April 26, 2024

Bhavana Tv

Its Your Channel

ಭಾರತ ದೇಶದಲ್ಲಿ ೨೬ ಕೋಟಿ ಜನ ಅನಕ್ಷರಸ್ಥರಿರುವುದು ವಿಷಾದನೀಯ ಸಂಗತಿ-ಡಾ.ವೆOಕಟೇಶ್

ಕಿಕ್ಕೇರಿ:ವಿಶ್ವದಲ್ಲಿ ೭೩ ಕೋಟಿ ಜನ ಅನಕ್ಷರಸ್ಥರಿದ್ದಾರೆ. ಆದರೆ ಭಾರತ ದೇಶದಲ್ಲಿಯೇ ೨೬ ಕೋಟಿ ಜನ ಅನಕ್ಷರಸ್ಥರಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ವೆಂಕಟೇಶ್ ತಿಳಿಸಿದರು.

ಅವರು ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ೫೫ ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಉಧ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಅವರು ನಮ್ಮ ದೇಶದಲ್ಲೀ ಇನ್ನೂ ಅನಕ್ಷರತೆ ಇದೆ ಎಂಬುದು ನಮಗೆ ಬೇಸರ ತರಿಸುವ ಸಂಗತಿಯಾಗಿದೆ. ದೇಶದಲ್ಲಿರುವ ಎಲ್ಲಾ ಜನರು ಸಂಪೂರ್ಣ ಸಾಕ್ಷರತೆ ಸಾಧಿಸದ ಹೊರತು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲಾ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಲೋಕಶಿಕ್ಷಣ ನಿರ್ದೇಶನಾಲಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ಸಹಿ ಮಾಡಿದರೆ ಅದು ಸಾಕ್ಷರತೆ ಅಲ್ಲ ಸಹಿ ಮಾಡುವ ಮೊದಲು ಮೇಲೆ ಏನು ಬರೆಯಲಾಗಿದೆ ಎಂಬುದನ್ನು ಓದಿ ನಂತರ ಸಹಿ ಮಾಡುವುದೇ ಸಾಕ್ಷರತೆ. ತಾನು ಕಲಿತದ್ದನ್ನು ಕೌಶಲ್ಯಾಧಾರಿತವಾಗಿ ಬಳಸಿಕೊಳ್ಳುವ ಕೌಶಲ್ಯ ಬಂದಾಗ ಸಾಕ್ಷರತೆಯ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರಿಜ್ವಾನಾ ಕೌಸರ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಅಕ್ಷರ ಜ್ಞಾನ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ನೀವು ಒಬ್ಬರಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿಮ್ಮ ಮನೆಯ ಸಮೀಪದಲ್ಲಿ ಸ್ಥಾಪಿಸಿರುವ ಕಲಿಕಾ ಕೇಂದ್ರಗಳಿಗೆ ತೆರಳಿ ಓದುವ ಹಾಗೂ ಬರೆಯುವ ಮತ್ತು ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆಯಬೇಕು. ಇನ್ನುಮುಂದೆ ಸರ್ಕಾರದ ಅನೇಕ ಸವಲತ್ತುಗಳನ್ನು ಪಡೆಯಬೇಕಾದರೆ ಅಕ್ಷರಜ್ಞಾನ ಇರಬೇಕಾಗುತ್ತದೆ ಎಂದು ಮನವಿ ಮಾಡಿದರು.

ಇದೇ ವೇಳೆ ತಾಲ್ಲೂಕು ಸಾಕ್ಷರತಾ ಸಂಯೋಜಕ ಮರುವನಹಳ್ಳಿ ಬಸವರಾಜು ನಾಡನ್ನು ಸಾಕ್ಷರ ನಾಡನ್ನಾಗಿಸುವ ನಿಟ್ಟಿನಲ್ಲಿ ಕಲಿತವರು ಕಲಿಯದವರಿಗೆ ಅಕ್ಷರಜ್ಞಾನ ಹೇಳಿಕೊಡುವಂತೆ ಸಾಕ್ಷರತಾ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು, ಜಿಲ್ಲಾ ಕಾರ್ಯಕ್ರಮ ಸಹಾಯಕಿ ದಿವ್ಯಾ, ಬೀರವಳ್ಳಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಮಂಜುನಾಯಕ, ಪಿಡಿಓ ವಾಣಿ, ಶಿಕ್ಷಣ ಸಂಯೋಜಕರಾದ ಜ್ಞಾನೇಶ್, ವೇಣುಗೋಪಾಲ್, ಗ್ರಾಮ ವಿಕಾಸ ಜಿಲ್ಲಾ ಸಂಯೋಜಕ ಟಿ.ರಾಜಶೇಖರ್, ಶಿಕ್ಷಕರಾದ ಅಣ್ಣಯ್ಯ, ಮಾಜಿ ಸಂಯೋಜಕ ರಾಮಚಂದ್ರ, ಸಿ.ಆರ್.ಪಿ. ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷೆ, ಅಂಗನವಾಡಿ ಶಿಕ್ಷಕಿ ಸೌಭಾಗ್ಯ ಸೇರಿದಂತೆ ಹಲವರು ಹಾಜರಿದ್ದರು.

ವರದಿ ಶಂಭು ಕಿಕ್ಕೇರಿ

error: