May 4, 2024

Bhavana Tv

Its Your Channel

ಶಾಲೆಯ ಮುಂದೆ ಇರುವ ರಸ್ತೆಯನ್ನು ಸರಿಪಡಿಸುವಂತೆ ವಿದ್ಯಾರ್ಥಿಗಳ ಮನವಿ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಕಳೆದ ಆರು ಏಳು ತಿಂಗಳ ಯಿಂದ ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಕಿತ್ತು ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದ್ದು ಇದರಿಂದ ಶಾಲಾ ಮಕ್ಕಳಿಗೆ ಹೆಚ್ಚು ಸಮಸ್ಯೆ ಎದುರಾಗಿದೆ..

ರಸ್ತೆಯಲ್ಲಿ ಸಂಚರಿಸವ ವಾಹನಗಳಿಂದ ಬರುವ ಧೂಳು ನೇರ ಶಾಲೆಯ ಕೊಠಡಿ ಮತ್ತು ಮಕ್ಕಳ ಊಟಕ್ಕೆ ಬೀಳುತ್ತಿದ್ದ ಇದನ್ನು ಸೇವಿಸಿದ ಮಕ್ಕಳಿಗೆ ಶೀತ, ಜ್ವರ, ಕೆಮ್ಮ ಕಾಣಿಸಿಕೊಂಡು ಶಾಲೆಗೆ ಗೈರು ಹಾಜರಾಗುತ್ತಿದ್ದಾರೆ ಕೂಡಲೇ ಸಂಬAಧ ಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೈ ಮುಗಿದು ಮನವಿ ಮಾಡಿಕೊಂಡರು

ಎ.ಡಿ.ಎo.ಸಿ ಅಧ್ಯಕ್ಷ ಸಾಸಲು ರಮೇಶ್ ಮಾತನಾಡಿ ನಮ್ಮ ಶಾಲೆಯಲ್ಲಿ 120 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಶಾಲೆಯು ಮುಖ್ಯ ರಸ್ತೆಯಲ್ಲೇ ಇದ್ದು ಸಾಸಲು ಗ್ರಾಮದಲ್ಲಿ ಮಾತ್ರ ರಸ್ತೆ ಕಾಮಗಾರಿ ನಿಲ್ಲಿಸಿದ್ದಾರೆ ರಸ್ತೆ ಯಿಂದ ಬರುವ ಧೂಳಿನಿಂದ ಮಕ್ಕಳ ಆರೋಗ್ಯದ ಮೇರೆ ಪರಿಣಾಮ ಬೀರುತ್ತಿದೆ ಒಂದು ವಾರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಎಚ್ಚರಿಗೆ ನೀಡಿದರು..

ಸಚಿವ ನಾರಾಯಣಗೌಡರ ವಿರುದ್ದ ಮುಗಿಲೆದ್ದ ಆಕ್ರೋಶ

ಸಾಸಲು ಗ್ರಾಮದಲ್ಲಿ ಪುರಾಣ ಪ್ರಸಿದ್ದ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿAಗೇಶ್ವರ, ಕುದುರೆ ಮಂಡಮ್ಮನವರ ದೇವಾಲಯಗಳಿದ್ದು ಇಲ್ಲಿಗೆ ದಿನ ನಿತ್ಯ ರಾಜ್ಯದ ಬೇರೆ ಬೇರೆ ಗ್ರಾಮಗಳಿಂದ ಭಕ್ತಾದಿಗಳು ದೇವಾಯಲಕ್ಕೆ ಬರುತ್ತಿರುತ್ತಾರೆ ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ ನಮ್ಮ ಕ್ಷೇತ್ರದ ಶಾಸಕರಿಗೆ ಇದು ಕಾಣುತ್ತಿಲ್ಲವೇ ಮೊದಲು ಈ ರಸ್ತೆ ಕಾಮಗಾರಿಯನ್ನು ಸರಿಪಡಿಸಿ ಇಲ್ಲವೇ ನಿಮ್ಮ ವಿರುದ್ದ ಇಡೀ ಗ್ರಾಮವೇ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದರು

ಈ ಸಂದರ್ಭದಲ್ಲಿ ಉಪಾದ್ಯಕ್ಷೆ ಸುಧಾರಾಣಿ ಸದಸ್ಯರಾದ ರಾಘವೇಂದ್ರ, ಮಾದೇವಪ್ಪ, ರಾಜೇಶ್, ಪ್ರಕಾಶ್, ಶೃತಿ ಈರಪ್ಪ, ರವಿ, ಭವಿತಾ, ಪ್ರತಿಮಾ, ಲತಾ, ದಿವ್ಯ, ಶೈಲಜಾ, ಗ್ರಾಮಸ್ಥರುಗಳು ಇದ್ದರು…

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: