April 20, 2024

Bhavana Tv

Its Your Channel

ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ರಸ್ತೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಸಾಸಲು ಗ್ರಾಮದ ದಲಿತ ಮಹಿಳೆಯರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಶ್ರೀ ಕ್ಷೇತ್ರವಾದ ಸಾಸಲು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತೇನೆ ಎಂದು ರಸ್ತೆ ಕಿತ್ತು ವರ್ಷಗಳೇ ಕಳೆದರೂ ಸರಿ ಪಡಿಸಿಲ್ಲ, ಮತ್ತು ನಮ್ಮೂರಿಗೆ ಕೇವಲ ಭರವಸೆ ನೀಡುತ್ತಾ ಬಂದಿದ್ದಾರೆ ನಮ್ಮಗೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಗ್ರಾಮದಲ್ಲಿ ದಲಿತ ಮಹಿಳೆಯರು ಹಾಗೂ ಗ್ರಾಮದ ಮುಖಂಡರುಗಳು ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು..

ಇದು ಲೋಕೋಪಯೋಗಿ ಇಲಾಖೆಗೆ ಸಂಬAಧ ಪಟ್ಟ ರಸ್ತೆಯಾಗಿದ್ದು ಕಳೆದ ಒಂದು ವರ್ಷದಿಂದ ಡಾಂಬರಿಕರಣ ಮಾಡುತ್ತೇವೆ ಎಂದು ಹೇಳಿ ಸುಳ್ಳು ಭರವಸೆ ಕೊಟ್ಟು ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಇದರಿಂದ ಬರುವ ದೂಳಿನಿಂದ ನಮ್ಮ ಮಕ್ಕಳ ಅರೋಗ್ಯ ಹಾಗೂ ನಮ್ಮ ಮನೆಗಳಲ್ಲಿರುವ ಹಿರಿಯರ ಆರೋಗ್ಯದ ಮೇಲೆ ಬಾರಿ ಪರಿಣಾಮವಾಗುತ್ತಿದೆ. ಅಧಿಕಾರಿಗಳು ಸಹ ಯಾರು ಬಂದು ನಮ್ಮ ಗೋಳು ಕೇಳುತ್ತಿಲ್ಲ ಎಂದು ಮಹಿಳೆಯರು ಸಚಿವ ಕೆ ಸಿ ನಾರಾಯಣಗೌಡರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಡಿಸಿದರು.

ಕಿಕ್ಕೇರಿ ಯಿಂದ ಶ್ರವಣಬೆಳಗೊಳ, ಹಿರೀಸೆವೆ,ಬೆಂಗಳೂರಿಗೆ ಸಂಪರ್ಕ ಇರುವ ರಸ್ತೆಯಾಗಿದ್ದು ಇಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡ್ತುತ್ತಿದ್ದು ಇದರಿಂದ ಬರುವ ದೂಳು ನಮ್ಮ ಮನೆಯೊಳಗ್ಗೆ ಬೀಳುತ್ತಿದೆ ಅಲ್ಲದೆ ರಸ್ತೆ ಪಕ್ಕದಲ್ಲೇ ಇರುವ ಶಾಲೆಯ ಮಕ್ಕಳು ಸಹ ರಸ್ತೆಯ ದೂಳಿನಿಂದ ಶೀತ, ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತಿದೆ ನಮ್ಮ ಅರೋಗ್ಯ ಹಾಳಾಗಲು ಅಧಿಕಾರಿಗಳು ಹಾಗೂ ಸಚಿವರೇ ಕಾರಣ ಎಂದು ನೂರಾರು ದಲಿತ ಕುಟುಂಬಸ್ಥರಿAದ ರಸ್ತೆ ತಡೆದು ಪ್ರತಿಭಟನೆ ಮಾಡಿದರು

ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ ಮಾತನಾಡಿ ಶ್ರವಣಬೆಳಗೋಳ ಕಿಕ್ಕೇರಿ ಮುಖ್ಯ ರಸ್ತೆ ಈ ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಅವರೆಲ್ಲ ಇಡೀ ಶಾಪ ಹಾಕಿಕೊಂಡು ಹೋಗುತ್ತಿದ್ದಾರೆ ಕ್ಷೇತ್ರದ ಶಾಸಕರು ಒಂದು ಕಾಲ್ ಮಾಡಿ ಹೇಳಿದರೆ ಕೆಲಸ ಪೂರ್ಣ ಆಗುತ್ತದೆ ಯಾವ ಕಾರಣಕ್ಕೆ ಅವರು ನಮ್ಮ ಗ್ರಾಮವನ್ನ ಕಡೆಗಣಿಸುತ್ತಿದ್ದಾರೆ ಸಮಾಜ ಸೇವೆ ಮಾಡಲು ಅಧಿಕಾರವೇ ಬೇಕಾ ನಿಮ್ಮ ಮನೆಯ ದುಡ್ಡಲ್ಲಿ ಸೇವೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: