May 19, 2024

Bhavana Tv

Its Your Channel

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ೫ ನೇ ತಾಲ್ಲೂಕು ಮಟ್ಟದ ಸಮಾವೇಶ

ಮಳವಳ್ಳಿ : ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಮಳವಳ್ಳಿ ತಾಲ್ಲೂಕು ಶಾಖೆಯ ೫ ನೇ ತಾಲ್ಲೂಕು ಮಟ್ಟದ ಸಮಾವೇಶ ಭಾನುವಾರ ಮಳವಳ್ಳಿ ಪಟ್ಟಣದ ಕೋಟೆ ಬೀದಿಯ ಗಾಯತ್ರಿ ಭವನದಲ್ಲಿ ಜರುಗಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಎಂ ಇ ನಟರಾಜು ಅವರು ಒಕ್ಕೂಟ ಸ್ಥಾಪನೆಯಾಗಿ ೨೦ ವರ್ಷವೇ ಕಳೆಯುತ್ತಿದ್ದರೂ ಈಗಲೂ ಸಹ ಒಕ್ಕೂಟದ ಸಭೆ ಸಮಾರಂಭ ಸಮಾವೇಶಗಳಿಗೆ ಅಡ್ಡಿ ಪಡಿಸುವ ಷಡ್ಯಂತ್ರ ನಡೆಯುತ್ತಿರುವುದು ಒಕ್ಕೂಟದ ಸಂಘಟನಾ ಶಕ್ತಿಗೆ ಸಾಕ್ಷಿ ಎಂದರು.
ತಮ್ಮಿಂದ ಇಂತಹ ಸಂಘಟನೆ ಸಮಾವೇಶ ಮಾಡಲಾದವರು ಒಕ್ಕೂಟದ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವ ಯತ್ನ ನಡೆಸುತ್ತಿದ್ದು ಇದಕ್ಕೆ ಸೊಪ್ಪು ಹಾಕದೆ ಒಕ್ಕೂಟವನ್ನು ಇನ್ನಷ್ಟು ಬಲ ಪಡಿಸಲು ಮುಂದಾಗುವAತೆ ಒಕ್ಕೂಟದ ನೌಕರರಿಗೆ ಕರೆ ನೀಡಿದರು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ ವಿ ಶಿವಕುಮಾರ್ ಅವರು ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳ ವಿರುದ್ಧವಾಗಿ ಈ ಒಕ್ಕೂಟ ಸ್ಥಾಪನೆ ಮಾಡಿಲ್ಲ, ಕೇವಲ ನೌಕರರ ಹಿತ ಕಾಪಾಡುವುದರ ಜೊತೆಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುವುದು ಒಕ್ಕೂಟದ ಗುರಿಯಾಗಿದೆ ಎಂದು ಸ್ಪಷ್ಟ ಪಡಿಸಿದರು.
ನೌಕರರಿಗೆ ನ್ಯಾಯವಾಗಿ ದೊರಕಬೇಕಿರುವ ತುಟ್ಟಿಭತ್ಯ ಕ್ಕಾಗಿ ಒಕ್ಕೂಟ ದೇಶಾಧ್ಯಂತ ಹೋರಾಟಕ್ಕೆ ಇಳಿಯುವ ಸೂಚನೆ ನೀಡುತ್ತಿದ್ದಂತೆ ಒಕ್ಕೂಟದ ಹೋರಾಟದ ತೀವ್ರತೆ ಅರಿತ ಕೇಂದ್ರ ಸರ್ಕಾರ ತುಟ್ಟಿಭತ್ಯ ಘೋಷಣೆ ಮಾಡಿತು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸಹ ತುಟ್ಟಿಭತ್ಯ ಘೋಷಣೆ ಮಾಡಿತು ಎಂದರು.
ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಕೆ ಪಿ ರಾಜು ಅಧ್ಯಕ್ಷತೆ ವಹಿಸಿದ್ದ ಸಮಾವೇಶದಲ್ಲಿ ರಾಜ್ಯ ಗೌರವಾಧ್ಯಕ್ಷ ಮಠಪತಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎನ್ ಮಹದೇವ, ಮತ್ತಿತರರು ಪಾಲ್ಗೊಂಡಿದ್ದರು.
ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: