
ನಾಗಮಂಗಲ : ಮನುಕುಲಕ್ಕೆ ಬಾರದಿರಲಿ ಈ ಮಾರಕ ರೋಗ ಎಂದು ಆ ಭಗವಂತನಲ್ಲಿ ಬೇಡುತ್ತಾ ನಾವುಗಳು ಆತ್ಮಸ್ಥೈರ್ಯದಿಂದ ಜೀವದ ಬದುಕಿನೆಡೆಗೆ ಬರಬೇಕೆಂದು ವಿಧಾನಪರಿಷತ್ ಸದಸ್ಯರಾದ ಅಪ್ಪಾಜಿಗೌಡ ಹೇಳಿದರು.
ಅವರಿಂದು ದೇವಲಾಪುರ ಹೋಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜನೆ ಮಾಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಯೊಬ್ಬರೂ ತಾವುಗಳು ಯಾವುದೇ ಆತಂಕಕ್ಕೆ ಒಳಗಾಗದೆ ಭಯದ ವಾತಾವರಣವನ್ನು ಕಲ್ಪಿಸದೆ ಆತ್ಮಸ್ಥೈರ್ಯದಿಂದ ಆರೋಗ್ಯದ ನಿಯಮ ಪಾಲಿಸಿಕೊಂಡು ನಗುನಗುತ್ತಾ ಇರುವಂತೆ ತಿಳಿಸಿದರು .

ತಾವುಗಳು ಆರೋಗ್ಯ ಮುಕ್ತರಾಗಿ ಆತ್ಮಸ್ಥೈರ್ಯದಿಂದ ಮನೋಬಲದ ಶಕ್ತಿ ತುಂಬಿಕೊoಡು ತಾವುಗಳು ಆರೋಗ್ಯ ನಿಯಮಾವಳಿಯ ಪಾಲಿಸಿರೋಗ ಮುಕ್ತರಾಗಿ ಹಾಗೂ ಧೈರ್ಯ ತುಂಬುವ ಸಂಗೀತ ಸುಧೆಯನ್ನು ಆಲಿಸಿ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವಂತೆ ತಾಲ್ಲೂಕು ದಂಡಾಧಿಕಾರಿಗಳಾದ ಕುಂಞಿಅಹಮದ್ ತಿಳಿಸಿದರು .
ಈ ಸಂದರ್ಭದಲ್ಲಿ ಯರಹಳ್ಳಿ ಪುಟ್ಟಸ್ವಾಮಿ ಅವರ ತಂಡದಿAದ ಜನಪದ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವರದಿ: ಡಿ.ಆರ್ .ಜಗದೀಶ್ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ