May 4, 2024

Bhavana Tv

Its Your Channel

ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಹಾರ್ ಕೂಟ ಏರ್ಪಡಿಸಿದ ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್

ಕೆ.ಆರ್.ಪೇಟೆ ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯ ಆವರಣದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಜೆಡಿಎಸ್ ಯುವ ಘಟಕದ ಮಾಜಿ ಅಧ್ಯಕ್ಷ ಹಾಗು ಪುರಸಭೆ ಸದಸ್ಯರಾದ ಕೆ.ಎಸ್.ಸಂತೋಷ್ ಕುಮಾರ್ ಮುಸ್ಲಿಂ ಭಾಂದವರಿಗೆ ಇಫ್ತಿಹಾರ್ ಕೂಟ ಏರ್ಪಡಿಸಿದ್ದರು. ಮುಸ್ಲಿಂ ಬಂಧುಗಳಿಗೆ ಊಟ ಬಡಿಸಿ, ಶುಭ ಹಾರೈಸಿದರು…

ಒಂದು ತಿಂಗಳ ಕಾಲ ಕಠಿಣವಾದ ಉಪವಾಸ ವ್ರತವನ್ನು ಆಚರಿಸಿ ಶ್ರದ್ಧಾ ಭಕ್ತಿಯಿಂದ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸುವುದು ನಾಗರಿಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಂತೋಷ್ ಕುಮಾರ್, ಈ ಔತಣಕೂಟವು ಹಿಂದೂ ಮುಸ್ಲಿಮರ ಸೌಹಾರ್ದತೆಯ ಸಂಕೇತವಾಗಿದೆ. ಹಿಂದುಗಳು ಹಾಗೂ ಮುಸ್ಲಿಂ ಭಾಂದವರು ಒಟ್ಟಾಗಿ ಊಟ ಮಾಡಿದಾಗ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಭಾವೈಕ್ಯತೆಯು ಹೆಚ್ಚಾಗಿ ನಾವೆಲ್ಲಾ ಒಂದು, ನಾವು ಭಾರತಾಂಭೆಯ ಮಕ್ಕಳು ಎಂಬ ಧನ್ಯತಾಭಾವನೆಯು ಮೂಡುತ್ತದೆ. ಇಫ್ತಿಯಾರ್ ಕೂಟವು ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯನ್ನು ಸಾರುತ್ತದೆ ನಾನು ಇಂದು ಏರ್ಪಡಿಸಿದ್ದ ಔತಣಕೂಟಕ್ಕೆ ಎಲ್ಲಾ ಮುಸ್ಲಿಂ ಸಮುದಾಯದವರು ಬಂದು ನಮ್ಮ ಆತಿಥ್ಯವನ್ನು ಸ್ವೀಕರಿಸಿದ್ದಾರೆ ಇದು ನನಗೆ ತುಂಬ ಸಂತೋಷ ತಂದಿದೆ ಮುಂದೆಯೂ ಮುಸ್ಲಿಂ ಸಮುದಾಯದ ಜೊತೆ ನನ್ನ ಭಾಂದವ್ಯ ಮುಂದುವರಿಯಲಿದೆ ಎಂದು ಸಂತೋಷ್ ಹೇಳಿದರು.

ಹಿಂದೂ ಮುಸ್ಲಿಮರ ಮಧ್ಯೆ ಸಮಾಜದಲ್ಲಿ ಯಾವುದೇ ಕೋಮುಗಲಭೆಗಳು ನಡೆಯದೆ ಸೌಹಾರ್ದತೆಯಿಂದ ಜೀವನವು ಸಂತೋಷಮಯವಾಗಿ ಸಾಗಲಿ ಎಂಬುದು ನನ್ನ ಆಶಯವಾಗಿದೆ ಎಂದು ಸಂತೋಷ್ ತಿಳಿಸಿದರು.

ಇಫ್ತಿಯಾರ್ ಔತಣಕೂಟದಲ್ಲಿ ಊಟವಾದ ಬಳಿಕ ಸ್ವತಃ ತಾವೆ ಸ್ವಚ್ಛತೆ ಮಾಡುವುದರ ಮೂಲಕ ಸಂತೋಷ್ ಕುಮಾರ್ ಸರಳತೆ ಮೆರೆದರು. ಔತಣಕೂಟದಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಮುದಾಯದ ಮುಖಂಡರುಗಳು ಮಾತನಾಡಿ ಹಿಂದು ಮತ್ತು ಮುಸ್ಲಿಂ ಬಾಂಧವರ ಭಾವನೆಗಳ ಜೊತೆ ಚೆಲ್ಲಾಟವಾಡಿ ಆನಂದಪಡುತ್ತಿರುವ ಜನರ ಮಧ್ಯದಲ್ಲಿ ಪುರಸಭೆ ಸದಸ್ಯರಾದ ಸಂತೋಷ್ ಕುಮಾರ್ ಅವರಂತಹ ಸಜ್ಜನ ಬಂಧುಗಳು ಜಾತ್ಯಾತೀತ ಭಾವನೆಗಳ ಜೊತೆ ಹಾಗೂ ಮುಸ್ಲಿಂ ಸಮುದಾಯದ ಜನರ ಮೇಲೆ ಇಟ್ಟಿರುವ ಪ್ರೀತಿ, ಸಹೋದರತೆ ಹಾಗೂ ಭಾಂದವ್ಯಕ್ಕೆ ನಾವುಗಳು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ ಎಂದರು.

ಪುರಸಭೆ ಮಾಜಿಅಧ್ಯಕ್ಷ ಕೆ.ಗೌಸ್ ಖಾನ್, ರಾಜಾಸ್ಥಾನ ಸೇವಾ ಸಮಿತಿಯ ಸಂಚಾಲಕ ರಮೇಶ್ ಚೌಧರಿ, ಹಿರಿಯ ಪತ್ರಕರ್ತ ಬಳ್ಳೇಕೆರೆ ಮಂಜುನಾಥ್ ಸೇರಿದಂತೆ ಐನೂರಕ್ಕೂ ಹೆಚ್ಚಿನ ಮುಸ್ಲಿಂ ಭಾಂದವರು ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಪರಸ್ಪರ ಶುಭಾಶಯಗಳನ್ನು ವಿತರಣೆ ಮಾಡಿಕೊಂಡು ಸಾಮೂಹಿಕವಾಗಿ ಬಿರಿಯಾನಿ ಊಟ ಮಾಡಿ, ಸಿಹಿಯನ್ನು ತಿಂದು ಸಂಭ್ರಮಿಸಿದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: