May 19, 2024

Bhavana Tv

Its Your Channel

ರೇವತಿ ನಕ್ಷತ್ರದ ಅಂಗವಾಗಿ ಭೂವರಹನಾಥಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮ

ಕೃಷ್ಣರಾಜಪೇಟೆ:- ರೇವತಿ ನಕ್ಷತ್ರದ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ಸಮೇತವಾಗಿ ನೆಲೆಸಿರುವ ಭೂವರಹನಾಥ ಸ್ವಾಮಿಯ ಶಿಲಾಮೂರ್ತಿಗೆ ವಿಶೇಷ ಅಭಿಷೇಕ.. ಪುಷ್ಪಾಭಿಷೇಕ.. ನಯನ ಮನೋಹರವಾದ ಭವ್ಯ ದೃಶ್ಯಕಾವ್ಯವನ್ನು ಕಣ್ತುಂಬಿಕೊAಡ ಭಕ್ತವೃಂದ..ಗೋವಿAದ, ಭೂವರಾಹ, ವೆಂಕಟರಮಣ ಎಂದು ಮೊಳಗಿದ ಜಯಘೋಷಗಳು..

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠವೆAದೇ ಪ್ರಸಿದ್ಧವಾಗಿರುವ ಭೂವರಹನಾಥ ಕಲ್ಲಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ಸಮೇತವಾಗಿ ನೆಲೆಸಿರುವ ಭೂವರಹನಾಥಸ್ವಾಮಿಗೆ ಇಂದು ರೇವತಿ ನಕ್ಷತ್ರದ ಅಂಗವಾಗಿ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ವೈಭವಯುತವಾಗಿ ನಡೆದವು ..

ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ್ ರಾಘವನ್ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.. ಹೇಮಾವತಿ ನದಿಯ ದಡದಲ್ಲಿರುವ, ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಭೂವರಹನಾಥ ದೇವಾಲಯದಲ್ಲಿರುವ ದೇಶದಲ್ಲಿಯೇ ಅಪರೂಪದ್ದಾಗಿರುವ 17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣ ಶಿಲೆಯಿಂದ ನಿರ್ಮಿಸಿರುವ ಶ್ರೀ ಲಕ್ಷ್ಮೀ ಸಮೇತನಾದ ಭೂವರಹನಾಥ ಸ್ವಾಮಿಯ ಮೂರ್ತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದಾಗಿತ್ತು…

ವಿಶೇಷ ಅಭಿಷೇಕ..ಭೂವರಹನಾಥ ಸ್ವಾಮಿಗೆ ಪಟ್ಟಾಭಿಷೇಕ .
ಒಂದು ಸಾವಿರ ಲೀಟರ್ ಹಾಲು, ಐನೂರು ಲೀ.ಕಬ್ಬಿನಹಾಲು, ಐನೂರು ಲೀ.ಎಳನೀರು, ಜೇನುತುಪ್ಪ, ಹಸುವಿನ ತುಪ್ಪ, ಸುಗಂಧ ದ್ರವ್ಯಗಳು, ಅರಿಶಿನ ಹಾಗೂ ಪವಿತ್ರ ಗಂಗಾಜಲದಿAದ ಅಭಿಷೇಕ ಮಾಡಿದ ನಂತರ ಮಲ್ಲಿಗೆ, ಜಾಜಿ, ಸಂಪಿಗೆ, ಗುಲಾಬಿ, ಸುಗಂಧರಾಜ, ಕನಕಾಂಬರ, ಜವನ, ತುಳಸಿ, ಪವಿತ್ರ ಪತ್ರೆಗಳು, ಕಮಲದ ಹೂ ಸೇರಿದಂತೆ ಐವತ್ತೆಂಟು ಬಗೆಯ ಅಪರೂಪದ ಪುಷ್ಪಗಳಿಂದ ಸ್ವಾಮಿಯ ಶಿಲಾ ಮೂರ್ತಿಗೆ ಪುಷ್ಪಾಭಿಷೇಕ ಮಾಡಲಾಯಿತು..
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ 10ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಷೇಕವನ್ನು ಕಣ್ತುಂಬಿಕೊAಡರು..

ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧ ಸಾವಿರಾರು ಭಕ್ತರಿಗೆ ಉಪ್ಪಿಟ್ಟು, ಸಿಹಿ ಪೊಂಗಲ್, ಮೊಸರನ್ನ, ಪುಳಿಯೊಗರೆ, ಬಿಸಿಬೇಳೆ ಬಾತ್ ಪ್ರಸಾದವನ್ನು ವಿತರಿಸಲಾಯಿತು..

ರೇವತಿ ನಕ್ಷತ್ರದ ಅಂಗವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ನಾರಾಯಣಗೌಡರ ಧರ್ಮಪತ್ನಿ ದೇವಕಿ, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ತಹಶೀಲ್ದಾರ್ ಎಂ.ವಿ.ರೂಪ, ಸಚಿವರ ಆಪ್ತಸಹಾಯಕರಾದ ದಯಾನಂದ, ಚಲನಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸೂರಪ್ಪಬಾಬು, ದೇವಾಲಯ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ನಾಗೇಶರಾವ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ .

error: