May 3, 2024

Bhavana Tv

Its Your Channel

ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಗೃಹ ನಿರ್ಮಾಣ ಸಹಕಾರ ಸಂಘದ ಬ್ಯಾಂಕಿOಗ್ ಶಾಖೆ ಲೋಕಾರ್ಪಣೆ

ಕೆ.ಆರ್.ಪೇಟೆ : ಗ್ರಾಮೀಣ ಪ್ರದೇಶದ ಬಡಜನರು ಹಾಗೂ ಶೋಷಿತ ವರ್ಗಗಳ ಗಿರಿಜನರು, ಪರಿಶಿಷ್ಠಜಾತಿ, ಪರಿಶಿಷ್ಠ ವರ್ಗಗಳ ಜನರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಕೂಡಿಟ್ಟು ಬ್ಯಾಂಕುಗಳಲ್ಲಿ ಉಳಿತಾಯ ಮಾಡಬೇಕು ಎಂದು ದಲಿತ ಮುಖಂಡ ಡಾ.ಬಸ್ತಿರಂಗಪ್ಪ ಹೇಳಿದರು .

ಅವರು ಕೆ.ಆರ್.ಪೇಟೆ ತಾಲ್ಲೂಕು ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಗೃಹ ನಿರ್ಮಾಣ ಸಹಕಾರ ಸಂಘದ ಬ್ಯಾಂಕಿoಗ್ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಶಿಕ್ಷಕರ ಭವನದಲ್ಲಿ ನಡೆದ ಸಂಘದ ೨೦೨೦-೨೧ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆ.ಆರ್.ಪೇಟೆ ತಾಲ್ಲೂಕು ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಬಡಜನರು ಹಾಗೂ ನಿರ್ಗತಿಕ ಪರಿಶಿಷ್ಠಜಾತಿ ಹಾಗೂ ಪರಿಶಿಷ್ಠ ವರ್ಗಗಳ ಜನರಿಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ವಿತರಿಸಲು ಜಮೀನನ್ನು ಖರೀದಿಸಿ ಲೇಔಟ್ ಮಾಡಿಸುವ ದಿಕ್ಕಿನಲ್ಲಿ ಸಂಘದ ಆಡಳಿತ ಮಂಡಳಿಯು ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಸಂಘದ ಶೇರುದಾರರು ಹಾಗೂ ಸದಸ್ಯರು ಜಾಗೃತರಾಗಿ ಸಂಘದ ವತಿಯಿಂದ ಆರಂಭಿಸಿರುವ ಬ್ಯಾಂಕಿAಗ್ ಶಾಖೆಯಲ್ಲಿಯೇ ವ್ಯವಹರಿಸಬೇಕು. ತಮ್ಮ ಸ್ನೇಹಿತರು ಹಾಗೂ ಬಂಧುಗಳು ಉಳಿತಾಯ ಖಾತೆ, ಪಿಗ್ಮಿ ಸೇರಿದಂತೆ ಪಿಕ್ಸೆಡ್ ಡಿಫಾಸಿಟ್ ಮಾಡುವ ಮೂಲಕ ವ್ಯವಹರಿಸಿ ಬ್ಯಾಂಕಿನ ಉನ್ನತಿಗೆ ಕೈಜೋಡಿಸಬೇಕು ಎಂದು ಬಸ್ತಿರಂಗಪ್ಪ ಕರೆ ನೀಡಿದರು.

ಕೆನರಾಬ್ಯಾಂಕಿನ ವಿಶ್ರಾಂತ ಹಿರಿಯ ವ್ಯವಸ್ಥಾಪಕರಾದ ನಾಗಭೂಷಣ್, ಸಹಕಾರ ಸಂಘಗಳ ವಿಶ್ರಾಂತ ಆಡಿಟರ್ ಅಂದಾನಯ್ಯ, ಕಾನೂನು ಸಲಹೆಗಾರ ರವಿಶಂಕರ್, ಸಂಘದ ಕಾರ್ಯದರ್ಶಿ ಚಲುವಯ್ಯ, ಉಪಾಧ್ಯಕ್ಷ ಹೆಚ್.ಪುಟ್ಟರಾಜು, ಕೆ.ನಂಜಪ್ಪ, ಹೆಚ್.ಕೃಷ್ಣ, ರಾಮದಾಸ್, ಪರಶಿವಮೂರ್ತಿ, ಎ.ಎಸ್.ಜಯಣ್ಣ, ಶಿವನಂಜಯ್ಯ, ಎಸ್.ಶಿವರಾಮು, ಮರಿಯಪ್ಪ, ಎಂ.ಕೆ.ಶಿವನAಜಯ್ಯ, ಜೆ.ಬಿ.ನಾಗರಾಜು, ಹೆಚ್.ಆರ್.ಲೋಕೇಶ್ವರಿ ಮತ್ತು ಲತಾಮಣಿ ಸೇರಿದಂತೆ ಸಂಘದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ .

error: