May 18, 2024

Bhavana Tv

Its Your Channel

ದಲಿತ ಸಂಘರ್ಷ ಸಮಿತಿಯ ಎಂ.ಬಿ.ಶ್ರೀನಿವಾಸ್ ಬಣದಿಂದ ಕೆ.ಆರ್.ಪೇಟೆ ಪಟ್ಟಣದಲ್ಲಿ ಪ್ರತಿಭಟನೆ

ದಲಿತ ಸಂಘರ್ಷ ಸಮಿತಿಯ ಎಂ.ಬಿ.ಶ್ರೀನಿವಾಸ್ ಬಣದಿಂದ ಕೆ.ಆರ್.ಪೇಟೆ ಪಟ್ಟಣದಲ್ಲಿ ಪ್ರತಿಭಟನೆ. ತಹಶೀಲ್ದಾರ್ ಎಂ.ವಿ.ರೂಪ ಅವರಿಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಸಲ್ಲಿಸಿ ಒತ್ತಾಯಿಸಿದರು

ಕೆ.ಆರ್.ಪೇಟೆ :- ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಂ.ಬಿ.ಶ್ರೀನಿವಾಸ್ ಬಣದ ವತಿಯಿಂದ ಹರಿಹರಪುರ ಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಹಾಗೂ ಬೂಕನಕೆರೆಯಲ್ಲಿ ಪೌರಕಾರ್ಮಿಕ ಬಾಲಕಿ ಪವಿತ್ರಳ ಕೊಲೆ ಪ್ರಕರಣದ ನಿಸ್ಪಕ್ಚಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆಹಾಕಿ ತಹಶೀಲ್ದಾರ್ ಎಂ.ವಿ.ರೂಪ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಆಗ್ರಹಿಸಿದರು..

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ತೆಂಡೇಕೆರೆ ನಿಂಗಯ್ಯ, ಚಿಕ್ಕಗಾಡಿಗನಹಳ್ಳಿ ಪರಮೇಶ್, ಸಂತೋಷ್ ಕುಮಾರ್, ನಾಗರಾಜು, ಎಂ.ವಿ.ಕೃಷ್ಣ, ಸೋಮರಾಜು, ಜವರಪ್ಪ, ಧರ್ಮ ಮತ್ತಿತರರ ಮುಖಂಡರ ನೇತೃತ್ವದಲ್ಲಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹರಿಹರಪುರ ಗ್ರಾಮದಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ಸವರ್ಣೀಯ ಜನರು ಅಸ್ಪೃಶ್ಯತೆ ಆಚರಣೆ ಮಾಡಿದ್ದಲ್ಲದೇ ದಲಿತ ಯುವಕರ ಮೇಲೆ ದಬ್ಬಾಳಿಕೆ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದಲಿತರಿಗೆ ರಕ್ಷಣೆ ಸಿಗಬೇಕು ಎಂದು ಸಂತೋಷ್ ಕುಮಾರ್ ಆಗ್ರಹಿಸಿದರು..

ಚಿಕ್ಕಗಾಡಿಗನಹಳ್ಳಿ ಪರಮೇಶ್ ಮಾತನಾಡಿ ಬೂಕನಕೆರೆ ಗ್ರಾಮದಲ್ಲಿ ಪೌರ ಕಾರ್ಮಿಕ ಮಹಿಳೆ ಮಹಾದೇವಿ ಅವರ ಪುತ್ರಿ 15 ವರ್ಷದ ಪವಿತ್ರಳ ಮೇಲೆ 52 ವರ್ಷದ ಪರಮೇಶ್ ಎಂಬ ಸವರ್ಣೀಯ ವ್ಯಕ್ತಿ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ್ದಲ್ಲದೇ ಬಾಲಕಿಯನ್ನು ನೇಣಿಗೆ ಹಾಕಿ ಕೊಲೆ ಮಾಡಿದ್ದಾರೆ. ಅತ್ಯಾಚಾರ ಆರೋಪಿ ಪರಮೇಶ್ ನ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ಪೌರಕಾರ್ಮಿಕ ಕುಟುಂಬಕ್ಕೆ ಮೂಲಭೂತ ಸೌಲಭ್ಯಗಳನ್ನು ತಾಲ್ಲೂಕು ಆಡಳಿತವು ದೊರಕಿಸಿಕೊಡಬೇಕು. ತಾಲ್ಲೂಕಿನಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಆಚರಣೆಯಂತಹ ಹೀನಕೃತ್ಯವನ್ನು ತಪ್ಪಿಸಬೇಕು. ಸಮಾಜದ ಶಾಂತಿಯನ್ನು ಹಾಳುಮಾಡುವ ಕಿಡಿಗೇಡಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಪರಮೇಶ್ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ ತಾಲ್ಲೂಕು ಆಡಳಿತವು ದಲಿತರ ಯೋಗಕ್ಷೇಮ ಕಾಪಾಡಲು ಬದ್ಧವಾಗಿದೆ. ಇಂದಿನ ನಾಗರಿಕ ಸಮಾಜದಲ್ಲಿಯೂ ಅಸ್ಪೃಶ್ಯತೆ ಆಚರಿಸಿ ದಲಿತರ ಮೇಲೆ ದಬ್ಬಾಳಿಕೆ ನಡೆಸುವ ಕಿಡಿಗೇಡಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: