May 18, 2024

Bhavana Tv

Its Your Channel

ಕಿಕ್ಕೇರಿ ಪೋಲಿಸರ ಬಿ’ ವರದಿಯನ್ನು ರದ್ದುಪಡಿಸಿ ಆರೋಪಿಗಳ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ

ಕೃಷ್ಣರಾಜಪೇಟೆ. ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ತನ್ನ ಸ್ವಂತ ಸಹೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬoಧಿಸಿದoತೆ ಕಿಕ್ಕೇರಿ ಪೋಲಿಸರು ನೀಡಿದ್ದ ಬಿ” ವರದಿಯನ್ನು ರದ್ದುಪಡಿಸಿರುವ ಕೆ.ಆರ್.ಪೇಟೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವು ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿದೆ.

ನಾಡಿನ ಖ್ಯಾತ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ಮತ್ತು ಅವರ ಧರ್ಮಪತ್ನಿ ಲತಾಕೃಷ್ಣಮೂರ್ತಿ ಅವರಿಗೆ ಸಿವಿಲ್ ನ್ಯಾಯಾಲಯವು ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿದೆ,
ಕಿಕ್ಕೇರಿ ಗ್ರಾಮದಲ್ಲಿ ವಾಸವಾಗಿರುವ ಅರ್ಚಕ ವೃತ್ತಿಯನ್ನು ನಡೆಸುತ್ತಿರುವ ರಂಗರಾಜು ಅವರಿಂದ ಅವರ ಸಹೋದರರಾದ ಕಿಕ್ಕೇರಿ ಕೃಷ್ಣಮೂರ್ತಿ 5 ಲಕ್ಷರೂ ಸಾಲವನ್ನು ಪಡೆದುಕೊಂಡಿದ್ದು ತನ್ನಿಂದ ಪಡೆದ ಸಾಲದ ಹಣವನ್ನು ಹಿಂದಿರುಗಿಸುವAತೆ ರಂಗರಾಜು ಕೇಳಿದ್ದರಿಂದ ಆಕ್ರೋಶಗೊಂಡಿದ್ದ ಕಿಕ್ಕೇರಿಕೃಷ್ಣಮೂರ್ತಿ ತನ್ನ ಪತ್ನಿ ಲತಾ ಅವರೊಡಗೂಡಿಕೊಂಡು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಈ ಘಟನೆಯ ಸಂಬAಧವಾಗಿ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ರಂಗರಾಜು ದೂರನ್ನು ದಾಖಲಿಸಿದ್ದರು. ರಾಜಕೀಯವಾಗಿ ಪ್ರಭಾವಿಯಾಗಿರುವ ಕಿಕ್ಕೇರಿಕೃಷ್ಣಮೂರ್ತಿ ಪೋಲಿಸರ ಮೇಲೆ ಪ್ರಭಾವ ಬೀರಿ ಘಟನೆಯ ಬಗ್ಗೆ ನ್ಯಾಯಾಲಯಕ್ಕೆ ಬಿ’ ರಿಪೋರ್ಟ್ ಸಲ್ಲಿಕೆಯಾಗುವಂತೆ ನೋಡಿಕೊಂಡು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಈ ಬಗ್ಗೆ ಕೆ.ಆರ್.ಪೇಟೆ ಪಟ್ಟಣದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಾಕ್ಷಾಧಾರಗಳನ್ನು ಹಾಜರುಪಡಿಸಿದ್ದ
ರಂಗರಾಜು ಘಟನೆ ನಡೆದಿರುವುದನ್ನು ಸತ್ಯವೆಂದು ಸಾಭೀತುಪಡಿಸಿದ್ದರು. ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಕಿಕ್ಕೇರಿ ಪೋಲಿಸರು ಸಲ್ಲಿಸಿದ್ದ ಬಿ’ ವರದಿಯನ್ನು ವಜಾಗೊಳಿಸಿ ರದ್ದುಪಡಿಸಿದ್ದು ತನ್ನ ಸ್ವಂತ ಸಹೋದರನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಕಿಕ್ಕೇರಿ ಕೃಷ್ಣಮೂರ್ತಿ ದಂಪತಿಗಳಿಗೆ ನೋಟೀಸ್ ನೀಡುವಂತೆ ಹಾಗೂ ನಿಗಧಿತ ದಿನದಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಘಟನೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕಿಕ್ಕೇರಿಕೃಷ್ಣಮೂರ್ತಿ ಖಾಸಾ ಸಹೋದರರಾದ ಅರ್ಚಕ ರಂಗರಾಜು ನಾನು ನನ್ನ ಸಹೋದರನಿಗೆ ನೀಡಿದ್ದ ಹಣವನ್ನು ಹಿಂದಿರುಗಿಸುವAತೆ ಕೇಳಿದ್ದಕ್ಕೆ ನನ್ನನ್ನು ವಾಚಾಮಗೋಚರವಾಗಿ ನಿಂಧಿಸಿ ಹಲ್ಲೆ ನಡೆಸಿದ್ದರು. ಬಡತನದ ಬೇಗೆಯಲ್ಲಿ ನೊಂದಿರುವ ನನಗೆ ಹಾಗೂ ನನ್ನ ಕುಟುಂಬಕ್ಕೆ ಸಹಾಯ ಮಾಡುವುದು ಬೇಡ. ಪ್ರಸ್ತುತ ದೇವರ ದಯೆಯಿಂದ ಅನುಕೂಲಸ್ಥನಾಗಿದ್ದು ಆರ್ಥಿಕವಾಗಿ ಸ್ಥಿತಿವಂತನಾಗಿರುವ ನನ್ನ ಸಹೋದರ ನನಗೆ ನೀಡಬೇಕಾದ ಹಣವನ್ನು ನೀಡದೇ ನನ್ನ
ಮೇಲೆ ಗೂಂಡಾಗಿರಿ ನಡೆಸಿದ್ದಲ್ಲದೇ ನಾನು ನೀಡಿದ್ದ ಪೋಲಿಸರಿಗೆ ನೀಡಿದ್ದ ದೂರನ್ನೇ ಇಲ್ಲದಂತಾಗಿ
ಮಾಡಿಸಿ ನ್ಯಾಯಾಲಯಕ್ಕೆ ಏನೂ ನಡೆದಿಲ್ಲ, ಯಾರ ಮೇಲೂ ಹಲ್ಲೆಯಾಗಿಲ್ಲವೆಂದು ಬಿ” ರಿಪೋರ್ಟ್ ಹಾಕಿಸಿದ್ದ ಆದರೆ ನನಗೆ ನ್ಯಾಯಾಲಯವು ರಕ್ಷಣೆ ನೀಡಿದೆ. ಸಂಕಷ್ಠದಲ್ಲಿ ನೊಂದಿರುವ
ನನಗೆ ನ್ಯಾಯಾಲಯದಿಂದ ನ್ಯಾಯ ದೊರೆಯುವ ವಿಶ್ವಾಸವಿದೆ. ಇಂತಹ ತಮ್ಮನನ್ನು ಭಗವಂತ ಯಾರಿಗೂ ಕೊಡೋದು ಬೇಡಪ್ಪ..ಬೇಡ. ಭಗವಂತ ಎಂದು ರಂಗರಾಜು ಕೈಮುಗಿದು ಅವಲತ್ತುಕೊಂಡರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: