
ಕಿಕ್ಕೇರಿ:ಬಾಬಾ ಸಾಹೇಬ್ ಅಂಬೇಡ್ಕರ್ ಸಂಘದ ನೂರಾರು ಸದಸ್ಯರು ಕುಮಾರಣ್ಣನವರ ಕನಸಿನ ಕೂಸು ಪಂಚರತ್ನ ಯಾತ್ರೆಯ ಯೋಜನೆಗಳ ಬಗ್ಗೆ ತಿಳಿದು ಸಮಾಜ ಸೇವಕರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಿ.ಎಂ ಕಿರಣ್ ನೇತೃತ್ವದಲ್ಲಿ ಯುವಕರ ತಂಡ ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಯಾದರು
ಕೃಷ್ಣರಾಜಪೇಟೆ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನಡೆದ ಸಿಂಗಮ್ಮ ದೇವಿಯ ಜಾತ್ರಾ ಮಹೋತ್ಸಕ್ಕೆ ಸಮಾಜ ಸೇವಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಎಂ ಕಿರಣ್ ಮತ್ತು ಅವರ ಬೆಂಬಲಿಗರು ಭಾಗವಹಿಸಿ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿAಗೇಶ್ವರ ದೇವಾಲಯದಲ್ಲಿ ಮತ್ತೊಮ್ಮೆ ಕುಮಾರಣ್ಣನವರು ರಾಜ್ಯದ ಮುಖ್ಯಮಂತ್ರಿಯಾಗಲೆAದು ವಿಶೇಷ ಪೂಜೆ ಸಲ್ಲಿಸಿದರು
ನಂತರ ಮಾತನಾಡಿ ಕುಮಾರಣ್ಣನವರ ಕನಸಿನ ಕೂಸು ಪಂಚರತ್ನ ಯೋಜನೆಯು ರಾಜ್ಯದ ಜನತೆಗೆ ಹಾಗೂ ರೈತರಿಗೆ ಅನುಕೂಲವಾಗಿದ್ದು ಇದಕ್ಕಾಗಿ ಎಲ್ಲಾ ಕ್ಷೇತ್ರದಲ್ಲೂ ಜೆ.ಡಿ.ಎಸ್ ಅಭ್ಯರ್ಥಿಗಳನ್ನು ಹೆಚ್ಚು ಮತಗಳ ಅಂತರದಿAದ ಗೆಲ್ಲಿಸಿ ಮತ್ತೊಮ್ಮೆ ಕುಮಾರಣ್ಣ ರವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಎಲ್ಲಾರೂ ಶ್ರಮಿಸಿವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂಘದ ನೂರಾರು ಯುವಕರು ನಾನಾ ಪಕ್ಷಗಳನ್ನು ತೊರೆದು ಬಿ.ಎಂ ಕಿರಣ್ ನೇತೃತ್ವದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಸೇರಿ ಕೃಷ್ಣರಾಜಪೇಟೆ ತಾಲ್ಲೂಕಿನ ಜೆ.ಡಿ.ಎಸ್ ಪಕ್ಷದ ಘೋಷಿತ ಅಭ್ಯರ್ಥಿಯಾದ ಹೆಚ್ ಟಿ ಮಂಜು ರವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆ.ಡಿ.ಎಸ್ ಘಟಕದ ಅಧ್ಯಕ್ಷರು ಜಾನಕಿರಾಮ್, ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ವೀರಶೈವ ಮಹಾ ಸಭಾ ಸಂಘಟನೆಯ ಅಧ್ಯಕ್ಷರಾದ ಧನಂಜಯಕುಮಾರ್, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಐಕನಹಳ್ಳಿ ಕೃಷ್ಣೇಗೌಡ್ರು, ಮುಖಂಡರಾದ ಹೆಚ್. ಟಿ. ಲೋಕೇಶ್, ಬಾರೆ ಮಂಜು, ಸಾಸಲು ಮೂರ್ತಿ, , ಜಗಣ್ಣ, ಹೋಟೆಲ್ ಪಾಪಣ್ಣ, ಸಂತೋಷ್, ವಿರೂಪಾಕ್ಷ, ಜಗದೀಶ್, ಉಮೇಶ್, ಕಾಂತರಾಜು. ಶಶಿ,ಮತ್ತು ಅಂಬೇಡ್ಕರ್ ಅಭಿಮಾನಿ ಬಳಗದ ಸದಸ್ಯರು, ಹಾಗೂ ಸಾಸಲು ಗ್ರಾಮಸ್ಥರು ಉಪಸ್ಥಿತಿ ಇದ್ದರು…
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ
ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ
ರಾತ್ರೋರಾತ್ರಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮೇಲೆ ತಮ್ಮ ಕೈ ಚಳಕ ತೋರಿದ ಖದೀಮರು