ಮ0ಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಹಿರಿಕಳಲೆ ಗ್ರಾಮದಲ್ಲಿ ಬಿರುಗಾಳಿ, ಮಳೆ ಸಿಡಿಲಿನ ಆರ್ಭಟ ಶನಿವಾರವು ಮುಂದುವರೆದಿದೆ. ಭಾರಿ ಗಾಳಿ ಮಳೆಗೆ ಜಿಲ್ಲಾ ಪಂಚಾಯತ ಸದಸ್ಯ ರಾಮದಾಸ್ ಅವರ ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಜಖಂ ಆಗಿದೆ. ತಾಲೂಕಿನ ಅನೇಕ ಭಾಗದಲ್ಲಿ ಗಾಳಿಗೆ ನೂರಾರು ತೆಂಗು, ಅಡಿಕೆ, ಬಾಳೆ ಮರಗಳು ಬುಡ ಸಮೇತವಾಗಿ ನೆಲಕ್ಕುರುಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತಾಲ್ಲೂಕಿನಲ್ಲಿ ಕುಂಭದ್ರೋಣ ಮಳೆ ಹಾಗೂ ಬಿರುಗಾಳಿಯ ರಭಸಕ್ಕೆ ಗ್ರಾಮದ ರವಿಕುಮಾರ್, ಹೊನ್ನಮ್ಮ, ಜವರಮ್ಮ, ಮಂಜೇಗೌಡ, ಮಾಕೇಗೌಡ, ರಮೇಶ್, ನಂಜೇಗೌಡ, ರವಿ, ರಾಮದಾಸ್ ಸೇರಿದಂತೆ ನೂರಾರು ರೈತರ ಮನೆಗಳ ಮೇಲ್ಚಾವಣೆ ಹಾರಿ ಹೋಗಿದೆ. ನೂರಾರು ಫಲಬಿಟ್ಟ ತೆಂಗಿನ ಮರಗಳು ನಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ಕ0ದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ನಷ್ಠದ ಅಂದಾಜಿನ ಸರ್ವೇ ಕಾರ್ಯನಡೆಸಿ ಪರಿಹಾರವನ್ನು ಕೊಡಿಸಿ ಸಂಕಷ್ಠದಲ್ಲಿರುವ ಜನರ ನೆರವಿಗೆ ಬರಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ