May 19, 2024

Bhavana Tv

Its Your Channel

ಕಲ್ಲದೇವನಹಳ್ಳಿ ರೈತಾಪಿ ವರ್ಗದ ಜನರಿಗೆ ನಾಗಮಂಗಲ ಲಯನ್ಸ್ ಕ್ಲಬ್ ವತಿಯಿಂದ ಆರೋಗ್ಯ ಶಿಬಿರ

ನಾಗಮಂಗಲ. ತಾಲೂಕಿನ ಲಯನ್ಸ್ ಕ್ಲಬ್ ವತಿಯಿಂದ ಹೊಣಕೆರೆ ಹೋಬಳಿಯ ಕಲ್ಲದೇವನಹಳ್ಳಿ ಗ್ರಾಮದಲ್ಲಿ ರೈತಾಪಿ ವರ್ಗದ ಜನರಿಗೆ ಬಿ.ಪಿ. ಶುಗರ್. ಕೋವಿಡ್. ಥೈರಾಯಿಡ್. ಕಾಯಿಲೆಗಳ ಸಮಸ್ಯೆಗಳಿಗೆ ಸಂಬAಧಪಟ್ಟAತೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಯಿತು

ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಠದ ಹೇಮಗಿರಿ ಶಾಖಾಮಠ ಆಡಳಿತ ಅಧಿಕಾರಿ ಹಾಗೂ ಈ ಬಾರಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿರುವ ಪುರಸ್ಕೃತ ಜೆ.ಎನ್. ರಾಮಕೃಷ್ಣೇಗೌಡ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ರಾಜ್ಯಮಟ್ಟದಲ್ಲಿ ಲಯನ್ ಸಂಸ್ಥೆಯು ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ತಮಗೆಲ್ಲ ಗೊತ್ತಿರುವ ವಿಚಾರ ತಾಲೂಕು ಮಟ್ಟದಲ್ಲಿ ಈ ಸಂಸ್ಥೆಯು ಕೂಡ ಹಳ್ಳಿಗಾಡು ಪ್ರದೇಶಗಳನ್ನು ಗುರುತಿಸಿ ರೈತಾಪಿ ವರ್ಗದ ಜನರಿಗೆ ಸಹಾಯವಾಗಲೆಂದು ಆರೋಗ್ಯ ಸಂಬAಧಪಟ್ಟAತೆ ಹಲವಾರು ಕಾರ್ಯಕ್ರಮಗಳ ನಡೆಸಿಕೊಂಡು ಬರುತ್ತಿದ್ದಾರೆ ಈ ದಿನವೂ ಕೂಡ ಈ ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿರುವುದು ಉತ್ತಮವಾಗಿದೆ ರೈತಾಪಿ ವರ್ಗದ ಜನರು ಕೂಡ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು
ಈ ಬಾರಿ ನನ್ನ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ನನ್ನ ಹಿಂಬದಿಯಲ್ಲಿ ಲಕ್ಷಾಂತರ ಜನರು ದುಡಿದಿದ್ದಾರೆ ಈ ಪ್ರಶಸ್ತಿಗೆ ಅವರೆಲ್ಲರೂ ಕೂಡ ಕಾರಣರಾಗಿರುತ್ತಾರೆ ಆದ್ದರಿಂದ ಪ್ರಶಸ್ತಿಯಿಂದ ನನಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿರುತ್ತದೆ ಈ ಪ್ರಶಸ್ತಿಯನ್ನು ಪಡೆಯಲು ಭಾಜನರಾದ ನನ್ನ ಸಹೋದ್ಯೋಗಿಗಳಿಗೆ ಅರ್ಪಿಸುವೆ ಎಂದರು

ನಾಗಮAಗಲ ತಾಲೂಕು ಲಯನ್ಸ ಸಂಸ್ಥೆಯ ಅಧ್ಯಕ್ಷರಾದ ನಂದಕಿಶೋರ ಮಾತನಾಡಿ ನಾವೆಲ್ಲರೂ ಕೂಡ ಕರೋನೋ ಮಹಾಮಾರಿ ವೈರಸ್ ಹರಡಿ ಎರಡು ವರ್ಷಗಳ ಕಾಲ ನಲುಗಿ ಹೋಗಿದ್ದೇವೆ ಮತ್ತೊಮ್ಮೆ ನಾವು ಚೇತರಿಸಿಕೊಳ್ಳಲು ಬಹಳ ವರ್ಷಗಳೇ ಬೇಕಾಗುತ್ತದೆ ಆದ್ದರಿಂದ ಎಲ್ಲರೂ ಕೂಡ ಮುಂದಿನ ಅಭಿವೃದ್ಧಿಯ ಬೆಳವಣಿಗೆ ಹೊಂದಲು ಆರೋಗ್ಯ ಬಹು ಮುಖ್ಯವಾಗಿರುತ್ತದೆ ದೇಶಕ್ಕೆ ಅನ್ನ ನೀಡುವ ರೈತ ಆರೋಗ್ಯವಾಗಿದ್ದರೆ ನಾವೆಲ್ಲರೂ ಕೂಡ ಕುಳಿತುಕೊಂಡು ಊಟ ಮಾಡಬಹುದು ಆದ್ದರಿಂದ ರೈತರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಗಮಂಗಲ ಲಯನ್ ಸಂಸ್ಥೆಯು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಉಚಿತವಾಗಿ ನೆರವಾಗಲು ನಮ್ಮ ಸಂಸ್ಥೆ ಮುಂದಾಗಿದೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಸಂಸ್ಥೆಯ ಸದಸ್ಯರೆಲ್ಲರೂ ಕೂಡ ಒಗ್ಗೂಡಿ ನಿಮ್ಮ ಸೇವೆಗೆ ಮುಂದಾಗಿದ್ದೇವೆ ನಿಮ್ಮೆಲ್ಲರ ಸಹಕಾರ ಇರಬೇಕು ಎಂದರು

ವೇದಿಕೆಯಲ್ಲಿ ನಾಗಮಂಗಲ ಕ.ಸಾ.ಪ .ಅಧ್ಯಕ್ಷ ಬಸವೇಗೌಡ. ಎನ್. ಟಿ. ಕೃಷ್ಣಮೂರ್ತಿ . ಗುತ್ತಿಗೆದಾರರಾದ ದಿನೇಶ್ .ವಸಂತ ಶ್ರೀಕಂಠೇಗೌಡ. ಡಾ.ಪ್ರಶಾಂತ್ .ಎಲೈಟ್ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕರಾದ ವಿಜಯಕುಮಾರ್. ಮಂಜು . ಗೀತಾ ತಿಮ್ಮೇಗೌಡ. ಮಹೇಶ್ ಕುಮಾರ್. ವೈ ಡಿ ಶಿವಣ್ಣ. ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: