May 3, 2024

Bhavana Tv

Its Your Channel

ಒಳಚರಂಡಿ ಯೋಜನೆಯನ್ನು ಶೀಘ್ರವಾಗಿ ಸಂಪೂರ್ಣಗೊಳಿಸಿ ಪಟ್ಟಣದ ಜನತೆಯ ಸೇವೆಗೆ ಸಮರ್ಪಿಸಲು ಎಂಜಿನಿಯರ್ ಜಯಕುಮಾರ್ ರವರಿಗೆ ನಿರ್ದೇಶನ ನೀಡಿದ ಸಚಿವ ಡಾ.ನಾರಾಯಣಗೌಡ

ಕೆ.ಆರ್.ಪೇಟೆ ಪುರಸಭೆಯ ಒಳಚರಂಡಿ ಯೋಜನೆಯನ್ನು ಶೀಘ್ರವಾಗಿ ಸಂಪೂರ್ಣಗೊಳಿಸಿ ಪಟ್ಟಣದ ಜನತೆಯ ಸೇವೆಗೆ ಸಮರ್ಪಿಸಲು ಮಂಡ್ಯ ಜಿಲ್ಲೆಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಜಯಕುಮಾರ್ ಅವರಿಗೆ ನಿರ್ದೇಶನ ನೀಡಿದ ಸಚಿವ ಡಾ.ನಾರಾಯಣಗೌಡ. ಜನತೆಯ ಸಂತಸ..15ವರ್ಷಗಳಿAದ ನೆನಗುದಿಗೆ ಬಿದ್ದಿದ್ದ ಯೋಜನೆಗೆ ಗ್ರಹಣ ಬಿಡಿಸಿದ ಸಚಿವರು..

ನೆನಗುದಿಗೆ ಬಿದ್ದಿರುವ ಕೆ.ಆರ್.ಪೇಟೆ ಪುರಸಭೆಯ ಒಳಚರಂಡಿ ಯೋಜನೆಯನ್ನು ಶೀಘ್ರವೇ ಲೋಕಾರ್ಪಣೆಗೊಳಿಸಲು ಸಚಿವ ನಾರಾಯಣಗೌಡ ಅವರೊಂದಿಗೆ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಮಂಡ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಕುಮಾರ್ ಸಮಾಲೋಚನೆ ನಡೆಸಿದರು..

ಕೃಷ್ಣರಾಜಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವೆಟ್ ವೆಲ್ ನಿರ್ಮಿಸಲು ಸೂಕ್ತವಾದ ಜಾಗವನ್ನು ಒದಗಿಸಿಕೊಡಲು ತಹಶೀಲ್ದಾರ್ ಎಂ.ವಿ.ರೂಪ ಮತ್ತು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಅವರಿಗೆ ನಿರ್ದೇಶನ ನೀಡಿದ ಸಚಿವ ಡಾ.ನಾರಾಯಣಗೌಡ

ಕಳೆದ 15 ವರ್ಷಗಳ ಹಿಂದೆ ಮಾಜಿ ಸಚಿವರಾದ ವರ್ತೂರು ಪ್ರಕಾಶ್ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದಾಗ 12.5ಕೋಟಿ ವೆಚ್ಚದಲ್ಲಿ ಆರಂಭವಾದ ಒಳಚರಂಡಿ ಯೋಜನೆಯ ಕಾಮಗಾರಿಯು ಇಂದು 22.26ಕೋಟಿ ವೆಚ್ಚಕ್ಕೆ ತಲುಪಿದೆ. ಶೇ.80 ರಷ್ಟು ಕಾಮಗಾರಿಯನ್ನು ಸಂಪೂರ್ಣಗೊಳಿಸಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುರಾಜ್ ನೇತೃತ್ವದ ಅಧಿಕಾರಿಗಳ ತಂಡವನ್ನು ಪ್ರಶಂಸಿಸಿದ ಸಚಿವ ನಾರಾಯಣಗೌಡ ಪಟ್ಟಣದ ಜನತೆಯ ಬಹು ದಿನಗಳ ಬೇಡಿಕೆಯಾಗಿರುವ ಒಳಚರಂಡಿ ಯೋಜನೆಯನ್ನು ಇನ್ನಾರು ತಿಂಗಳ ಒಳಗೆ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಬೇಕು.

ಪಟ್ಟಣದ ಹೊರವಲಯದ ಮತಿಘಟ್ಟ ಚಾಮಿಕೊಪ್ಪಲು ಸಮೀಪದ ನಿರ್ಜನ ಅರಣ್ಯ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಸಜ್ಜುಗೊಳಿಸಿ, ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವ ಘಟಕವನ್ನು ಆರಂಬಿಸುವAತೆ ಸೂಚನೆ ನೀಡಿದ ಸಚಿವರು ಪರಿಸರ ಸ್ನೇಹಿಯಾಗುವಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ಒಳಚರಂಡಿ ಯೋಜನೆಯು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲು ಅನುಕೂಲವಾಗುವಂತೆ ಉಳಿದುರುವ ಬಾಕಿ ಕೆಲಸಗಳನ್ನು ಮುಗಿಸುವಂತೆ ಪುರಸಭೆ ಮುಖ್ಯಾಧಿಕಾರಿ ಕುಮಾರ್ ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಜಯಕುಮಾರ್ ಅವರಿಗೆ ಸಚಿವ ನಾರಾಯಣಗೌಡ ನಿರ್ದೇಶನ ನೀಡಿದರು..

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಡಿ.ಪ್ರೇಮಕುಮಾರ್, ಗಿರೀಶ್, ಕೆ.ಆರ್.ನೀಲಕಂಠ, ಡಾ.ಕೆ.ಎಸ್.ರಾಜೇಶ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ, ಸಹಾಯಕ ಎಂಜಿನಿಯರ್ ಮಧುಸೂದನ್, ಹಿರಿಯ ಆರೋಗ್ಯಾಧಿಕಾರಿಗಳಾದ ಅಶೋಕ್, ನರಸಿಂಹಶೆಟ್ಟಿ, ಮುಖಂಡರಾದ ಮಿತ್ರಗಿರೀಶ್, ನಂಜುAಡ, ಕಾರಿಗನಹಳ್ಳಿ ಕುಮಾರ್, ಬಸ್ತಿರಂಗಪ್ಪ, ಹೊಸಹೊಳಲು ದೇವರಾಜು, ಮೂಡನಹಳ್ಳಿ ಶಿವನಂಜಯ್ಯ, ಮಾಂಬಳ್ಳಿ ಜಯರಾಂ, ಸಚಿವರ ಆಪ್ತಸಹಾಯಕರಾದ ಕಿಕ್ಕೇರಿಕುಮಾರ್, ಸಾರಂಗಿ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: