May 2, 2024

Bhavana Tv

Its Your Channel

ಮಡಿವಾಳ ಮಾಚಿದೇವ ಯುವಕ ಸಂಘದ ಗ್ರಾಮ ಘಟಕ ಉದ್ಘಾಟನೆ

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲೇನಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಯುವಕ ಸಂಘದ ಗ್ರಾಮ ಘಟಕ ಉದ್ಘಾಟನೆ ..

ಮಡಿವಾಳ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜಕ್ಕೆ ಕೊಡುಗೆ ನೀಡಲು ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಮನವಿ..

ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ..ಮುಗಿಲು ಮುಟ್ಟಿದ ಸಂಭ್ರಮ…

ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಮಡಿವಾಳ ಸಮಾಜದ ಬಂಧುಗಳು ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯಿಂದ ಮಾತ್ರ ಸರ್ವ ಶ್ರೇಷ್ಠ ಸಾಧನೆ ಮಾಡಿ ಗುರಿಮುಟ್ಟಲು ಸಾಧ್ಯವಿದೆ. ಆದ್ದರಿಂದ ಮಡಿವಾಳ ಸಮಾಜದ ಬಂಧುಗಳು ನಿಮ್ಮ ಮಕ್ಕಳಿಗಾಗಿ ಆಸ್ತಿ ಸಂಪಾದನೆ ಮಾಡದೇ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿಸಿ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗಿ ಕೊಡುಗೆ ನೀಡಿ ಎಂದು ಮನವಿ ಮಾಡಿದ ಮಡಿವಾಳ ಮಾಚಿದೇವ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ.. ವಿದ್ಯೆಯ ಜ್ಞಾನದ ಶಕ್ತಿಯಿಂದ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಿ ಜಾತಿ, ಮತ ಪಂಥಗಳಿAದ ಮುಕ್ತವಾದ ಸಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಆದ್ದರಿಂದ ರಾಜ್ಯ ಸರ್ಕಾರವು ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪಿಸುವ ಬದಲಿಗೆ ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಲಿ ಎಂದು ನಂಜಪ್ಪ ಆಗ್ರಹಿಸಿದರು…

ಟಿಎಪಿಸಿಎಂಎಸ್ ಅಧ್ಯಕ್ಷ ಜೆಡಿಎಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ ಸಮಾಜಕ್ಕೆ ಮಡಿವಾಳ ಸಮಾಜದ ಸೇವೆಯು ಅಪಾರವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮಡಿವಾಳರ ಕೊಡುಗೆಯು ನಿರ್ಣಾಯಕವಾಗಿದೆ. ಮಡಿವಾಳ ಸಮಾಜದ ಬಂಧುಗಳು ವೃತ್ತಿಕೌಶಲ್ಯದ ಜೊತೆಗೆ ಸರ್ಕಾರದಿಂದ ದೊರೆಯುವ ಸಂವಿಧಾನಬದ್ಧವಾದ ಸೌಲಭ್ಯಗಳು ಸದ್ಬಳಕೆ ಮಾಡಿಕೊಂಡು ಸರ್ವಶ್ರೇಷ್ಠ ಸಾಧನೆ ಮಾಡಿ ಗುರಿಮುಟ್ಟಬೇಕು ಎಂದು ದೇವರಾಜು ಕರೆ ನೀಡಿದರು..

ರಾಜ್ಯ ಮಡಿವಾಳ ಮಾಚಿದೇವ ಸಂಘದ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಯೂರಿ ಮಾತನಾಡಿ ೧೨ ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರ ವಚನ ಕ್ರಾಂತಿಗೆ ಕೊಡುಗೆ ನೀಡಿದ ಮಾಚಿದೇವರು ನಮ್ಮ ಕುಲ ಪುರುಷರಾಗಿದ್ದಾರೆ.. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಸಹಕಾರವನ್ನು ನೀಡಿ ಸಮ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಿದ ವಚನ ಕ್ರಾಂತಿಗೆ ಧೀಶಕ್ತಿಯಾಗಿ ದುಡಿದ ಮಾಚಿದೇವರ ಆದರ್ಶಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದಲಾವಣೆಯ ದಿಕ್ಕಿನಲ್ಲಿ ಸಾಗಬೇಕು.. ಮಡಿವಾಳ ಸಮಾಜದವರು ನಾವು ಎನ್ನಲು ಹೆಮ್ಮೆಪಡಬೇಕು ಎಂದು ಅಭಿಮಾನದಿಂದ ಹೇಳಿದರು…

ಕೆ.ಆರ್.ಪೇಟೆ ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಶೀಳನೆರೆ ಸಿದ್ದೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಡಿವಾಳ ಸಮಾಜದ ಬಂಧುಗಳು ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಡರಾಗಿ ಸಂಘಟಿತರಾಗಬೇಕು. ಸಂವಿಧಾನಬದ್ಧವಾದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ನಡೆಸಬೇಕು ಎಂದು ಕಿವಿ ಮಾತು ಹೇಳಿದರು.. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು..

ಮಡಿವಾಳ ಮಾಚಿದೇವ ಸಮಾಜದ ಮಂಡ್ಯ ಜಿಲ್ಲಾಧ್ಯಕ್ಷ ರವಿ, ಶೀಳನೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿಸಿದ್ದೇಶ್, ಶಿಕ್ಷಣ ತಜ್ಞ ಪಿ.ಜೆ.ವೆಂಕಟರಾಮು, ಮಣಿಯಮ್ಮ, ಗುರುರಾಜ್, ವಕೀಲ ಅರುಣಕುಮಾರ್, ಧರ್ಮರಾಜ್, ದ್ರಾಕ್ಷಾಯಿಣಿ, ಚಂದ್ರಶೇಖರ್, ಮಂಜುನಾಥ್, ಎಂ.ಬಿ.ಪ್ರಕಾಶ್ ಸೇರಿದಂತೆ ಕೆ.ಆರ್.ಪೇಟೆ ತಾಲ್ಲೂಕಿನ ಸ್ಥಳೀಯ ಮುಖಂಡರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮಡಿವಾಳ ಸಮಾಜದ ಬಂಧುಗಳು ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: