May 3, 2024

Bhavana Tv

Its Your Channel

ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ

ಕಿಕ್ಕೇರಿ: ಸಿನಿಮಾ ಮತ್ತು ಧಾರವಾಹಿಗಳ ನಡುವೆಯೂ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಉಳಿದಿದೆ ಎಂದು ಮಂಡ್ಯ ಜಿಲ್ಲಾ ಮೂಡ ಅದ್ಯಕ್ಷರಾದ ಕೆ ಶ್ರೀನಿವಾಸ್ ತಿಳಿಸಿದ್ರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ನಾಟಕಗಳು ಮನುಷ್ಯನ ಜೀವನ ನಿರ್ವಹಣೆ ಹಾಗೂ ಬದುಕುವ ಸನ್ಮಾರ್ಗವನ್ನು ತೋರಿಸುತ್ತವೆ. ದ್ವೇಷ, ಅಸೂಯೆ, ಮೋಸ, ವಂಚನೆಗೆ ಯಾವತ್ತೂ ಉಳಿಗಾಲವಿಲ್ಲ ಎಂಬ ಸಂದೇಶಗಳನ್ನು ಸಮುದಾಯಕ್ಕೆ ಸಾರುವ ಕುರುಕ್ಷೇತ್ರ ನಾಟಕವು ತಿಳಿಸಿಕೊಡುತ್ತೆ.. ಮಾನ್ಯ ಸಚಿವರಾದ ಕೆ ಸಿ ನಾರಾಯಣಗೌಡರ ಅಧಿಕಾರ ಅವಧಿಯಲ್ಲಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಂಡಿದ್ದೆ ಮತ್ತು ನಮ್ಮ ಹಾಲು ಮತ ಸಮಾಜಕ್ಕೆ ಕೆ ಆರ್ ಪೇಟೆ ಪಟ್ಟದಲ್ಲಿ ನಿವೇಷನ ನೀಡಿದ್ದ ಕನಕ ಭವನದ ಕಾಮಗಾರಿಯು ನಡೆಯುತ್ತಿದ್ದು ಅಲ್ಲದೆ ನಿಮ್ಮ ಗ್ರಾಮದ ಶಾಲಾ ಅಭಿವೃದ್ಧಿಗೂ ಸಹ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು ಅಲ್ಲದೆ ಪೋಷಕರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿ ಸಮಾಜದಲ್ಲಿ ಮಾದರಿ ಮನುಷ್ಯರಂತೆ ಮಾಡುವಂತೆ ಸಲಹೆ ನೀಡುದರು

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾದ್ಯಕ್ಷ ಕೆ.ಎಸ್ ಪ್ರಭಾಕರ್, ಕುಬರರ ಸಂಘದ ತಾಲ್ಲೂಕು ಅದ್ಯಕ್ಷ ಪುರುಷೋತಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್, ಸಚಿವರ ಆಪ್ತ ಕಾರ್ಯದರ್ಶಿ ದಯಾನಂಧ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ, ತೋಟಗಾರಿಗೆ ಇಲಾಖೆಯ ಅಧಿಕಾರಿ ರವಿಗೌಡ, ಚೌಡೇನಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷ ದೇವರಾಜು, ಮುಖಂಡರಾದ ಎಲ್ ಪಿ ದೇವರಾಜು, ತೊಳಸಿ ರಮೇಶ್, ಶೆಟ್ಟಹಳ್ಳಿ ಕೃಷ್ಣೇಗೌಡ್ರು, ರಾಮನಹಳ್ಳಿ ಆರ್ ಎಸ್ ಮಂಜೇಗೌಡ, ರವೀಂದ್ರ, ಡೈರಿ ಕುಮಾರ, ಸೇರಿದಂತೆ ಮತ್ತಿತ್ತರರು ಇದ್ದರು…

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: