December 20, 2024

Bhavana Tv

Its Your Channel

ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಕರಣ ಮಾಡದೇ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳಿOದ ಬೈಕ್ ರ‍್ಯಾಲಿ

ಮಳವಳ್ಳಿ: ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಕರಣ ಮಾಡದೇ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ಹಾಗೂ ಪ್ರಾಂತ ರೈತ ಸಂಘ ಸೇರಿದಂತೆ ಜನಪರ ಸಂಘಟನೆಗಳು ಮಳವಳ್ಳಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೈಕ್ ರ‍್ಯಾಲಿ ನಡೆಸಿದರು.
 ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪುರಸಭೆ ಉಪಾಧ್ಯಕ್ಷ ನಂದಕುಮಾರ್ ಬೈಕ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಏಷ್ಯಾದಲ್ಲಿಯೇ ಪ್ರಥಮಬಾರಿಗೆ ೧೯೩೩ರಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಗೊAಡು ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿತ್ತು, ಕೆಲವರ ನಿರ್ಲಕ್ಷ್ಯತೆ ಯಿಂದಾಗಿ ಸಕ್ಕರೆ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದೆ ಎಂದು ದೂರಿದರು.
 ಸರ್ಕಾರದ ಸ್ವಾಮ್ಯದಲ್ಲಿರುವ ಕಾರ್ಖಾನೆಯನ್ನು ಖಾಸಗಿಕರಣ ಮಾಡದೇ ಸರ್ಕಾರದ ಅಧೀನದಲ್ಲಿಯೇ ಮುಂದುವರೆಸಬೇಕೆAದು ಹಲವಾರು ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಾರ್ಖಾನೆ ಆರಂಭಿಸಲು ಮನಸ್ಸು ಮಾಡುತ್ತಿಲ್ಲ, ಕೂಡಲೇ ಕಾರ್ಖಾನೆ ಆರಂಭಿಸಿ ರೈತರ ನೋವಿಗೆ ಸ್ಪಂದಿಸ ಬೇಕೆಂದು ಆಗ್ರಹಿಸಿದರು.
ಸಿಐಟಿಯೂ  ಮುಖಂಡ ರಾಮಕೃಷ್ಣ ಮಾತನಾಡಿ, ಮೈಷುಗರ್ ಪುನಶ್ಚೇತನಕ್ಕೆ ಸರಕಾರ ೬೦೦ ಕೋಟಿಗೂ ಹೆಚ್ಚಿನ ಹಣ ನೀಡಿವೆ. ಆದರೆ, ಅವ್ಯವಹಾರದ ಮೂಲಕ ಸಾರ್ವಜನಿಕರ ಈ ತೆರಿಗೆ ಹಣ ದುರುಪಯೋಗವಾಗಿದೆ. ಖರ್ಚು ಮಾಡಿದ ಹಣದಲ್ಲಿ ಆಧುನಿಕ ತಂತ್ರಜ್ಞಾನದ ಹೊಸ ಕಾರ್ಖಾನೆಯನ್ನೆ ಸ್ಥಾಪಿಸಬಹುದಾಗಿತ್ತು ಎಂದು ಕಿಡಿಕಾರಿದರು.
ಮೈಷುಗರ್ ಹೋರಾಟ ಎಂಬುದು ಕೇವಲ ಕಬ್ಬು ಬೆಳೆಗಾರರ ಹೋರಾಟ ಮಾತ್ರವಲ್ಲ, ರೈತ ಬೆಳೆದ
ಅನ್ನ ತಿನ್ನುವ ಎಲ್ಲರ ಹೋರಾಟವಾಗಿದೆ,ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಇದು ನಮ್ಮ ಕಾರ್ಖಾನೆ, ಇದು ನಮ್ಮ ಹೋರಾಟ ಎಂದು ದನಿ ಎತ್ತಿದ್ದಾರೆ, ಇದನ್ನು ಸರ್ಕಾರ ಸೂಕ್ಷöವಾಗಿ ಗಮನಿಸಿ ಕಾರ್ಖಾನೆಯನ್ನು ಆರಂಭಿಸಬೇಕು, ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದರು.
ಬೈಕ್ ರ್ಯಾಲಿ ನೇತೃತ್ವ ವಹಿಸಿದ್ದ ಪ್ರಾಂತ ರೈತ ಸಂಘದ ಭರತ್ ರಾಜ್ ಮಾತನಾಡಿ ಹಲವಾರು ದಿನಗಳಿಂದ ಮೈಷುಗರ್ ಉಳಿವಿಗೆ ನಿರಂತರವಾಗಿ ಜನಪರ ಸಂಘಟನೆಗಳಿAದ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಸರ್ಕಾರ ಇತ್ತ ಗಮನ ಹರಿಸದಿರುವುದು ರೈತ ವಿರೋಧಿ ಸರ್ಕಾರಎನ್ನವುದು ಸ್ವಷ್ಟವಾಗಿದೆ ಕೂಡಲೇ ರೈತರ ಹಿತದೃಷ್ಟಿಯಿಂದ ಸರ್ಕಾರ ಸ್ವಾಮ್ಯದಲ್ಲಿಯೇ ಕಾರ್ಖಾನೆಯನ್ನು ಆರಂಭಿಸಬೇಕು, ಇಲ್ಲದಿದ್ದರೇ ಇನ್ನೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
 ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಲಿಂಗರಾಜುಮೂರ್ತಿ, ತಿಮ್ಮೇಗೌಡ, ಸುಶೀಲ ಮಂಜುಳ, ಸತೀಶ್, ಸ್ವಾಮಿ ಸೇರಿದಂತೆ ಇತರರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: