಸಿದ್ದಲ್ಲದೆ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೇಜರ್ ಮತ್ತು ಛತ್ರಿ ಹಾಗೂ ಆಹಾರದ ಕಿಟ್ ನೀಡುವುದರ ಜೊತೆಗೆ ಕ್ವಾರೆಂಟನ್ ನಲ್ಲಿ ಇರುವ ಜನರಿಗೆ ಊಟ ತಿಂಡಿ ವ್ಯವಸ್ಥೆಗಳನ್ನು ಮಾಡುತ್ತಾ ಬಂದಿದ್ದಾರೆ ಬಿ.ಎಂ ಕಿರಣ್ ರವರು ಸಮಾಜ ಸೇವೆಯಲ್ಲಿ ತೊಡಗಿರುವುದು ಸಂತಸದ ವಿಷಯವಾಗಿದೆ..ಕೋವಿಡ್ ೧೯ ಸೋಂಕಿನಿoದ ನಮ್ಮ ಎಷ್ಟೂ ಪೋಲೀಸರು ತಮ್ಮ ಕುಟುಂಬದ ಬಿಟ್ಟು ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಅದೇ ರೀತಿ ಪೋಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಬಿ.ಎಂ ಕಿರಣ್ ರವರು ಪೋಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳ ಕುಟುಂಬಗಳು ಸುರಕ್ಷತಾವಾಗಿ ಇರಬೇಕು ಎಂಬುವ ಉದ್ದೇಶದಿಂದ ಸ್ಯಾನಿಟೇಜರ್ ಮತ್ತು ಮಾಸ್ಕ್ ನೀಡಿದ್ದಾರೆ ಎಂದರು..
ಈ ಸಂದರ್ಭದಲ್ಲಿ ಜೆ ಡಿ ಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಮುಖಂಡರಾದ ಬಿ.ಎಸ್ ಮಂಜುನಾಥ್, ಗೌತಮ್, ನಂಜೇಶಿ, ಕಾರ್ ಮಂಜು, ಸ್ಟೂಡಿಯೋ ಮಹೇಶ್ ಸೇರಿದಂತೆ ನೂರಾರು ಬಿ.ಎಂ ಕಿರಣ್ ಅಭಿಮಾನಿಗಳು ಇದ್ದರು..
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ