May 3, 2024

Bhavana Tv

Its Your Channel

ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕೃಷ್ಣರಾಜಪೇಟೆ: ದಲಿತ ಬಂಧುಗಳು ಶಿಕ್ಷಣದ ಜ್ಞಾನವನ್ನು ಪಡೆದುಕೊಂಡು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವರಹನಾಥಕಲ್ಲಹಳ್ಳಿ ಕುಮಾರ್ ಮನವಿ ಮಾಡಿದರು ..

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ದಲಿತರು ಹಾಗೂ ಶೋಷಿತರ ಜೀವನದ ಬೆಳಕಾಗಿರುವ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ತುಳಿತಕ್ಕೊಳಗಾದ ಜನರು, ಶೋಷಿತರು ಹಾಗೂ ದಲಿತರ ಮಕ್ಕಳಿಗೆ ಗುಣಮಟ್ಟವು ಶಿಕ್ಷಣ ಹಾಗೂ ವಸತಿಯನ್ನು ನೀಡಲು ಸಂಸ್ಥೆಯು ಬದ್ಧವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ವಸತಿ ನಿಲಯಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಸಂಸ್ಥೆಯಲ್ಲಿ ನಡೆಯುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದ ಕುಮಾರ್ ದಲಿತ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಬೇಕು ಎಂದು ಹೇಳಿದರು.

ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಿ.ಪ್ರೇಮಕುಮಾರ್ ವಾರ್ಷಿಕ ವರದಿ ಹಾಗೂ ಆಡಿಟ್ ವರದಿಯನ್ನು ಸಭೆಗೆ ಮಂಡಿಸಿದರು.

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಎಸ್.ಶಿವಣ್ಣ, ಬ್ಯಾಂಕ್ ಬೋರಯ್ಯ, ರವಿ, ಬಲರಾಮು, ಕೆ.ಬಿ.ಸದಾಶಿವಯ್ಯ, ಊಚನಹಳ್ಳಿ ನಟರಾಜು, ಚೆನ್ನಕೃಷ್ಣ, ದಲಿತ ಮುಖಂಡರಾದ ಡಾ.ಬಸ್ತಿರಂಗಪ್ಪ, ಎಪಿಎಂಸಿ ನಿರ್ದೇಶಕ ಸೋಮಸುಂದರ್, ಡಿಸಿಸಿ ಬ್ಯಾಂಕ್ ಮಾಜಿನಿರ್ದೇಶಕ ಹೆಚ್.ಪುಟ್ಟರಾಜು, ಜೈನಹಳ್ಳಿ ಹರೀಶ್, ಕತ್ತರಘಟ್ಟ ರಾಜೇಶ್, ಲಕ್ಷ್ಮೀಪುರ ರಂಗಸ್ವಾಮಿ ಸೇರಿದಂತೆ ನೂರಾರು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: