May 5, 2024

Bhavana Tv

Its Your Channel

ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವಿ ಚಾಮಲಾಪುರ ಕಠಿಣ ಶಿಕ್ಷೆಯಾಗಬೇಕೇಂದು ಸಾಹಿತ್ಯ ಅಭಿಮಾನಿ ಬಳಗದಿಂದ ಮನವಿ .

ನಾಗಮಂಗಲ :- ಸಾಹಿತ್ಯ ಲೋಕವೇ ತಲೆತಗ್ಗಿಸುವಂತಹ ಅಶ್ಲೀಲ ಪದ ಬಳಸಿರುವ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಭ್ಯರ್ಥಿ ರವಿ ಚಾಮಲಾಪುರ ರವರಿಗೆ ಕಠಿಣ ಶಿಕ್ಷೆಯಾಗಲಿ ಅವರ ಉಮೇದುವಾರಿಕೆ ಕೂಡಲೇ ರದ್ದುಗೊಳಿಸಿ ಎಂದು ನಾಗಮಂಗಲ ತಹಸಿಲ್ದಾರ್ ಕುಂಜಿ ಅಹಮದ್ ರವರಿಗೆ ಸಾಹಿತ್ಯ ಅಭಿಮಾನಿಗಳ ಬಳಗ ಮನವಿ ಸಲ್ಲಿಸಿ ಘೋಷಣೆ ಕೂಗುವ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು

ನಾಗಮಂಗಲ ಮಿನಿ ವಿಧಾನಸೌಧ ಆವರಣದಲ್ಲಿ ಮಾತನಾಡಿದ ನಿಕಟಪೂರ್ವ ಕಸಾಪ ಅಧ್ಯಕ್ಷರು ಹಾಗೂ ಜನಪದ ಸಾಹಿತ್ಯ ತಾಲೂಕು ಅವರು ೩೦ ವರ್ಷಗಳ ಕಾಲ ಸಾಹಿತ್ಯಕ್ಷೇತ್ರಕ್ಕೆ ಹಗಲಿರುಳು ಶ್ರಮಿಸಿದ ಮಂಡ್ಯ ಸಂಸ್ಕೃತಿಯ ರಾಯಭಾರಿ ಎಂದೇ ಹೆಸರುವಾಸಿಯಾಗಿರುವ ನಾಗಮಂಗಲ ತಾಲೂಕಿನ ಅಳಿಮಯ್ಯ ಹಾಗೂ ಕರ್ನಾಟಕದ ಬಗ್ಗೆ ಕಲೆ ಮತ್ತು ಸಾಂಸ್ಕೃತಿಕಗಳ ಬಗ್ಗೆ ನಿರಂತರ ಚಿಂತಿಸುವ ಸಂಭಾವಿತರಾದ ಪ್ರೊ ಜಯಪ್ರಕಾಶ್ ಗೌಡರ ಬಗ್ಗೆ ಮತ್ತು ಮತ್ತಿತರ ಸಾಹಿತಿಗಳ ಬಗ್ಗೆ ಅಶ್ಲೀಲ ಪದ ಬಳಸಿ ನಿಂದಿಸಿರುವುದು ನಮಗೆಲ್ಲ ನೋವುಂಟಾಗಿದೆ ಅವರ ಹೇಳಿಕೆ ಖಂಡನೀಯ ಎಂದು ರವಿ ಚಾಮಲಾಪುರ ರವರ ವಿರುದ್ಧ ತುರುಬನಹಳ್ಳಿ ರಾಜೇಗೌಡ. ಅಣೆ ಚನ್ನಾಪುರ ಮಂಜೇಶ್. ಹಾಗೂ ಬೊಮ್ಮನಹಳ್ಳಿ ವಿಜಯ್ ಕುಮಾರ್. ರವರು ಆಕ್ರೋಶ ವ್ಯಕ್ತಪಡಿಸಿದರು…

ನಂತರ ಮಾತನಾಡಿದ ಹಿರಿಯ ಮುಖಂಡರಾದ ತುರುಬನಹಳ್ಳಿ ರಾಜೇಗೌಡ ಹಿರಿಯ ಸಾಹಿತಿ ಹಾಗೂ ನಾಗಮಂಗಲ ಅಳಿಮಯ್ಯ ಪ್ರೊಫೆಸರ್ ಜಯಪ್ರಕಾಶ್ ಗೌಡರವರ ವಿರುದ್ಧ ರವಿ ಕುಮಾರ್ ರವರು ಅಲೈಂಗಿಕ ಪದ ಬಳಸಿ ತನ್ನ ನಾಲಿಗೆ ಎಂತ ಕುಲ ಎಂದು ಅವನು ಬಹಿರಂಗಪಡಿಸಿ ಕಳೆದ ಬಾರಿ ಯಾರು ಯಾರು ಈ ವ್ಯಕ್ತಿಗೆ ಮತಚಲಾಯಿಸಿದ್ದರು ಅವರು ಎಲ್ಲ ತಲೆತಗ್ಗಿಸಬೇಕಾದ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾನ್ನೇ.ಅಲ್ಲದೆ ಪ್ರೊ ಜಯಪ್ರಕಾಶಗೌಡ ರವರು ತನ್ನ ಗುರು ಎಂಬ ಪರಿಜ್ಞಾನವಿಲ್ಲದೆ ಗುರುವಿಗೆ ಅಶ್ಲೀಲ ಪದ ಬಳಸಿದ್ದಾನೆ ಎಂದರೆ ಗುರುಕುಲವೂ ತಲೆತಗ್ಗಿಸುವಂತಹ ವಿಚಾರ ಎಂದು ರವಿ ಚಾಮಲಾಪುರ ರವರ ವಿರುದ್ಧ ನಿರಂತರ ಏಕವಚನದಲ್ಲೇ ಗುಡುಗಿದರು…

ನಾಗಮಂಗಲ ತಾಲೂಕಿನ ಸ್ವರ್ಣಸಂದ್ರ ಬೆಂಬಲಿಗರು ಮತ್ತು ಸಾಹಿತಿಗಳು ಮಂಡ್ಯ ಸ್ವಾಭಿಮಾನ ಸಾಹಿತಿಗಳಿದ್ದಾರೆ ರವಿ ಚಾಮಲಾಪುರ ರವರನ್ನು ಸೋಲಿಸಿ ಮಂಡ್ಯ ಸ್ವಾಭಿಮಾನವನ್ನು ಉಳಿಸಿ ಎಂಬ ಘೋಷಣೆ ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿ. ತಾಲೂಕು ದಂಡಾಧಿಕಾರಿಗಳಾದ ಕುಂಜಿ ಅಹಮದ್ ಅವರ ಮುಖಾಂತರ ರವಿ ಚಾಮಲಾಪುರ ರವರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನ ಉಮೇದುವಾರಿಕೆಯನ್ನು ಅನರ್ಹಗೊಳಿಸಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಿಸಿದರು…

ಈ ಸಂದರ್ಭದಲ್ಲಿ ಪತ್ರಕರ್ತ ಮೋಹನ್ ಕುಮಾರ್ ಬೊಮ್ಮನಹಳ್ಳಿ ವಿಜಿಕುಮಾರ್ ಶಿಕ್ಷಕರಾದ ಶಿವಕುಮಾರ್. ಚಂದ್ರು. ಅಣೆ ಚನ್ನಾಪುರ ಮಂಜೇಶ್. ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: