May 4, 2024

Bhavana Tv

Its Your Channel

ಪಿಎಲ್‌ಡಿ ಬ್ಯಾಂಕಿನ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕೆ.ಆರ್.ಪೇಟೆ ತಾಲೂಕಿನ ರೈತರ ಜೀವನಾಡಿಯಾಗಿರುವ ಪಿಎಲ್‌ಡಿ ಬ್ಯಾಂಕ್ ರೈತರಿಗೆ ಸಕಾಲದಲ್ಲಿ ಸಾಲಸೌಲಭ್ಯವನ್ನು ನೀಡುತ್ತಾ ಪ್ರಗತಿಯ ದಿಕ್ಕಿನತ್ತ ದಾಪುಗಾಲು ಹಾಕುತ್ತಿದೆ. ಸಾಲ ವಸೂಲಾತಿ ಹಾಗೂ ಸಾಲಸೌಲಭ್ಯ ನೀಡುವಿಕೆಯಲ್ಲಿ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪಾಪಣ್ಣ ಹೇಳಿದರು .

ಅವರು ಪಟ್ಟಣದ ಎಸ್.ಎಂ.ಲಿAಗಪ್ಪ ಸಹಕಾರ ಭವನದ ಆವರಣದಲ್ಲಿ ನಡೆದ ಪಿಎಲ್‌ಡಿ ಬ್ಯಾಂಕಿನ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕು ವಾಸ್ತವವಾಗಿ ಆರ್ಥಿಕ ಸಂಕಷ್ಠದಲ್ಲಿದ್ದು ರೈತ ಬಾಂಧವರು ಸಕಾಲದಲ್ಲಿ ಬ್ಯಾಂಕಿಗೆ ತಾವು ಪಡೆದಿರುವ ಸಾಲದ ಹಣವನ್ನು ಪಾವತಿಸದಿರುವುದರಿಂದಾಗಿ ೨ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಟದಲ್ಲಿದೆಯಾದರೂ ಆಡಳಿತ ಮಂಡಳಿಯ ಸದಸ್ಯರಲ್ಲಿನ ಬದ್ಧತೆ ಹಾಗೂ ರೈತಪರವಾದ
ಕಾಳಜಿಯಿಂದಾಗಿ ಸತತವಾದ ಹೋರಾಟ ನಡೆಸಿ ರೈತರ ಮನವೊಲಿಸಿ ಸಾಲದ ಬಾಕಿ ಹಣವನ್ನು ವಸೂಲಿ ಮಾಡಿ ಜಿಲ್ಲೆಯ ೨ನೇ ಅತ್ಯುತ್ತಮವಾದ ಬ್ಯಾಂಕು ಎಂಬ ಕೀರ್ತಿಗೆ ಭಾಜನವಾಗಿದೆ ಎಂದು ತಿಳಿಸಿದ ಅಂಜನಿಗೌಡ ಪಾಪಣ್ಣ ಬ್ಯಾಂಕು ೮ಸಾವಿರಕ್ಕೂ ಹೆಚ್ಚಿನ ಶೇರುದಾರರನ್ನು ಹೊಂದಿದ್ದರೂ ಅರ್ಧಕ್ಕೂ ಹೆಚ್ಚಿನ ಶೇರುದಾರರು ಸಂಪೂರ್ಣವಾಗಿ ತಮ್ಮ ಶೇರುಧನವನ್ನು ಪಾವತಿಸಿ ತಮ್ಮ ಶೇರುಗಳನ್ನು ಚಾಲ್ತಿಯಲ್ಲಿಟ್ಟುಕೊಂಡಿಲ್ಲ. ಆದ್ದರಿಂದ ರೈತಬಾಂಧವರು ನಿಮ್ಮದೇ ಆಗಿರುವ ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕಿನ ಉಳಿದ ಶೇರು ಹಣ ೫೦೦ರೂ ಪಾವತಿಸಿ ಬ್ಯಾಂಕನ್ನು ಮುನ್ನಡೆಸುವ ಜೊತೆಗೆ ಬ್ಯಾಂಕಿನಿAದ ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲಸೌಲಭ್ಯವನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣ ಸಾಧಿಸಿ ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಪಕ್ಕದಲ್ಲಿ ಭೂ ಅಭಿವೃದ್ಧಿ ಬ್ಯಾಂಕು ಸುಸಜ್ಜಿತವಾದ ನಿವೇಶನವನ್ನು ಹೊಂದಿದ್ದು ಪ್ರಸ್ತುತ ನೆಲ ಬಾಡಿಗೆ ಮಾಸಿಕ ೧೦ಸಾವಿರ ರೂನಂತೆ ಖಾಸಗಿ ವ್ಯಕ್ತಿಯೊಬ್ಬರಿಗೆ ಮೋಟಾರ್ ಬೈಕ್ ಸ್ಟ್ಯಾಂಡ್‌ಗೆ ನೀಡಲಾಗಿದೆ. ಈ ಜಾಗದಲ್ಲಿ ಸುಸಜ್ಜಿತವಾದ ವಾಣಿಜ್ಯ ಸಮುಚ್ಛಯ ಹಾಗೂ ಆಡಳಿತ ಕಛೇರಿಯ ಕಟ್ಟಡವನ್ನು ನಿರ್ಮಿಸುವ ಸದಾಶಯದಿಂದ ಮoಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಹಾಗೂ ರಾಜ್ಯದ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ದೊರಕಿಸಿಕೊಡುವಂತೆ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ನಿಯೋಗದಲ್ಲಿ ತೆರಳಿ ಮನವಿ ಮಾಡಿದ್ದೇವೆ. ಇಬ್ಬರೂ ಸಚಿವರು ಕಟ್ಟಡದ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾದ ೪ಕೋಟಿ ರೂ ಅನುದಾನವನ್ನು ನೀಡುವ ಭರವಸೆ ನೀಡಿದ್ದಾರೆ. ರೈತರ ಕೃಷಿ ಚಟುವಟಿಕೆಗಳಿಗೆ ಪ್ರೇರಕಶಕ್ತಿಯಾಗಿರುವ ಪಿಎಲ್‌ಡಿ ಬ್ಯಾಂಕ್ ಸತತವಾದ ನಷ್ಠವನ್ನು ಅನುಭವಿಸುತ್ತಿರುವುದರಿಂದ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಸಂಕಲ್ಪ ಮಾಡಿ ಮುಳುಗುತ್ತಿರುವ ಬ್ಯಾಂಕನ್ನು ಸುರಕ್ಷಿತವಾಗಿ ಕಾಪಾಡಿ ದಡಸೇರಿಸುವ ಪ್ರತಿಜ್ಞೆ ಮಾಡಿದ್ದೇವೆ. ಬ್ಯಾಂಕ್ ಆರ್ಥಿಕ ಸಂಕಷ್ಠದಲ್ಲಿರುವುದರಿoದ ಯಾವುದೇ ಭತ್ಯೆಗಳನ್ನು ಪಡೆಯದೇ ನಮ್ಮ ಸ್ವಂತ ಖರ್ಚಿನಲ್ಲಿ ಬ್ಯಾಂಕಿನ ಖರ್ಚುವೆಚ್ಚವನ್ನು ಮಾಡುತ್ತಿದ್ದೇವೆ ಎಂದು ಅಧ್ಯಕ್ಷ ಪಾಪಣ್ಣ ಸಭೆಗೆ ಮಾಹಿತಿ ನೀಡಿದರು.

ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಕೆ.ಎಸ್.ರಾಮೇಗೌಡ, ಶೀಳನೆರೆ ರಮೇಶ್, ಜಯರಾಮು, ತಾಲೂಕು
ವೀರಶೈವ ಮಹಾಸಭಾದ ಅಧ್ಯಕ್ಷ ವಕೀಲ ವಡ್ಡರಹಳ್ಳಿ ಧನಂಜಯ, ಪ್ರಗತಿಪರ ರೈತರಾದ ವೆಂಕಟರಾಮೇಗೌಡ, ರಾಮೇಗೌಡ, ಪ್ರತಿಭಾ ಮಹಿಳಾ ಸಹಕಾರ ಬ್ಯಾಂಕಿನ ಅಧ್ಯಕ್ಷೆ ಮಂಜುಳಾ ಚನ್ನಕೇಶವ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಧನಂಜಯ, ನಿರ್ದೇಶಕರಾದ ಅಗಸರಹಳ್ಳಿ ಗೋವಿಂದರಾಜು, ಏಜಾಸ್‌ಪಾಶ, ರಾಜಾನಾಯಕ, ಕೈಗೋನಹಳ್ಳಿ ಕುಮಾರ್, ಯಮುನಾ.ಹೆಚ್.ಜೆ, ಶಿವಕುಮಾರ್.ಬಿ.ಆರ್, ಶಂಭುಲಿAಗೇಗೌಡ, ಕಮಲಮ್ಮ, ಜಯಶೀಲ.ಸಿ.ಜೆ, ಪುಟ್ಟಸ್ವಾಮಿಗೌಡ, ಕಾಂತರಾಜೇಗೌಡ, ಎನ್.ಕೆ.ಚಂದ್ರೇಗೌಡ, ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕಿ ಎಸ್.ಸಿ.ಶಶಿಕಲಾ, ಮುಖ್ಯ ಲೆಕ್ಕಾಧಿಕಾರಿ ಮುಬೀನ್‌ತಾಜ್, ಟಿ.ಸುಜಾತ, ಕೆ.ಪಾಂಡು, ಕೆ.ಜಿ.ಹರೀಶ, ಕೆ.ಎಸ್.ರೂಪ, ಕೆ.ಎಸ್.ನರಸಿಂಹ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: