May 19, 2024

Bhavana Tv

Its Your Channel

೫೩ ಲಕ್ಷ ರೂ ವೆಚ್ಚದ ಜೆ ಜೆ ಎಂ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಡಾ ಕೆ ಅನ್ನದಾನಿ

ಮಳವಳ್ಳಿ : ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಭವಣೆ ನೀಗಿಸುವಲ್ಲಿ ಜೆ ಜೆ ಎಂ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು ಇಂತಹ ಉತ್ತಮ ಯೋಜನೆ ರೂಪಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ಕ್ರಮ ಅಭಿನಂದನಾರ್ಹ ಎಂದು ಶಾಸಕ ಡಾ ಕೆ ಅನ್ನದಾನಿ ತಿಳಿಸಿದರು. ತಾಲೂಕಿನ ಅಣ್ಣೇಕೊಪ್ಪಲು ಗ್ರಾಮದಲ್ಲಿ ಪ್ರತೀ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವ ೫೩ ಲಕ್ಷ ರೂ ವೆಚ್ಚದ ಜೆ ಜೆ ಎಂ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಹಿಳೆಯರು ನೀರಿಗಾಗಿ ಕಿ ಮೀ ಗಟ್ಟಲೆ ಅಲೆಯುವುದರ ಜೊತೆಗೆ ಸಾರ್ವಜನಿಕ ಕೊಳಾಯಿಯಲ್ಲಿ ಬರುವ ನೀರಿಗೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು, ಇದನ್ನು ಮನಗಂಡ ಸರ್ಕಾರ ಗ್ರಾಮದ ಪ್ರತೀ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವ ಜೆ ಜೆ ಎಂ ಯೋಜನೆ ಜಾರಿಗೆ ತಂದಿದ್ದು ಗ್ರಾಮೀಣ ಜನರಿಗೆ ತುಂಬಾ ಉಪಯುಕ್ತ ಯೋಜನೆ ಯಾಗಿದೆ ಎಂದು ತಿಳಿಸಿದರು.
ಒಟ್ಟು ೪.೨೯ ಕೋಟಿ ರೂ ವೆಚ್ಚದಲ್ಲಿ ೧೨ ಗ್ರಾಮಗಳಲ್ಲಿ ಈ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದ್ದು ಗ್ರಾಮೀಣ ಭಾಗದ ಜನ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳ ಬೇಕೆಂದು ಕೋರಿದರು.
ಈ ಸಂದರ್ಭದಲ್ಲಿತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ನಾಗೇಗೌಡನ ದೊಡ್ಡಿ ಗ್ರಾ ಪಂ ಅಧ್ಯಕ್ಷೆ ಭಾಗ್ಯಮ್ಮ ಪ್ರಭು, ಪುರಸಭಾ ಸದಸ್ಯರಾದ ಪುಟ್ಟಸ್ವಾಮಿ, ಸಿದ್ದರಾಜು, ಗುತ್ತಿಗೆದಾರ ಗೋವಿಂದ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: