September 14, 2024

Bhavana Tv

Its Your Channel

ಕೋವಿಡ್ ೧೯ ವಿರುದ್ದು ಹಗಲಿರುಳು ಹೋರಾಟ ಮಾಡುತ್ತಾ ಕರ್ತವ್ಯ ನಿರ್ವಹಿಸುವ ಕಿಕ್ಕೇರಿ ಪೋಲೀಸರಿಗೆ ಮಾಸ್ಕ್ ಮತ್ತು ಸ್ಯಾನಿಟೇಜರ್ ವಿತರಣೆ.

ಮಂಡ್ಯ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ. ಜೆ ಡಿ ಎಸ್ ಪಕ್ಷದ ನಾಯಕರಾದ ಬಿ.ಎಂ
ಕಿರಣ್ ಮಾಸ್ಕ್ ಹಾಗೂ ಸ್ಯಾನಿಟೇಜರ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ…ನಂತರ ಕಿಕ್ಕೇರಿ ಪೋಲೀಸ್ ಠಾಣೆಯ ಪಿ.ಎಸ್. ಐ ನವೀನ್ ಮಾತನಾಡಿ ಬಿ.ಎಂ ಕಿರಣ್‌ರವರು ಕೊರೋನಾ ವೈರಸ್‌ನಿಂದ ಸಂಕಷ್ಟದಲ್ಲಿದ್ದ ಕಿಕ್ಕೇರಿ ಹೋಬಳಿಯ ಕಡು ಬಡವ ಕುಟುಂಬಗಳಿಗೆ ಆಹಾರದ ಕಿಟ್, ತರಕಾರಿ, ವಿತರಿಸಿದ್ದಲ್ಲದೆ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೇಜರ್ ಮತ್ತು ಛತ್ರಿ ಹಾಗೂ ಆಹಾರದ ಕಿಟ್ ನೀಡುವುದರ ಜೊತೆಗೆ ಕ್ವಾರೆಂಟನ್ ನಲ್ಲಿ ಇರುವ ಜನರಿಗೆ ಊಟ ತಿಂಡಿ ವ್ಯವಸ್ಥೆಗಳನ್ನು ಮಾಡುತ್ತಾ ಬಂದಿದ್ದಾರೆ ಬಿ.ಎಂ ಕಿರಣ್ ರವರು ಸಮಾಜ ಸೇವೆಯಲ್ಲಿ ತೊಡಗಿರುವುದು ಸಂತಸದ ವಿಷಯವಾಗಿದೆ..ಕೋವಿಡ್ ೧೯ ಸೋಂಕಿನಿoದ ನಮ್ಮ ಎಷ್ಟೂ ಪೋಲೀಸರು ತಮ್ಮ ಕುಟುಂಬದ ಬಿಟ್ಟು ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಅದೇ ರೀತಿ ಪೋಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಬಿ.ಎಂ ಕಿರಣ್ ರವರು ಪೋಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳ ಕುಟುಂಬಗಳು ಸುರಕ್ಷತಾವಾಗಿ ಇರಬೇಕು ಎಂಬುವ ಉದ್ದೇಶದಿಂದ ಸ್ಯಾನಿಟೇಜರ್ ಮತ್ತು ಮಾಸ್ಕ್ ನೀಡಿದ್ದಾರೆ ಎಂದರು..

ಈ ಸಂದರ್ಭದಲ್ಲಿ ಜೆ ಡಿ ಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಮುಖಂಡರಾದ ಬಿ.ಎಸ್ ಮಂಜುನಾಥ್, ಗೌತಮ್, ನಂಜೇಶಿ, ಕಾರ್ ಮಂಜು, ಸ್ಟೂಡಿಯೋ ಮಹೇಶ್ ಸೇರಿದಂತೆ ನೂರಾರು ಬಿ.ಎಂ ಕಿರಣ್ ಅಭಿಮಾನಿಗಳು ಇದ್ದರು..

error: