May 4, 2024

Bhavana Tv

Its Your Channel

ಮಹಿಳೆಯರು ತಮ್ಮಲ್ಲಿನ ವೃತ್ತಿಕೌಶಲ್ಯದ ಮೂಲಕ ಆರ್ಥಿಕವಾಗಿ ಸಬಲೀಕರಣವನ್ನು ಸಾಧಿಸಿ ಮುನ್ನಡೆಯಬೇಕು-ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುOಡ

ಕೆ.ಆರ್.ಪೇಟೆ:– ಮಹಿಳೆಯರು ತಮ್ಮಲ್ಲಿನ ವೃತ್ತಿಕೌಶಲ್ಯದ ಮೂಲಕ ಆರ್ಥಿಕವಾಗಿ ಸಬಲೀಕರಣವನ್ನು ಸಾಧಿಸಿ ಮುನ್ನಡೆಯಬೇಕು . ಹೈನುಗಾರಿಕೆ ಸೇರಿದಂತೆ ಗುಡಿಕೈಗಾರಿಕೆಗಳ ಮೂಲಕ ಉಧ್ಯಮಿಗಳಾಗಿ ನೂರಾರು ಜನರಿಗೆ ಉಧ್ಯೋಗ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುoಡ ಕರೆ ನೀಡಿದರು .

ಅವರು ಪಟ್ಟಣದ ಪುರಸಭೆ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಮಸೀದಿ ಬೀದಿಯಲ್ಲಿರುವ ಪ್ರತಿಭ ಮಹಿಳಾ ವಿವಿದೋದ್ಧೇಶ ಸಹಕಾರ ಸಂಘದ ಬ್ಯಾಂಕಿನ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಇದೇ ಸಂದರ್ಭದಲ್ಲಿ ನೂತನವಾಗಿ ಆರಂಭಿಸಿದ ಚಿನ್ನಾಭರಣ ಸಾಲ ವಿಭಾಗದ ಲಾಕರ್ ಅನ್ನು ಲೋಕಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು.
ಮಹಿಳೆಯರು ಇಂದು ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಾ ದೇಶದ ಸಮಗ್ರವಾದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡುತ್ತಿದ್ದಾರೆ. ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ಸರ್ವ ಶ್ರೇಷ್ಠ ಸಾಧನೆಯನ್ನು ಮಾಡಬೇಕು. ತಮ್ಮಲ್ಲಿನ ವೃತ್ತಿಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಹೈನುಗಾರಿಕೆ ಸೇರಿದಂತೆ ಕೋಳಿ ಸಾಕಾಣಿಕೆ, ಟೈಲರಿಂಗ್, ಜಿಗ್‌ಜಾಗ್, ಲೆದರ್ ಬ್ಯಾಗ್ ತಯಾರಿಕೆ, ಬ್ಯೂಟೀಷಿಯನ್, ಮೇಣದ ಬತ್ತಿ, ಗಂಧದಕಡ್ಡಿ ಫೆನಾಯಲ್ ನಂತಹ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಹೆಚ್ಚಿನ ಲಾಭವನ್ನು ಗಳಿಸುವ ಮೂಲಕ ಆರ್ಥಿಕ ಸ್ವಾವಲಂಭನೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದ ಅಧ್ಯಕ್ಷೆ ಮಹಾದೇವಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯುತಾಲೂಕಿಗೆ ವರವಾಗಿ ಬಂದ ನಂತರ ನಮ್ಮ ತಾಲೂಕಿನ ಹೆಣ್ಣು ಮಕ್ಕಳ ಆರ್ಥಿಕ ಸ್ಥಿತಿಗತಿಗಳು ಸಂಪೂರ್ಣವಾಗಿ ಬದಲಾಗಿದೆಯಲ್ಲದೇ ತಾಲೂಕಿನ ಗ್ರಾಮಗಳ ಚಿತ್ರಣವೇ ಬದಲಾವಣೆಯಾಗಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರು ಸೀಮೆ ಹಸುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಪೈಪೋಟಿಯ ಮೇಲೆ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಕ್ಷೀರಕ್ರಾಂತಿಯಾಗಿದ್ದು ದಿನವಹಿ ೫ಲಕ್ಷ ಲೀಟರ್‌ನಷ್ಟು ಉತ್ಪಾದನೆಯಾಗುತ್ತಿದ್ದ ಹಾಲು ಇಂದು ೯ಲಕ್ಷಷ ಲೀಟರ್ ದಾಟಿದೆ ಎಂದು ಅಭಿಮಾನದಿಂದ ಹೇಳಿದ ಅವರು ಮನಸ್ಸಿದ್ದಲ್ಲಿ ಮಾರ್ಗವಿದೆ ಯಾದ್ದರಿಂದ ಸದಾ ಒಳ್ಳೆಯದನ್ನೇ ಆಲೋಚಿಸಬೇಕು. ಸಾಧ್ಯವಾದರೆ ಒಬ್ಬರಿಗೆ ಕೈಲಾದ ಸಹಾಯವನ್ನು ಮಾಡಬೇಕೇ ಹೊರತು ಸಂಕಷ್ಠದಲ್ಲಿರುವ ಬಡಜನರನ್ನು ನೋಡಿ ಅವರ ದುಸ್ಥಿತಿಯನ್ನು ಹೀಯಾಳಿಸಿ ಅಣಕಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮಹಾದೇವಿ ಕೈಮುಗಿದು ಮನವಿ ಮಾಡಿದರು. ಪುರಸಭೆಯ ಹಿರಿಯ ಸದಸ್ಯರಾದ ಹೆಚ್.ಆರ್.ಲೋಕೇಶ್ ಮಾತನಾಡಿ ತಾಲೂಕಿನ ಮಹಿಳಾ
ಹೋರಾಟಗಾರರಾದ ಕೆ.ಮಂಜುಳಾ ಚನ್ನಕೇಶವ ಅವರ ಸಾರಥ್ಯದಲ್ಲಿ ಪ್ರತಿಭಾ ಮಹಿಳಾ ಕೈಗಾರಿಕಾ ವಿವಿದೋದ್ದೇಶ ಸಹಕಾರ ಸಂಘವು ಆರಂಭವಾಗಿ ನೂರಾರು ಬಡಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡಿ ಆರ್ಥಿಕ ಪ್ರಗತಿಗೆ ಹಾಗೂ ಜೀವನದ ಮಾರ್ಗಕ್ಕೆ ದಾರಿದೀಪವಾಗಿದೆ. ಬ್ಯಾಂಕು ಕೋಟ್ಯಾಂತರ ರೂಪಾಯಿ ಠೇವಣಿಯನ್ನು ಹೊಂದಿದ್ದು ಜಿಲ್ಲೆಯ ಹೆಮ್ಮೆಯ ಕೈಗಾರಿಕಾ ಸಂಘದ ಬ್ಯಾಂಕೆoಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಲೋಕೇಶ್ ಹೇಳಿದರು.

ಪುರಸಭೆಯ ಸದಸ್ಯ ಹೆಚ್.ಡಿ.ಅಶೋಕ್ ಮಾತನಾಡಿ ಪುರಸಭೆಯು ಕಳೆದ ೧೫ ವರ್ಷಗಳಿಂದಲೂ ಪಟ್ಟಣದ ವ್ಯಾಪ್ತಿಯಲ್ಲಿ ವಾಸಮಾಡುತ್ತಿರುವ ಬಡಜನರು ಹಾಗೂ ಮಧ್ಯಮ ವರ್ಗದ ಜನರಿಗೆ ಸ್ವಂತ ಸೂರನ್ನು ಹೊಂದಲು ಅನುಕೂಲವಾಗುವಂತೆ ನಿವೇಶನಗಳನ್ನೇ ವಿತರಿಸಿಲ್ಲ. ಹೊಸಹೊಳಲು ಗ್ರಾಮದಲ್ಲಿ ೩೦೦ಕ್ಕೂ ಹೆಚ್ಚಿನ ನಿವೇಶನಗಳು ವಿತರಣೆಯಾಗದೇ ಹಾಗೆಯೇ ಖಾಲಿ ಉಳಿದಿವೆ. ಸದ್ಯದಲ್ಲಿಯೇ ಸಚಿವ ನಾರಾಯಣಗೌಡರ ನೇತೃತ್ವದಲ್ಲಿ ಸಭೆ ಕರೆದು ಅರ್ಹ ಫಲಾನುಭವಿಗಳು ಹಾಗೂ ನಿವೇಶನರಹಿತರಿಗೆ ನಿವೇಶನಗಳನ್ನು
ವಿತರಿಸಲು ಕ್ರಮಕೈಗೊಳ್ಳಲು ಅರ್ಹರನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸುವಂತೆ
ಮನವಿ ಮಾಡುತ್ತಿದ್ದೇವೆ. ನಿವೇಶನ ರಹಿತರ ಬಹು ವರ್ಷಗಳ ಬೇಡಿಕೆಯ ಕನಸು ಸಧ್ಯದಲ್ಲಿಯೇ ನನಸಾಗುವ ಕಾಲಬಂದಿದೆ ಎಂದು ಅಶೋಕ್ ಹೇಳಿದರು.

ಪುರಸಭೆಯ ಮುಖ್ಯಾಧಿಕಾರಿ ಕುಮಾರ್ ಮಾತನಾಡಿ ಪುರಸಭೆಯ ಎಲ್ಲಾ ೨೩ ವಾರ್ಡಗಳಲ್ಲಿಯೂ ನಾಗರೀಕರಿಗೆ ಬೀದಿ ದೀಪಗಳು, ಸ್ವಚ್ಛತೆ, ಕುಡಿಯುವ ನೀರು, ರಸ್ತೆಗಳು ಹಾಗೂ ಚರಂಡಿಗಳ ಅಭಿವೃದ್ಧಿ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧವಾಗಿದೆ. ಆದ್ದರಿಂದ ಶ್ರೀಸಾಮಾನ್ಯರು ಹಾಗೂ ಪಟ್ಟಣದ ನಿವಾಸಿಗಳು ಪುರಸಭೆಗೆ ಪಾವತಿಸಬೇಕಾದ ವಿವಿಧ ಬಾಬ್ತುಗಳ ತೆರಿಗೆಯನ್ನು ಪಾವತಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮಂಜುಳಾ ಚನ್ನಕೇಶವ ಸಂಘದ ಪ್ರಗತಿಗೆ ಶೇರುದಾರರು ಹಾಗೂ ಸಂಘದ ಸದಸ್ಯೆಯರು ಸಂಫೂರ್ಣ ಸಹಕಾರ ನೀಡಿದ್ದಾರೆ ಆದ್ದರಿಂದ ಉತ್ತಮವಾದ ಆಡಳಿತ ನೀಡಲು ಪೂರಕವಾಗಿ ದುಡಿಯುತ್ತಿರುವ ಆಡಳಿತ ಮಂಡಳಿಯ ಸಹಕಾರವನ್ನು ಸ್ಮರಿಸುವುದಾಗಿ
ಹೇಳಿದರು.

ಸಭೆಯಲ್ಲಿ ಪುರಸಭೆಯ ಉಪಾಧ್ಯಕ್ಷೆ ಗಾಯತ್ರಿಸುಬ್ಬಣ್ಣ, ಪುರಸಭೆಯ ಸದಸ್ಯ ಹೆಚ್.ಎನ್.ಪ್ರವೀಣ್, ಸಹಕಾರ ಅಭಿವೃದ್ಧಿ ಅಧಿಕಾರಿ ನಾಗಭೂಷಣ್, ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸಾಕಮ್ಮರಂಗಸ್ವಾಮಿ, ನಿರ್ದೇಶಕರಾದ ಸರಸ್ವತಿ ಗೋವಿಂದೇಗೌಡ, ಗಂಗಮ್ಮ ಮಹದೇವಪ್ಪ,ಪ್ರಭಾವತಿಶ್ರೀನಿವಾಸ್,ಗೌರಮ್ಮಸೋಮಶೇಖರ್, ಲೀಲಾವತಿ ನಾರಾಯಣಗೌಡ, ಶಿವಕುಮಾರಿ ವೆಂಕಟೇಶ್, ಮಂಜುಳಾನAಜಪ್ಪ, ಗೀತಾಂಜಲಿ ಸುರೇಶ್, ಪದ್ಮರಾಜು, ಗಾಯತ್ರಿ ಹನುಮಂತಶೆಟ್ಟಿ, ನಾಗಮಣಿ ನರಸಿಂಹಶೆಟ್ಟಿ ಹಾಗೂ ಬ್ಯಾಂಕಿನ ಕಾನೂನು ಸಲಹೆಗಾರರಾದ ಹೆಚ್.ವಿ.ಆಶಾರಾಜೇಗೌಡ ಸಭೆಯಲ್ಲಿ ಭಾಗವಹಿಸಿದ್ದರು. ಸಂಘದ ಸಿಇಓ ದಾಕ್ಷಾಯಿಣಿ ನಾಗರಾಜು ಸ್ವಾಗತಿಸಿದರು, ಭಾಗ್ಯ ರಂಗಸ್ವಾಮಿ ವಂದಿಸಿದರು. ಆಶಾ ಮತ್ತು ದ್ರಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ವೇದಬ್ರಹ್ಮ ಪ್ರಸನ್ನಯ್ಯ ಅವರು ಪೂಜಾವಿಧಿವಿಧಾನಗಳ ನೇತೃತ್ವ ವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: