April 26, 2024

Bhavana Tv

Its Your Channel

ಹುಣಸೇಶ್ವರ ದೇವಾಲಯದಲ್ಲಿ 15ನೇ ವರ್ಷದ ಶಿವರಾತ್ರಿ ಮಹೋತ್ಸವ

ಕಿಕ್ಕೇರಿ :- ಇತಿಹಾಸ ಪ್ರಸಿದ್ದ ಹುಣಸೇಶ್ವರ ದೇವಾಲಯದ 15ನೇ ವರ್ಷದ ಶಿವರಾತ್ರಿ ಮಹೋತ್ಸವನ್ನು ಆಯೋಜನೆ.
ಭರತನಾಟ್ಯ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಗ್ರಹಾರ ಚಾಚಹಳ್ಳಿ ಗ್ರಾಮಸ್ಥರು

ಕೃಷ್ಣರಾಜಪೇಟೆ ತಾಲ್ಲೂಕಿನ ಆಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ 15ನೇ ವರ್ಷದ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು ಶ್ರೀ ಹಣಸೇಶ್ವರ ಸ್ವಾಮಿ ದೇವರಿಗೆ ವಿಶೇಷ ಪುಷ್ಪ ಅಲಂಕಾರ ದೊಂದಿಗೆ ವಿಷೇಷ ಪೂಜೆ ಪುರಸ್ಕಾರ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು..

ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಹಾ ಅಯೋಜನೆ ಮಾಡಿದ್ದು ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾಮದ ನಾಟ್ಯ ನಿಲಂ ಭರತ ನಾಟ್ಯ ಶಾಲೆಯ , ಜಾನವಿ ಆಚಾರ್ಯ, ಗಾನಾವಿ ಆಚಾರ್ಯ, ಭರತ ನಾಟ್ಯ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರೆಗು ನೀಡುದರು, ಮಂಡ್ಯ ಸೌಮ್ಯ ತಂಡದವರು ಸುಗಮ ಸಂಗೀತ ಹರಿಕತೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು..

ಕಾರ್ಯಕ್ರಮದಲ್ಲಿ ಶ್ರೀ ಹುಣಸೇಶ್ವರ ದೇವಾಲಯದ ಸಮಿತಿಯ ಅಧ್ಯಕ್ಷರು ಸದಸ್ಯರು, ಮತ್ತು ಸಾವಿರಾರು ಗ್ರಾಮಸ್ಥರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: