May 4, 2024

Bhavana Tv

Its Your Channel

ಸಂತೆಬಾಚಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಹೆಚ್.ಕೆ.ದೇವರಾಜು ಆಯ್ಕೆ

ಕೆ.ಆರ್.ಪೇಟೆ ತಾಲ್ಲೂಕು ಸಂತೆಬಾಚಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹಡವನಹಳ್ಳಿ ದೇವರಾಜು ಮತ್ತು ಅಮಚಹಳ್ಳಿ ಅನುರಾಧಗಣೇಶ್ ಕ್ರಮವಾಗಿ ಅಧ್ಯಕ್ಷ -ಉಪಾಧ್ಯಕ್ಷರಾಗಿ ಭರ್ಜರಿ ಗೆಲುವು..ಜೆಡಿಎಸ್ ಅಭ್ಯರ್ಥಿಗಳಿಗೆ ಮುಖಭಂಗ..ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ …

ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹಡವನಹಳ್ಳಿಯ ಹೆಚ್.ಕೆ.ದೇವರಾಜು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಅಮಚಹಳ್ಳಿಯ ಅನುರಾಧ ಗಣೇಶ್ ತಮ್ಮ ಪ್ರತಿಸ್ಪರ್ಧಿಗಳಾದ ಸಂತೆಬಾಚಹಳ್ಳಿ ಹೋಬಳಿ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ರವಿ ಅವರ ಪತ್ನಿ ಪ್ರಿಯದರ್ಶಿನಿ ಮತ್ತು ಡಿ.ಜೆ.ಮಂಜುಳಾ ಅವರನ್ನು ಪರಾಭವಗೊಳಿಸಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಸತತವಾಗಿ ಎರಡನೇ ಬಾರಿಯೂ ಹೀನಾಯವಾಗಿ ಸೋಲು ಅನುಭವಿಸಿದ್ದು ವಿಶೇಷವಾಗಿತ್ತು…

ಚುನಾವಣಾಧಿಕಾರಿಗಳಾದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಅವರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಸಿದಾಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಡವನಹಳ್ಳಿ ದೇವರಾಜು 11 ಮತ ಪಡೆದು ಗೆಲುವಿನ ನಗೆ ಬೀರಿದರೆ ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿ ಅವರ ಪತ್ನಿ ಪ್ರಿಯದರ್ಶಿನಿ ಕೇವಲ 06 ಮತಗಳನ್ನು ಪಡೆದು ಹೀನಾಯವಾಗಿ ಸೋಲೊಪ್ಪಿಕೊಂಡರು.. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮಚಹಳ್ಳಿ ಅನುರಾಧಗಣೇಶ್ 12 ಮತ ಪಡೆದರೆ ಅವರ ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಡಿ.ಜೆ.ಮಂಜುಳಾ 05ಮತ ಪಡೆದು ಪರಾಭವಗೊಂಡರು.. ಈ ಹಿಂದೆ ಸಂತೇಬಾಚಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದ ಮೋಹನ್ ಮತ್ತು ಮಂಗಳಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆಯು ನಡೆಯಿತು.

ಬಿಜೆಪಿ ಬೆಂಬಲಿತ ನೂತನ ಅಧ್ಯಕ್ಷ ಹಡವನಹಳ್ಳಿ ದೇವರಾಜು (ದಿನೇಶ್) ಮತ್ತು ಉಪಾಧ್ಯಕ್ಷೆ ಅನುರಾಧ ಗಣೇಶ್ ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಪ್ರಕಟಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಿಹಿ ವಿತರಿಸಿ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಿದರು.. ಜೆಡಿಎಸ್ ಭದ್ರಕೋಟೆಯಾಗಿರುವ ಸಂತೆಬಾಚಹಳ್ಳಿ ಹೋಬಳಿ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭಾರೀ ಮತಗಳ ಅಂತರದಿAದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಚಿವ ಡಾ.ನಾರಾಯಣಗೌಡ ಅವರ ಪರವಾಗಿ ಜಯಘೋಷಗಳು ಮೊಳಗಿದವು..

ಸಚಿವ ಡಾ.ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ ಮಾತನಾಡಿ ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಬಿಜೆಪಿ ಪಕ್ಷಕ್ಕೆ ಸತ್ವಪರೀಕ್ಷೆಯಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಪರಾಭವಗೊಳಿಸಲು ಭಾರೀ ತಂತ್ರಗಾರಿಕೆ ನಡೆಸಲಾಗಿತ್ತು. ಆದರೆ ಶಿಸ್ತಿನ ಸಿಪಾಯಿಗಳಾದ ಸದಸ್ಯರು ಸಚಿವ ನಾರಾಯಣಗೌಡರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಬೆಂಬಲಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು ಎಂದು ತಿಳಿಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು…

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರಾದ ಡಿ.ಪಿ.ಪರಮೇಶ್, ಸಂತೆಬಾಚಹಳ್ಳಿ ಮರೀಗೌಡ, ನಾಯಕನಹಳ್ಳಿ ಲೋಕೇಶ್, ಭೀಮಣ್ಣ, ಅಘಲಯ ಶ್ರೀಧರ್, ಕೊಡಗಹಳ್ಳಿ ಜಯರಾಮೇಗೌಡ, ಅಘಲಯ ಮಹಡಿಮನೆ ಮಂಜೇಗೌಡ, ಎನ್.ಡಿ.ರಾಮೇಗೌಡ, ಮಹೇಶ್, ಸೋಮಶೇಖರ್ ಮತ್ತಿತರರು ಅಭಿನಂದಿಸಿದರು…

ಭಾರೀ ಕುತೂಹಲ ಕೆರಳಿಸಿದ್ದ ಸಂತೆಬಾಚಹಳ್ಳಿ ಗ್ರಾಮ ಪಂಚಾಯತಿಯ ವರಿಷ್ಠರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದರೆ ಜೆಡಿಎಸ್ ಹೀನಾಯವಾಗಿ ಸೋಲನ್ನು ಅನುಭವಿಸಿ ಪೆಚ್ಚು ಮೋರೆ ಹಾಕಿಕೊಂಡು ತೆರಳಬೇಕಾಯಿತು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: