May 4, 2024

Bhavana Tv

Its Your Channel

ದ್ರೋಣಾಲಯ ಶಾಲೆಯ ಮೂರನೇ ವರ್ಷದ ವಾರ್ಷಿಕೋತ್ಸವ

ಕಿಕ್ಕೇರಿ:- ದ್ರೋಣಾಲಯ ಎಜ್ಯುಕೇಷನ್ ಟ್ರಸ್ಟ್ ನ ದ್ರೋಣಾಲಾಯ ಖಾಸಗಿ ಶಾಲೆಯ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಕಿಕ್ಕೇರಿ ಪಟ್ಟಣದ ಸರ್ಕಾರಿ ಪ್ರೌಡ ಶಾಲಾ ಅವರಣದಲ್ಲಿ ಅದ್ದೂರಿಯಾಗಿ ನಡೆಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ದ್ರೋಣಾಲಯ ಶಾಲೆ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಲೆಯ ಸಂಸ್ಥಾಪಕ ಶಮಂತ್ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ
ಚಿಕ್ಕಂದಿನಿAದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿಶಕ್ತಿ ಧೈರ್ಯ ಹೆಚ್ಚಿ ಭಯ ಹೋಗಲಾಡಿಸಬಹುದು ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ನಷ್ಟವಾಗುವುದಿಲ್ಲ ಇದಕ್ಕೆ ಪೋಷಕರ ಸಹಮತವೂ ಇರಬೇಕಿದೆ ಎಂದು ಹೇಳಿದರು ಅಲ್ಲದೆ ನಿಮ್ಮ ದ್ರೋಣಾಲಯ ಶಾಲೆಯುಮೂರು ವರ್ಷ ಪೂರೈಸಿದ್ದು ಶಾಲೆಗೆ ಸಹಕಾರ ನೀಡಿದ ಪೋಷಕರಿಗೆ ಧನ್ಯವಾಧ ತಿಳಿಸಿದರು

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಹಾಸನದ ನಾದಶಂಕರ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ನಾಗೇಶ್ ಭಾರತ್ವಾಜ್ ಭಾಗವಹಿಸಿ ಮಾತನಾಡಿದ ಅವರು ಕೆಲವು ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಯಾಗಿದೆ. ಹಲವಾರು ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಕೇವಲ ಮೊಬೈಲ್ ಟಿವಿ, ಗೆ ಅಂಟಿಕೊAಡಿರುತ್ತಾರೆ ಮತ್ತೆ ಕೆಲವರು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ ಆದರೆ ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳಬೇಕು ಎಂದರು ತಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಶಿಸ್ತು, ಸ್ವಚ್ಚತೆ ಕಲಿಯಬೇಕು ಆಗ ಮಾತ್ರ ನಾವು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯವಾಗುತ್ತದೆ ಎಂದರು…

ತಮ್ಮ ಪುಟ್ಟ ಪುಟ್ಟ ಮಕ್ಕಳ ನೃತ್ಯ ನೋಡಿ ಸಂತಸಕೊoಡ ಪೋಷಕರು:- ಹೌದು ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳು ನೀನೇ ರಾಜಕುಮಾರ ಸೇರಿದಂತೆ ಹಲವು ಹಾಡುಗಳಿಗೆ ವೇದಿಕೆ ಮೇಲೆ ನೃತ್ಯ ಮಾಡುವ ಮೂಲಕ ಪೋಷಕರ, ಮತ್ತು ಶಿಕ್ಷಕರ ಮೆಚ್ಚುಗೆ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಶಮಂತ್, ಕಾರ್ಯದರ್ಶಿ ವಚನ್ ಆರ್ ಗಂಗಡಿಗ, ಉಪ ಕಾರ್ಯದರ್ಶಿ ರಾಹುಲ್, ಸೇರಿದ ಶಾಲೆಯ ಶಿಕ್ಷಕರು, ಮಕ್ಕಳು ಪೋಷಕರು, ಸಾರ್ವಜನಿಕರು ಭಾಗವಹಿಸಿದರು.

ವರದಿ ಶಂಭು ಕಿಕ್ಕೇರಿ,
ಕೃಷ್ಣರಾಜಪೇಟೆ

error: