May 2, 2024

Bhavana Tv

Its Your Channel

ಸೋಲು-ಗೆಲುವನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ- ಮಹೇಂದ್ರ ಡಿ.ಎಂ

ಕಿಕ್ಕೇರಿ: ಕ್ರೀಡೆಯಲ್ಲಿ ಸತತ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಖಂಡಿತವಾಗಿ ಯಶಸ್ಸು ಲಭಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಇದನ್ನು ಕ್ರೀಡಾ ಪಟು ಸ್ವೀಕರಿಸಬೇಕು. ಸೋತವರು ಗೆಲುವಿಗಾಗಿ, ಗೆದ್ದವರು ಹೆಚ್ಚಿನ ದಾಖಲೆಗಾಗಿ ಪ್ರಯತ್ನಿಸಬೇಕು ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ.ಡಿ.ಎA. ಅವರು ತಿಳಿಸಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಮಡುವನಕೋಡಿ ಗ್ರಾಮದಲ್ಲಿ ಶ್ರೀಮಾರುತಿ ಯುವಕರ ಸಂಘದಿAದ ಆಯೋಜಿದ್ದ ಜಿಲ್ಲಾ ಮಟ್ಡದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಭಾಗವಹಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಎಂತಹುದೇ ಕಠಿಣ ಪರಿಸ್ಥಿತಿ ಎದುರಾದರೂ ಕ್ರೀಡಾಭ್ಯಾಸವನ್ನು ನಿಲ್ಲಿಸಬಾರದು. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಕ್ರೀಡೆಯಲ್ಲಿ ಸದಾ ಮುಂದವರೆಯಬೇಕು. ಕ್ರೀಡಾಕೂಟದಲ್ಲಿ ಧನಾತ್ಮಕ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಕೂಟನ್ನು ಯಶಸ್ವಿಗೊಳಿಸಿ.ಮಾನಸಿಕವಾಗಿ ಹಾಗೂ ಬೌದ್ಧಿಕ ಬೆಳವಣಿಗೆ ಕ್ರೀಡೆಯಿಂದ ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಭಾಗಿಯಾವುದು ಮಹತ್ವವಾಗುತ್ತದೆ. ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಪಟುಗಳಿಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಅವಕಾಶ ಕಲ್ಪಿಸುವುದು ಉತ್ತಮ ಕೆಲಸವಾಗಿದೆ. ಇಂತಹ ಅವಕಾಶವನ್ನು ಎಲ್ಲ ಕ್ರೀಡಾಪಟುಗಳು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲರೂ ಆಸಕ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ವಿಜೇತರಾಗುವ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಯೂಥ್ ಅದ್ಯಕ್ಷ ಮಹೇಂದ್ರ ರವರು ತಿಳಿಸಿದರು

ಇದೇ ಸಂದರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಮಹೇಂದ್ರ ರವರಿಗೆ ಕ್ರೀಡಾಕೂಟ ಆಯೋಜಕರಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಗೌಡ, ಸೊಳ್ಳೇಪುರ ಪ್ರವೀಣ್, ವರುಣ, ಸೈಫ್, ಶ್ರೀಕಾಂತ್, ರಕ್ಷಿತ್, ಕೇಶವ, ನಿತಿನ್ ಸೇರಿದಂತೆ ಕ್ರೀಡಾ ಪಟುಗಳು ಹಾಗೂ ಮಡುವಿನಕೋಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.

ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ

error: