December 22, 2024

Bhavana Tv

Its Your Channel

ಪ್ರಾಥಮಿಕ ಸೇವಾ ಸಹಕಾರ ಸಂಘದ ಸಾಮಾನ್ಯ ಸಭೆ ; ಸಭೆಯಿಂದ ಹೊರ ನಡೆದ ಅಧಿಕಾರಿಗಳು

ಮಳವಳ್ಳಿ : ಪ್ರಾಥಮಿಕ ಸೇವಾ ಸಹಕಾರ ಸಂಘದ ಸಾಮಾನ್ಯ ಸಭೆ ಕರೆದು ಸಭೆ ನಡೆಸ ಬೇಕಾದ ಅಧಿಕಾರಿಯೇ ಆರಂಭದಲ್ಲೇ ಸಭೆಯಿಂದ ಹೊರ ನಡೆದ ಕಾರಣ ಇಡೀ ಸಭೆ ಗೊಂದಲದ ಗೂಡಾದ ಪ್ರಸಂಗವೊAದು ಮಳವಳ್ಳಿಯಲ್ಲಿ ವರದಿಯಾಗಿದೆ.

ಮಳವಳ್ಳಿ ಪಟ್ಟಣದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ಶ್ರೀ ಲಕ್ಷ್ಮಿ ನರಸಿಂಹ ಸೇವಾ ಸಹಕಾರ ಸಂಘದ ನಿರ್ಧೇಶಕರ ಸಾಮಾನ್ಯ ಸಭೆ ಯನ್ನು ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಕರೆಯಲಾಗಿತ್ತು,
ಸಭೆ ಆರಂಭಿಸಿದ ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ಪ್ರೇಮಕುಮಾರಿ ಅವರು ಸೊಸೈಟಿಯ ಹಾಲಿ ಅಧ್ಯಕ್ಷ ರಾದ ಚಿಕ್ಕಮೊಗಣ್ಣ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ರಾಜೀನಾಮೆಯನ್ನು ಅಂಗೀಕರಿಸುವುದು ಇಂದಿನ ಸಭೆಯ ಅಜೆಂಡಾ ಎಂದು ತಿಳಿಸಿ ಉಪಾಧ್ಯಕ್ಷ ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟಿಸಿದರೆನ್ನಲಾಗಿದೆ. ಇದರಿಂದ ಅಚ್ಚರಿಗೊಂಡ ನಿರ್ದೇಶಕರು ಹಾಲಿ ಅಧ್ಯಕ್ಷರು ರಾಜೀನಾಮೆ ನೀಡಿದ್ದರೆ ಸಭೆಯ ಅಧ್ಯಕ್ಷ ಪೀಠದಲ್ಲಿ ಕೂರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ಅಧ್ಯಕ್ಷ ಚಿಕ್ಕಮೊಗಣ್ಣ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಸೊಸೈಟಿ ಇಓ ಅವರು ಖಾಲಿ ಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡು ಅದನ್ನು ರಾಜೀನಾಮೆ ಎಂದು ಬರೆದುಕೊಂಡು ವಂಚಿಸಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಅವರು ಸ್ವ ಬರಹದಲ್ಲಿ ರಾಜೀನಾಮೆ ನೀಡಿಲ್ಲ ಎಂದ ಮೇಲೆ ಈ ರಾಜೀನಾಮೆ ವಿಚಾರವನ್ನು ತುರ್ತು ಸಭೆ ಕರೆದು ಮಂಡಿಸುವ ಅಗತ್ಯ ಏನಿತ್ತು ಎಂದು ನಿರ್ದೇಶಕರು ಪ್ರಶ್ನಿಸುತ್ತಿದ್ದಂತೆ ಈ ಕುರಿತು ಯಾವ ವಿವರಣೆಯನ್ನು ನೀಡದ ಇಓ ಪ್ರೇಮಕುಮಾರಿ ಏಕಾಏಕಿ ಸಭೆಯನ್ನು ಬಿಟ್ಟು ಹೊರ ಹೊರಟು ಹೋದರು ಎಂದು ಸೊಸೈಟಿ ನಿರ್ಧೇಶಕರೂ ಆದ ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ತಿಳಿಸಿದರು.
ಕಾರ್ಯ ನಿರ್ವವಣಾಧಿಕಾರಿ ನಡೆ ಖಂಡಿಸಿ ಸೊಸೈಟಿ ಮುಂದೆ ತಮ್ಮ ಬೆಂಬಲಿಗ ನಿರ್ದೇಶಕರ ಜೊತೆ ಪ್ರತಿಭಟನೆ ಧರಣಿ ನಡೆಸಿದ ಅವರು ಇಒ ಪ್ರೇಮಕುಮಾರಿ ಕೆಲ ನಿರ್ಧೇಶಕರ ಕೈ ಗೊಂಬೆಯAತೆ ವರ್ತಿಸುತ್ತ ಸೊಸೈಟಿಯಲ್ಲಿ ಹಲವು ಅಕ್ರಮ ಅವ್ಯವಹಾರ ಗಳನ್ನು ನಡೆಸಿದ್ದು ಈ ಎಲ್ಲಾ ಅಕ್ರಮಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರನ್ನು ಸೊಸೈಟಿ ಇಒ ಸ್ಥಾನ ದಿಂದ ವಜಾ ಗೊಳಿಸು ವಂತೆ ಸಹಕಾರ ಇಲಾಖೆಯ ಉಪ ನಿಬಂಧಕರನ್ನು ಆಗ್ರಹಿಸಿದರು.
ಅಧ್ಯಕ್ಷ ಚಿಕ್ಕಮೊಗಣ್ಣ ಮಾತನಾಡಿ ಸಂಘದ ಹಳೇ ಕಟ್ಟಡವನ್ನು ಕೆಡಹುವ ಸಂಬAಧ ಚೆಸ್ಕಾಂ ಇಲಾಖೆಗೆ ಪತ್ರ ನೀಡಬೇಕಾಗಿದೆ ಎಂದು ಅತುರದಲ್ಲಿ ಖಾಲಿ ಪತ್ರವೊಂದ ಕ್ಕೆ ಸಹಿ ಹಾಕಿಸಿಕೊಂಡ ಸೊಸೈಟಿ ಇಓ ಅವರು ಆ ಪತ್ರಕ್ಕೆ ನಾನು ರಾಜೀನಾಮೆ ನೀಡಿದಂತೆ ಬರೆದುಕೊಂಡು ವಂಚಿಸಿದ್ದಾರೆ ಎಂದು ಅರೋಪಿಸಿದರಲ್ಲದೆ ಇಒ ಪ್ರೇಮಕುಮಾರಿ ಅವರು ಕೆಲ ನಿರ್ಧೇಶಕರ ಕುಮ್ಮಕ್ಕಿನಿಂದ ಸೊಸೈಟಿಯಲ್ಲಿ ಹಲವು ಅಕ್ರಮ ಅವ್ಯವಹಾರ ನಡೆಸಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸೊಸೈಟಿ ನಿರ್ಧೇಶಕರಾದ ಮೆಹಬೂಬ್ ಪಾಷಾ, ಗಂಗಣ್ಣ, ದುಂಡಮ್ಮ, ರಮೇಶ್ ಪಾಲ್ಗೊಂಡಿದ್ದರು.

ವರದಿ:ಮಲ್ಲಿಕಾರ್ಜುನ ಮಳವಳ್ಳಿ,ಮಂಡ್ಯ

error: