May 4, 2024

Bhavana Tv

Its Your Channel

ಕೆ.ಆರ್.ಪೇಟೆ ಪುರಸಭೆ ಕಾರ್ಯಾಲಯಕ್ಕೆ ಸಚಿವ ನಾರಾಯಣಗೌಡರ ವಿಶೇಷಾಧಿಕಾರಿ ಡಿ.ಲೋಹಿತ್ ಭೇಟಿ

ಕೆ.ಆರ್.ಪೇಟೆ ಪುರಸಭೆ ಕಾರ್ಯಾಲಯಕ್ಕೆ ಸಚಿವ ನಾರಾಯಣಗೌಡರ ವಿಶೇಷಾಧಿಕಾರಿ ಡಿ.ಲೋಹಿತ್ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ಕೆಲಸ ಮಾಡಲು ಮುಖ್ಯಾಧಿಕಾರಿ ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ

ನೆನಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಯ ಕಾಮಗಾರಿ, ಹೊಸಹೊಳಲು ವೆಟ್ ವೆಲ್ ಹಾಗೂ ಕೊಮ್ಮೇನಹಳ್ಳಿಯ ನಿರ್ಜನ ಅರಣ್ಯಪ್ರದೇಶದಲ್ಲಿರುವ ಒಳಚರಂಡಿ ಘನ ತ್ಯಾಜ್ಯ ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕ ವೀಕ್ಷಣೆ, ಮಂಡ್ಯ ಜಿಲ್ಲಾ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಇಇ ಜಯಕುಮಾರ್, ಎಇಇ ಗುರುರಾಜ್, ಪರಿಸರ ಎಂಜಿನಿಯರ್ ಅರ್ಚನಾ, ಸಹಾಯಕ ಎಂಜಿನಿಯರ್ ಮಧುಸೂದನ್, ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಅವರಿಂದ ನಗರದ ಸಮಸ್ಯೆಗಳ ಬಗ್ಗೆ ವಿಶೇಷಾಧಿಕಾರಿಗಳಿಗೆ ಮಾಹಿತಿ…

ಕಳೆದ ೧೫ ವರ್ಷಗಳ ಹಿಂದೆ ವರ್ತೂರು ಪ್ರಕಾಶ್ ಅವರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದಾಗ ೧೨ ಕೋಟಿ ರೂ ಆರಂಭಗೊAಡ ಒಳಚರಂಡಿ ಯೋಜನೆಯು ಇಂದು ೨೨ ಕೋಟಿ ಅಂದಾಜು ದಾಟಿದ್ದರೂ ಕಾಮಗಾರಿಯು ಸಂಪೂರ್ಣಗೊಳ್ಳದೇ ಅಲ್ಲಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯುತ್ತಿದ್ದು ಕೊಳಚೆಯ ಗಬ್ಬು ವಾಸನೆಯು ಮೂಗಿಗೆ ರಾಚುತ್ತಿದೆ. ಯಶಸ್ವಿನಿ ಸಮುದಾಯ ಭವನ ಬಡಾವಣೆ, ಹಳೇ ಕಿಕ್ಕೇರಿ ರಸ್ತೆ, ಶ್ರವಣಬೆಳಗೊಳ ರಸ್ತೆ ಹಾಗೂ ಕೆರೆ ಬೀದಿಯಲ್ಲಿ ಒಳಚರಂಡಿ ಯೋಜನೆಯ ಪೈಪ್ ಲೈನ್, ಮ್ಯಾನ್ ಹೋಲ್ ಗಳು ಹಾಗೂ ತ್ಯಾಜ್ಯಯುಕ್ತ ನೀರನ್ನು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡುವ ಪಂಪ್ ಹೌಸ್ ಮತ್ತು ವೆಟ್ ವೆಲ್ ನಿರ್ಮಾಣ ಮಾಡಿಸಿ ಆದಷ್ಟು ಶೀಘ್ರವಾಗಿ ಒಳಚರಂಡಿ ಯೋಜನೆಯನ್ನು ಶ್ರೀ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಸಚಿವ ನಾರಾಯಣಗೌಡರ ವಿಶೇಷಾಧಿಕಾರಿ ಲೋಹಿತ್ ಅವರಲ್ಲಿ ಮನವಿ ಮಾಡಿದರು..

ಪುರಸಭೆ ಸಿಬ್ಬಂಧಿಗಳ ಸಭೆ ನಡೆಸಿ ಮಾತನಾಡಿದ ಸಚಿವರ ವಿಶೇಷಾಧಿಕಾರಿ ಲೋಹಿತ್ ಕಛೇರಿಯಲ್ಲಿ ಶ್ರೀ ಸಾಮಾನ್ಯರ ಕೆಲಸ ಕಾರ್ಯಗಳು ವಿಳಂಭವಾಗುತ್ತಿರುವ ಬಗ್ಗೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಕ್ರೀಡೆ ಮತ್ತು ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರಿಗೆ ದೂರುಗಳು ಬರುತ್ತಿವೆ. ಆದ್ದರಿಂದ ಕಛೇರಿಯ ಸಿಬ್ಬಂಧಿಗಳು ಶೀಘ್ರವಾಗಿ ಸ್ಪಂದಿಸಿ ಜನರ ಕೆಲಸಗಳನ್ನು ಬದ್ಧತೆಯಿಂದ ಮಾಡಿಕೊಡಬೇಕು. ಮುಖ್ಯಾಧಿಕಾರಿಗಳು ಪುರಸಭೆ ಸಿಬ್ಬಂಧಿಗಳ ಮೂರು ತಂಡಗಳನ್ನು ರಚಿಸಿ ಅತೀ ಜರೂರಾಗಿ ಟ್ರೇಡ್ ಲೈಸೆನ್ಸ್, ಖಾತೆ, ಈಸ್ವತ್ತು ಬದಲಾವಣೆ ಮಾಡಿಕೊಡಬೇಕು. ಮತ್ತೆ ಸಾರ್ವಜನಿಕರು ಹಾಗೂ ಶ್ರೀ ಸಾಮಾನ್ಯರಿಂದ ದೂರು ಬಂದರೆ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಲೋಹಿತ್ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ, ರವಿಕುಮಾರ್ ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: