May 4, 2024

Bhavana Tv

Its Your Channel

ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ತೀವ್ರ ಅಸಮಧಾನ

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪೌರಕಾರ್ಮಿಕ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಮತ್ತು ಬಾಲಕಿಯ ಕೊಲೆ ಹಾಗೂ ಹರಿಹರಪುರ ಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಹಾಗೂ ಅಸ್ಪೃಶ್ಯತಾ ಆಚರಣಾ ಪ್ರಕರಣಗಳು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆಗಳಾಗಿವೆ . ಈ ಪ್ರಕರಣಗಳಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ ಅವರ ಕರ್ತವ್ಯಲೋಪವು ಎದ್ದುಕಾಣುತ್ತಿದೆ . ದೌರ್ಜನ್ಯಕ್ಕೊಳಗಾಗಿರುವ ದಲಿತ ಜನರ ವಿರುದ್ಧವೇ ಸವರ್ಣೀಯರು ನೀಡಿರುವ ಪ್ರತಿದೂರನ್ನು ದಾಖಲಿಸಲಾಗಿದೆ. ಇದು ನಮ್ಮ ಸಮಾಜದ ದುರಂತ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ತೀವ್ರ ಅಸಮಧಾನ ವ್ಯಕ್ತಪಡಿಸಿದರು .

ಅವರು ಇಂದು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಪೋಲಿಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ್ ಅವರ ಕರ್ತವ್ಯಲೋಪವನ್ನು ತೀವ್ರವಾಗಿ ಖಂಡಿಸಿ ಬೂಕನಕೆರೆ ಪ್ರಕರಣದಲ್ಲಿ ಮೊಮ್ಮಗಳ ವಯಸ್ಸಿನ ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ೫೨ ವರ್ಷ ವಯಸ್ಸಿನ ಆರೋಪಿ ಪರಮೇಶನಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು ಅಂತೆಯೇ ಹರಿಹರಪುರ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿ ದಲಿತ ಮಹಿಳೆಯರು ಸೇರಿದಂತೆ ಯುವಜನರು ಹಾಗೂ ವಯೋವೃದ್ಧರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಸವರ್ಣಿಯ ಆರೋಪಿಗಳನ್ನು ಬಂಧಿಸಿ ಅಮಾಯಕರಾಗಿರುವ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಬೂಕನಕೆರೆ ಗ್ರಾಮದ ಪೌರಕಾರ್ಮಿಕ ಮಹಿಳೆ ಮಹಾದೇವಿ ಅವರ ಪುತ್ರಿ ೧೫ ವರ್ಷ ವಯಸ್ಸಿನ ಪವಿತ್ರಳ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿ ಮಾಡಿ ವಿಷಯವು ಸಮಾಜಕ್ಕೆ ಗೊತ್ತಾಗುವ ಭಯದಿಂದ ನೇಣುಬಿಗಿದು ಕೊಲೆ ಮಾಡಿರುವ ಆರೋಪಿ ಪರಮೇಶನಿಗೆ ಸರ್ಕಾರವು ಉಗ್ರವಾದ ಶಿಕ್ಷೆಯನ್ನು ನೀಡುವ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯು ಸಂತ್ರಸ್ತ ಮೃತ ಬಾಲಕಿಯ ಕುಟುಂಬಕ್ಕೆ ಸ್ವಂತ ಮನೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಹರಿಹರಪುರ ಗ್ರಾಮದಲ್ಲಿ ನಡೆದಿರುವ ಅಸ್ಪೃಶ್ಯತಾ ಆಚರಣೆ ಹಾಗೂ ದಲಿತರ ಮೇಲೆ ನಡೆದಿರುವ ದಬ್ಬಾಳಿಕೆ ದೌರ್ಜನ್ಯ ಪ್ರಕರಣದ ವಿರುದ್ಧ ಉಗ್ರವಾದ ಹೋರಾಟವನ್ನು ನಡೆಸಲು ಡಿಸೆಂಬರ್ ೨೭ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಕೃಷ್ಣರಾಜಪೇಟೆ ಪಟ್ಟಣದ ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ತಾಲೂಕಿನ ಪ್ರಗತಿಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಸಮಾನ
ಮನಸ್ಕರ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ತಾಲೂಕಿನ ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವ ಜೊತೆಗೆ ಮುಂದೆ ನಡೆಯುವ ಬೃಹತ್ ಪ್ರತಿಭಟನೆಗೆ ಶಕ್ತಿಯನ್ನು ತುಂಬಬೇಕು ಎಂದು ಮನವಿ ಮಾಡಿದರು.

ಹರಿಹರಪುರ ಗ್ರಾಮದಲ್ಲಿ ಡಿಸೆಂಬರ್ ೧೬ರಂದು ಹನುಮ ಜಯಂತಿಯ ದಿನದಂದು ಅಮಾಯಕರಾದ ದಲಿತ ಮಹಿಳೆಯರು ಹಾಗೂ ದಲಿತ ಯುವಕರು ಹನುಮಜಯಂತಿ ಸಮಾರಂಭದಲ್ಲಿ ಭಾಗವಹಿಸಿದ್ದೇ ತಪ್ಪೆಂದು ಭಾವಿಸಿರುವ ಸವರ್ಣೀಯ ಜನರು ಹೊಲೆಯರು ನೀವ್ಯಾಕೆ ಜಾತ್ರೆಗೆ ಬಂದಿದ್ದೀರಿ ದೇವಸ್ಥಾನದಲ್ಲಿ ನಿಮಗೇನು ಕೆಲಸ ಎಂದು ಬಾಯಿಗೆ ಬಂದAತೆ ಬಯ್ದು ದಲಿತರ ಮೇಲೆ ತೀವ್ರವಾಗಿ ಮಾರಣಾಂತಿಕ ಹಲ್ಲೆ ನಡೆಸಿ, ಮನೆ ಮನೆಗೆ ನುಗ್ಗಿ ದಲಿತ ಯುವಕರನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಬಗ್ಗೆ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ ದೂರನ್ನು ನೀಡಲು ಹೋದರೆ ದೂರನ್ನು ಸ್ವೀಕರಿಸದ ಗ್ರಾಮಾಂತರ ಪೋಲಿಸರು ಎರಡು ದಿನ ಠಾಣೆಗೆ ಅಲೆದಾಡಿಸಿ ಸವರ್ಣೀಯರ ಪರವಾಗಿ ವಕಾಲತ್ತು ವಹಿಸಿ ಮಾತನಾಡಿದ್ದಾರೆ. ನಂತರ ಯುವಕರು ಮಂಡ್ಯದಲ್ಲಿ ಜಿಲ್ಲಾ ಪೋಲಿಸಗ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿಕೊಟ್ಟ ನಂತರ ಎಸ್‌ಪಿ ಅವರು ದೂರನ್ನು ದಾಖಲಿಸುವಂತೆ ಮೌಖಿಕವಾಗಿ ತಿಳಿಸಿದ ನಂತರ ೧೮ರಂದು ೨೮ ಜನರ ವಿರುದ್ಧ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಿ ಗ್ರಾಮದಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡದೇ ಮತ್ತೆ ೧೯ರಂದು ಸವರ್ಣೀಯರು ನೀಡಿದ ದೂರನ್ನು ಆದರಿಸಿ ೧೮ ದಲಿತ ಯುವಕರ ಮೇಲೆ ಪ್ರತಿದೂರು ದಾಖಲಿಸಿದ್ದಾರೆ. ದಲಿತರು ಸವರ್ಣೀಯರು ವಾಸಿಸುವ ಕೇರಿಗಳಿಗೆ ಹೋಗಿ ಮನೆಗೆ ನುಗ್ಗಿ ಗಲಾಟೆ ಮಾಡಲು ಸಾಧ್ಯವೇ ಸುಳ್ಳು ಪ್ರತಿದೂರನ್ನು ದಾಖಲಿಸಿರುವ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ ಅವರು ದಲಿತರ ಜೀವನದ ಜೊತೆಯಲ್ಲಿ ಚೆಲ್ಲಾಟವಾಡಿ ಆರೋಪಿಗಳನ್ನು ರಾಜಾರೋಷವಾಗಿ ಗ್ರಾಮದಲ್ಲಿ ಓಡಾಡಿಕೊಂಡಿರಲು ಬಿಟ್ಟು ಗ್ರಾಮದಲ್ಲಿ ಶಾಂತಿ ಸಮಿತಿಯ ಸಭೆಯನ್ನು ಕರೆದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಗುರುಪ್ರಸಾದ್ ಸವರ್ಣಿಯರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ದರ್ಶನ್ ಮತ್ತು ಇತರೆ ಎಂಟು ಯುವಕರು ರೌಡಿ ಶೀಟರ್‌ಗಳು ಎಂದು ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಹ.ತಿ.ಶ್ರೀನಿವಾಸ್ ಎಂಬ ವ್ಯಕ್ತಿಯೇ ಗ್ರಾಮದಲ್ಲಿ ಅಶಾಂತಿ ನೆಲೆಸಲು ಕಾರಣವಾಗಿದ್ದು ಆತನೇ
ನಿಜವಾದ ರೌಢಿಶೀಟರ್ ಆಗಿದ್ದಾನೆ. ಗ್ರಾಮಾಂತರ ಪೋಲಿಸರು ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಸವರ್ಣೀಯ ಜನರನ್ನು ಬಂಧಿಸಿ ನಂತರ ಶಾಂತಿ ಸಮಿತಿಯ ಸಭೆಯನ್ನು ಮಾಡಬೇಕು. ಬೂದಿಮುಚ್ಚಿದ ಕೆಂಡದAತಹ ವಾತಾವರಣವಿರುವ ಹರಿಹರಪುರ ಗ್ರಾಮದಲ್ಲಿ ದಲಿತರಿಗೆ ಹಾಗೂ
ದಲಿತ ಕೇರಿಗೆ ರಕ್ಷಣೆ ನೀಡುವ ಕೆಲಸವನ್ನು ಪೋಲಿಸರು ಮೊದಲು ಮಾಡಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ಏನೇ ಅನಾಹುತಗಳು ನಡೆದರೆ ಪೋಲಿಸರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ ಗುರುಪ್ರಸಾದ್ ನಾನು ಹರಿಹರಪುರ ಗ್ರಾಮಕ್ಕೆ ಖುದ್ದಾಗಿ ಹೋಗಿ ವಾಸ್ತವತೆಯನ್ನು ತಿಳಿದುಬಂದಿದ್ದೇನೆ ಎಂದು ಹೇಳಿದರು.

ವಿಫಲವಾದ ಶಾಂತಿಸಮಿತಿ ಸಭೆ : ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನ ಮಾಡಲು ತಹಶೀಲ್ದಾರ್ ಶಿವಮೂರ್ತಿ ಅವರ ನೇತೃತ್ವದಲ್ಲಿ ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ ಅವರು ಕರೆದಿದ್ದ ಶಾಂತಿಸಮಿತಿ ಸಭೆಗೆ ದಲಿತ ಮುಖಂಡರು ಹಾಗೂ ದಲಿತ ಬಂಧುಗಳು ಆಗಮಿಸದ ಹಿನ್ನೆಲೆಯಲ್ಲಿ ಶಾಂತಿ ಸಮಿತಿ ಸಭೆಯು ರದ್ದಾಯಿತು.
ಹರಿಹರಪುರ ಗ್ರಾಮದ ಮುಖಂಡರಾದ ನಿಂಗೇಗೌಡ, ಸುಬ್ಬೇಗೌಡ, ಬಲದೇವ್, ಜಯಕುಮಾರ್ ಮತ್ತು ರಾಮೇಗೌಡ ಹರಿಹರಪುರ ಗ್ರಾಮದಲ್ಲಿ ದಲಿತರು ಮತ್ತು ಮೇಲ್ವರ್ಗದ ಜನರು ಅಣ್ಣತಮ್ಮಂದಿರOತೆ ಪ್ರೀತಿ ವಿಶ್ವಾಸಗಳಿಂದ ಜೀವನ ನಡೆಸುತ್ತಿದ್ದೇವೆ. ಗ್ರಾಮದಲ್ಲಿ ಹನುಮಜಯಂತಿಯ ಪೂಜಾ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿಲ್ಲ. ದಲಿತ ಯುವಕ ದರ್ಶನ್ ಹೆಣ್ಣು ಮಗಳೊಬ್ಬಳನ್ನು ಚುಡಾಯಿಸಿದ್ದರಿಂದ ಯುವಕರು ಸಣ್ಣದಾಗಿ ಗದ್ದಲ ಮಾಡಿ ಕೊಂಡಿದ್ದಾರೆ. ಸಣ್ಣದಾಗಿ ನಡೆದ ಗಲಾಟೆಗೆ ಕೋಮುದಳ್ಳುರಿಯ ರೂಪವನ್ನು ನೀಡಲು ಗ್ರಾಮದ ಕೆಲವು ದಲಿತ ಯುವಕರು ಮುಂದಾಗುವ ಮೂಲಕ ಗ್ರಾಮದ ನೆಮ್ಮದಿಯನ್ನು ಹಾಳು ಮಾಡಲು ಹೊರಟಿದ್ದಾರೆ. ದಲಿತ ಕುಟುಂಬಗಳ ಮೇಲೆ ಯಾವುದೇ ಹಲ್ಲೆಯಾಗಲೀ ದೌರ್ಜನ್ಯವಾಗಲೀ ನಡೆದಿಲ್ಲ. ಆದ್ದರಿಂದ ಕ್ಷುಲ್ಲಕ ಕಾರಣಕ್ಕಾಗಿ ನಡೆದಿರುವ ಘಟನೆಯನ್ನು ದೊಡ್ಡದು ಮಾಡದೇ ದಲಿತ ಯುವಕರು ಹಾಗೂ ಸವರ್ಣೀಯ ಯುವಕರನ್ನು ಒಗ್ಗೂಡಿಸಿ ಮನಸ್ಸುಗಳನ್ನು ತಿಳಿಗೊಳಿಸಿ ಗ್ರಾಮದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡುವ ಕೆಲಸವನ್ನು ತಾಲೂಕು ಆಡಳಿತ ಹಾಗೂ ಪೋಲಿಸರು ಮಾಡಬೇಕು. ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಸಧ್ಯದಲ್ಲಿಯೇ ಗ್ರಾಮದಲ್ಲಿ ಶಾಂತಿ ಸಮಿತಿ ಸಭೆಯನ್ನು ಕರೆದು ಗ್ರಾಮದ ಅಶಾಂತಿಯನ್ನು ದೂರಮಾಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಸೋಮನಹಳ್ಳಿ ಅಂದಾನಿ, ಜಿಲ್ಲಾ ಛಲವಾಧಿ ಮಹಾಸಭಾದ ಅಧ್ಯಕ್ಷ ಮಾಂಬಳ್ಳಿ ಜಯರಾಂ, ಡಿಎಸ್‌ಎಸ್ ರಾಜ್ಯ ಉಸ್ತುವಾರಿ ಸಂಚಾಲಕ ಅಂಕಪ್ಪ, ದ.ಸಂ.ಸ’ದ ಪಾಂಡವಪುರ ಉಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ, ಕತ್ತರಘಟ್ಟ ರಾಜೇಶ್, ಉಪವಿಭಾಗೀಯ ಸಂಚಾಲಕರಾದ ನಾಟನಹಳ್ಳಿ ಸೋಮರಾಜು, ರವಿಚಂದ್ರ, ಗಂಜಾA ಮೋಹನ್, ತಾಲೂಕು ಮಾದಿಗ ದಂಡೋರ ಅಧ್ಯಕ್ಷ ಹೊಸಹೊಳಲು ದೇವರಾಜು ಮತ್ತಿತರರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ . ಮಂಡ್ಯ

error: