May 3, 2024

Bhavana Tv

Its Your Channel

ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ನ್ಯಾಯಾಧೀಶರಿಂದ ಚಾಲನೆ

ಕೆ.ಆರ್.ಪೇಟೆ:- ಕೋವಿಡ್ ಮಹಾಮಾರಿಯ ಸೋಂಕನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ನ್ಯಾಯಾಧೀಶರಾದ ಸಮೀರ್ ಪಿ.ನಂದ್ಯಾಲ್, ಶಂಕುAತಲಾ ಮತ್ತು ಹೆಚ್.ಓಂಕಾರಮೂರ್ತಿ ಚಾಲನೆ ನೀಡಿದರು..

ದೇಶದೆಲ್ಲಡೆ ಮತ್ತೆ ಕೋವಿಡ್ ಸೋಂಕು ಹರಡುತ್ತಿರುವುದರಿಂದ ಈ ದಿಕ್ಕಿನಲ್ಲಿ ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳ ಆರೋಗ್ಯ ಸಂವರ್ಧನೆಗಾಗಿ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಮೂರನೇ ಹೆಚ್ಚುವರಿ ಲಸಿಕೆಯಾಗಿ ಬೂಸ್ಟರ್ ಡೋಸ್ ಹಾಕಲು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ಬಿಡುಗಡೆ ಮಾಡಿದೆ..ಎರಡು ಡೋಸ್ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವ ಸಾರ್ವಜನಿಕರು ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೆದುಕೊಂಡು ಕೋವಿಡ್ ಹರಡುವುದರಿಂದ ಎಚ್ಚರವಾಗಿದ್ದು ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಸಮೀರ್.ಪಿ ನಂಧ್ಯಾಲ್ ಮನವಿ ಮಾಡಿದರು..

ಈ ಸಂದರ್ಭದಲ್ಲಿ ಹಾಜರಿದ್ದ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮತ್ತು ವಕೀಲರ ಸಂಘದ ಅಧ್ಯಕ್ಷ ರವಿಶಂಕರ್ ಮತ್ತು ಕಾರ್ಯದರ್ಶಿ ಆರ್.ಕೆ.ರಾಜೇಗೌಡ ಮಾತನಾಡಿ ವಕೀಲರು, ನ್ಯಾಯಾಲಯದ ಸಿಬ್ಬಂಧಿಗಳು ಹಾಗೂ ವಕೀಲರ ಕುಟುಂಬದ ಸದಸ್ಯರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಂಡು ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು..

ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ಜಗಧೀಶ್, ರಾಣಿ, ಮಾಜಿಅಧ್ಯಕ್ಷರಾದ ಹೆಚ್.ರವಿ, ಬಂಡಿಹೊಳೆ ಗಣೇಶ್, ಹಿರಿಯ ವಕೀಲರಾದ ಕೃಷ್ಣಕುಮಾರ್, ಮಂಜುನಾಥ್, ಫಾರ್ಮಸಿ ಅಧಿಕಾರಿ ಸತೀಶ್, ಆರೋಗ್ಯ ಇಲಾಖೆಯ ಸಿಬ್ಬಂಧಿಗಳಾದ ರಾಮಪ್ರಸಾದ್, ಗೌರಮ್ಮ, ಮಹಿಳಾ ವಕೀಲರು ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ.

error: