April 26, 2024

Bhavana Tv

Its Your Channel

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಲಾಭಾಂಶದ ಹಣ ವಿತರಣೆ

ಕೆ.ಆರ್.ಪೇಟೆ ; ಪಟ್ಟಣದ ಹೇಮಾವತಿ ಬಡಾವಣೆಯ ಗಣಪತಿ ಪಾರ್ಕಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಲಾಭಾಂಶದ ಹಣವನ್ನು ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರರೈ ವಿತರಿಸಿ ಶುಭ ಹಾರೈಸಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ 250ಕ್ಕೂ ಹೆಚ್ಚಿನ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಸಾಲಸೌಲಭ್ಯ ನೀಡಿ ಬಂದಿರುವ ಉಳಿತಾಯದ ಲಾಭದ ಐದೂವರೆ ಕೋಟಿ ರೂಪಾಯಿ ಹಣದಲ್ಲಿ ಸಂಘದ ಸದಸ್ಯೆಯರಿಗೂ ಶ್ರೀ ಧರ್ಮಸ್ಥಳ ಕ್ಷೇತ್ರದ ಪ್ರಸಾಧದ ರೂಪದಲ್ಲಿ ಲಾಭಾಂಶವನ್ನು ನೀಡಿ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಗಂಗಾಧರರೈ ಅಭಿಮಾನದಿಂದ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುರಸಭೆ ಸದಸ್ಯ ಕೆ.ಆರ್.ರವೀಂದ್ರಬಾಬೂ ಮಾತನಾಡಿ ಒಂದು ಸರ್ಕಾರವು ಮಾಡಲಾಗದ ಕೆಲಸ ಹಾಗೂ ಸೇವೆಯನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದೆ. ಸುಲಭ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಸಂಘಗಳಿಗೆ ಕೊಡಿಸಿ, ವ್ಯವಹಾರದ ಲಾಭದಲ್ಲಿ ಉಳಿದಿರುವ ಲಾಭಾಂಶವನ್ನು ಸಂಘದ ಸದಸ್ಯೆಯರಿಗೆ ವಿತರಿಸುವ ಮೂಲಕ ಕೋವಿಡ್ 2ನೇ ಅಲೆಯ ಸಂಕಷ್ಠದ ಸಮಯದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬುತ್ತಿದೆ. ಧರ್ಮಸ್ಥಳ ಯೋಜನೆಯು ಗ್ರಾಮೀಣ ಜನರ ಉಸಿರಾಗಿ, ಮಹಿಳೆಯರ ಸ್ವಾವಲಂಬನೆಯ ಧೀ ಶಕ್ತಿಯಾಗಿದೆ. ನಮ್ಮ ತಾಲೂಕಿನ ಮಹಿಳೆಯರಿಗೆ ಸಂಘವು ವರವಾಗಿ ಬಂದಿದೆ ಎಂದು ರವೀಂದ್ರಬಾಬು ಹೇಳಿದರು.

ಕಾರ್ಯಕ್ರಮದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಮೇಲ್ವಿಚಾರಕರಾದ ಕಾವ್ಯಹರೀಶ್, ಜ್ಯೋತಿ, ಅನ್ನಪೂರ್ಣ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ. ಮಂಡ್ಯ

error: