May 4, 2024

Bhavana Tv

Its Your Channel

ಭೂವರಹನಾಥ ಸ್ವಾಮಿಯ ವರಹಾ ಜಯಂತಿಯ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ವರಹಾ ಜಯಂತಿ ಆಚರಣೆ

ಕೃಷ್ಣರಾಜಪೇಟೆ ತಾಲ್ಲೂಕಿನ ಭೂವರಹನಾಥ ಕಲ್ಲಹಳ್ಳಿಯ ಲಕ್ಷ್ಮೀ ಸಮೇತ ಭೂವರಹನಾಥ ಸ್ವಾಮಿಗೆ ವರಹಾ ಜಯಂತಿಯ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ವರಹಾ ಜಯಂತಿ ಆಚರಣೆ .. ಸಾವಿರಾರು ಭಕ್ತರು ವರಹಾ ಜಯಂತಿಯ ಸಂಭ್ರಮದಲ್ಲಿ ಭಾಗಿ.ವಿಶೇಷವಾದ ಅಭಿಷೇಕ ಹಾಗೂ ಪುಷ್ಪಾಭಿಷೇಕ ಕಂಡು ಪುಳಕಿತರಾದ ಭಕ್ತರು .

ದೇಶದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ 17 ಅಡಿ ಎತ್ತರದ ಬೃಹತ್ ವರಹನಾಥಸ್ವಾಮಿಯ ಮೂರ್ತಿಗೆ ಪವಿತ್ರ ಗಂಗಾಜಲ, 01 ಸಾವಿರ ಲೀಟರ್ ಹಾಲು, 500ಲೀಟರ್ ಎಳನೀರು, 500ಲೀ ಕಬ್ಬಿನ ಹಾಲು, ಹಸುವಿನ ತುಪ್ಪ, ಜೇನುತುಪ್ಪ, ಸುಗಂಧ ದ್ರವ್ಯಗಳಲ್ಲಿ ವಿಶೇಷವಾಗಿ ಅಭಿಷೇಕ ಮಾಡಿ ಅರಿಶಿನ ಮತ್ತು ಶ್ರೀ ಗಂಧದಿAದ ಅಲಂಕರಿಸಿ ಮಲ್ಲಿಗೆ, ಸಂಪಿಗೆ, ಕನಕಾಂಬರ, ಜಾಜಿ, ಮರಳೆ, ಪನ್ನೀರು ಹೂವುಗಳು, ಪವಿತ್ರ ಪತ್ರೆಗಳು ಸೇರಿದಂತೆ 58ಬಗೆಯ ವಿವಿಧ ಹೂವುಗಳಿಂದ ಅಭಿಷೇಕ ಮಾಡಲಾಯಿತು..

ಮೈಸೂರಿನ ಬ್ರಹ್ಮತಂತ್ರಸ್ವತAತ್ರ ಪರಕಾಲ ಮಠಾಧೀಶರಾದ ಪರಕಾಲ ಸ್ವಾಮೀಜಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ವಿಗ್ರಹದ ಸುತ್ತಲೂ ಏಳು ಸುತ್ತು ಪ್ರದಕ್ಷಿಣೆ ಹಾಕಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು..
ಭೂವರಹನಾಥಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ವ್ಯವಸ್ಥಾಪನಾ ಸಮುತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸ ರಾಘವನ್ ವರಹಾಜಯಂತಿ ಸಂಭ್ರಮದ ವಿಶೇಷ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.. ವರಹಾಜಯಂತಿಯ ಅಂಗವಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು..

ವರಹಾಜಯಂತಿ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರಿಗೆ ಬಿಸಿಬೇಳೆಬಾತ್, ಸಿಹಿಪೊಂಗಲ್, ಖಾರಾಭಾತ್ ಹಾಗೂ ಲಡ್ಡು ಪ್ರಸಾದವನ್ನು ವಿತರಿಸಲಾಯಿತು..

ಭೂವರಹನಾಥಸ್ವಾಮಿ ಕ್ಷೇತ್ರವು ತಿರುಮಲ ತಿರುಪತಿಯ ಮಾದರಿಯಲ್ಲಿ ಭೂವೈಕುಂಠವಾಗಿ ಅಭಿವೃದ್ಧಿಯಾಗುತ್ತಿದ್ದು ಹೊಯ್ಸಳ ವಾಸ್ತುಶೈಲಿಯ ಮಾದರಿಯಲ್ಲಿ ಮೂರು ಪ್ರಾಕಾರಗಳ ದೇವಾಲಯ 108 ಕಾಲುಗಳ ಮುಖಮಂಟಪ ಹಾಗೂ 178 ಅಡಿ ಎತ್ತರದ ಬೃಹತ್ ರಾಜಗೋಪುರವನ್ನು ನಿರ್ಮಿಸಲಾಗುತ್ತಿದೆ. ಭಕ್ತರು ತನು, ಮನ ಧನ ಸಹಾಯ ನೀಡಿ ದೇವಾಲಯದ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಶ್ರೀನಿವಾಸರಾಘವನ್ ಮನವಿ ಮಾಡಿದರು..

ಇಂದಿನ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬೂಕನಕೆರೆ ರಾಜಶೇಖರ, ಚಲನ ಚಿತ್ರ ನಿರ್ಮಾಪಕರಾದ ಸೂರಪ್ಪಬಾಬು, ರಾಕ್ ಲೈನ್ ವೆಂಕಟೇಶ್, ಸಚಿವರಾದ ಡಾ.ನಾರಾಯಣಗೌಡರ ಧರ್ಮಪತ್ನಿ ದೇವಕಿ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: