May 18, 2024

Bhavana Tv

Its Your Channel

ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಶಾಸಕ ಡಾ ಕೆ ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನೆ

ಮಳವಳ್ಳಿ : ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿಯನ್ನು ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಇಂದು ಜೆಡಿಎಸ್ ಕಾರ್ಯಕರ್ತರು ಶಾಸಕ ಡಾ ಕೆ ಅನ್ನದಾನಿ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.
ಇಲ್ಲಿನ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಅನ್ನದಾನಿ ಅವರು ಹಿಂದಿನ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಯ ವಿರುದ್ಧ ಹೋರಾಟ ನಡೆಸಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿರು ವುದರ ಜೊತೆಗೆ ಬಡವರ ರೈತರ, ಕಾರ್ಮಿಕರ ವಿರೋಧಿ ಯಾದ ಅಡಳಿತ ನಡೆಸುವ ಮೂಲಕ ತಾನು ದೊಡ್ಡ ದೊಡ್ಡ ಬಂಡವಾಳ ಶಾಹಿ ಕಂಪನಿಗಳ ಪರವಾದ ಸರ್ಕಾರ ಎಂಬುದನ್ನು ಸಾಭೀತು ಪಡಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಕಡಿಮೆ ದರ ಇದ್ದಾಗ ಹಳ್ಳಿ ಹಳ್ಳಿಯ ಜನರಿಗೂ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಿ ಎಲ್ಲರೂ ಗ್ಯಾಸ್ ಸಿಲಿಂಡರ್ ಬಳಸುವಂತೆ ಮಾಡಿದ ಮೋದಿ ನಂತರ ಸಿಲಿಂಡರ್ ಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದು ಗೊಳಿಸುವುದರ ಜೊತೆಗೆ ೩೦೦ರಿಂದ ೪೦೦ ರೂ ಗೆ ಸಿಗುತ್ತಿದ್ದ ಸಿಲಿಂಡರ್ ನ್ನು ೯೦೦ ರೂ ಗೆ ಏರಿಕೆ ಮಾಡಿ ಬಡವರ ಜೀವನವನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಆರೋಪಿಸಿದ ಶಾಸಕರು ಇದರ ಬೆನ್ನಲ್ಲೇ ಜನಸಾಮಾನ್ಯ ರು ಕೋವಿಡ್ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಇರುವಾಗಲೇ ಪೆಟ್ರೋಲ್ ಡೀಸೆಲ್ ಬೆಲೆಯನ್ನು ನೂರರ ಗಡಿ ದಾಟಿಸಿ ಜನಸಾಮಾನ್ಯರ ಬದುಕಿನ ಗಾಯದ ಮೇಲೆ ಬರೆ ಎಳೆಯುವ ಮೂಲಕ ತಾನು ಅಧಿಕಾರಕ್ಕೆ ಬಂದಿರುವುದೇ ಬಂಡವಾಳ ಶಾಹಿಗಳಿಗೆ ಇನ್ನಷ್ಟು ಉದ್ದಾರ ಮಾಡಿ ಬಡವರು ಕಾರ್ಮಿಕರು ರೈತಾಪಿ ವರ್ಗವನ್ನು ಮತ್ತೆ ಗುಲಾಮ ಗಿರಿಗೆ ನೂಕಲು ಎಂಬುದನ್ನು ಸಾಬೀತು ಪಡಿಸಿದೆ ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಉಳುವವನೇ ಭೂ ಒಡೆಯ ಎಂಬ ಬಡವರ ಕಾನೂನು ತಂದ ಇಂದಿರಾಗಾAಧಿ ಜನಮಾನಸದಲ್ಲಿ ಇಂದಿಗೂ ಉಳಿದಿದ್ದು, ೨ ರೂ ಗೆ ಲೀಟರ್ ಸೀಮೆಎಣ್ಣೆ ನೀಡುವುದರ ಜೊತೆಗೆ ಬಡವರು ರೈತರ ಪರವಾದ ನೀಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ರಂತೆ ಬಡವರ ಪರ ಆಡಳಿತ ನೀಡಿ ಇಲ್ಲವಾದರೆ ಬಡಜನತೆ ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಜಯಣ್ಣ ಅವರ ಮೂಲಕ ಸರ್ಕಾರಕ್ಕೆ ಪ್ರತಿಭಟನಾ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆ ಪುರಸಭಾಧ್ಯಕ್ಷೆ ರಾಧ ನಾಗರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಯುವ ಜೆಡಿಎಸ್ ಅಧ್ಯಕ್ಷ ಚಂದಹಳ್ಳಿ ಶ್ರೀಧರ್, ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಕಲ್ಕುಣಿ ನಂಜುAಡಸ್ವಾಮಿ, ಸೇರಿದಂತೆ ಹಲವಾರು ಪುರಸಭಾ ಸದಸ್ಯರು, ತಾ ಪಂ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

error: