
ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಓ.ಬಿ.ಸಿ ಮೋರ್ಚ ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ ಕರೋನಾ ಸಮಯದಲ್ಲಿ ಹಗಲು ರಾತ್ರಿಯೆನ್ನದೆ ಶ್ರಮಿಸುವ ಪೋಲಿಸ್ ಇಲಾಖೆಯ ಪರವಾಗಿ ಕಿಕ್ಕೇರಿ ಪೋಲೀಸ್ ಠಾಣೆಯ ಪಿ.ಎಸ್.ಐ ನವೀನ್ ಇವರನ್ನು ಸನ್ಮಾನಿಸಿದರು. ನಂತರ ಮಾತನಾಡಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ಕಾನೂನು ಸುವ್ಯವಸ್ತೆ ಕಾಪಾಡುವಂತೆ ಮನವಿ ಮಾಡಿದರು ಅಲ್ಲದೆ ದೇಶವೇ ಕೊರೋನಾ ವೈರೆಸ್ ಇಂದ ತತ್ತರಿಸಿ ಹೋಗಿದೆ ಜನಸಮಾನ್ಯರು ಎಚ್ಚರಿಗೆ ಇಂದ ಜೀವನ ನೆಡಸಬೇಕು ಎಂದರು.
ನoತರ ಪಿ.ಎಸ್.ಐ ನವೀನ್ ಮಾತನಾಡಿ ಎಲ್ಲಾ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ವೈರಸ್ ಅನ್ನು ಎದುರಿಸಬೇಕು ಅಲ್ಲದೆ ಮಾಸ್ಕ್ ಸ್ಯಾನಿಟೇಜರ್ ಬಳಸುವಂತೆ ತಿಳಿಸಿದರು ಅಲ್ಲದೆ ಯಾವುದೇ ಸಮಯದಲ್ಲಿ ಏನೇ ತೊಂದರೆ ಇಂದರೂ ಸಾರ್ವಜನಿಕರು, ಪೋಲೀಸ್ ಠಾಣೆಗೆ ತಿಳಿಸುವ ಮೂಲಕ ಪೋಲೀಸ್ ಕರ್ತವ್ಯಕ್ಕೆ ಸಹಕಾರ ನೀಡುವಂತೆ ತಿಳಿಸಿದರು..
ಈ ಸಂರ್ಭದಲ್ಲಿ ಓ.ಬಿ.ಸಿ ಮೋರ್ಚ ಉಪಾದ್ಯಕ್ಷ ಕುಂದೂರು ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಶೆಟ್ಟಹಳ್ಳಿ ಕೃಷ್ಣೇಗೌಡ, ಮುಖಂಡರಾದ ಮಾರ್ಗೋನಹಳ್ಳಿ ಸುರೇಶ್, ಸೇರಿಂದತೆ ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ, ಮಂಡ್ಯ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ