May 6, 2024

Bhavana Tv

Its Your Channel

ದಾಸಶ್ರೇಷ್ಠರ ಆದರ್ಶಗಳ ನಡುವೆ ಬದುಕುತ್ತಿರುವುದೇ ನಮ್ಮ ಪುಣ್ಯ – ಶಾಸಕ ಸುರೇಶಗೌಡ

ನಾಗಮಂಗಲ: ದಾಸಶ್ರೇಷ್ಠ ಕನಕದಾಸರ ೫೩೪ ನೇ ಜಯಂತಿಯನ್ನು ನಾಗಮಂಗಲ ತಾಲೂಕು ಕುರುಬ ಸಮುದಾಯದ ವತಿಯಿಂದ ಆಚರಿಸಲಾಯಿತು ಕಾರ್ಯಕ್ರಮವನ್ನು ಶಾಸಕ ಸುರೇಶ ಗೌಡ ಮತ್ತು ಕುರುಬ ಸಮುದಾಯದ ಮುಖಂಡರು ಕನಕದಾಸರಿಗೆ ಪುಷ್ಪಾರ್ಚನೆ ಸಲ್ಲಿಸಿ ಜ್ಯೋತಿ ಬೆಳಗುವುದರ ಮೂಲಕ ಕನಕ ಜಯಂತಿಯನ್ನು ಆಚರಿಸಲಾಯಿತು

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಸುರೇಶ್ ಗೌಡ ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಿ ಹೊಸ ಮನ್ವಂತರಕೆ ನಾಂದಿ ಹಾಡಿದ ದಾಸ ಶ್ರೇಷ್ಠ ಕನಕದಾಸರು ಮಹನೀಯರು ಜಗತ್ತಿಗೆ ಕೊಟ್ಟಂತ ಕೊಡುಗೆಗಳು ಅವರನ್ನ ಜೀವಂತವಾಗಿರಿಸಿವೆ ೫೩೪ ವರ್ಷಗಳಾದರೂ ಕೂಡ ಕನಕದಾಸರು ನೀಡಿದಂತಹ ಸೇವೆ ಇಂದಿಗೂ ಕೂಡ ಜೀವಂತವಾಗಿದೆ ಇದರ ನಡುವೆ ನಾವು ಬದುಕುತ್ತಿರುವುದು ನಮ್ಮ ಪುಣ್ಯವೇ ಇರಬಹುದು ಉದಾಹರಣೆಗೆ ಉಡುಪಿಯಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ ಕನಕದಾಸರಿಗೆ ಹಿಂದೆ ತಿರುಗಿ ದರ್ಶನ ನೀಡಿದ್ದಾರೆ ಇಂತಹ ಶ್ರೇಷ್ಠ ಕುರುಹುಗಳು ಇಂದಿಗೂ ಜೀವಂತವಾಗಿದೆ ನಾವೆಲ್ಲರೂ ಕೂಡ ಕನಕದಾಸರ ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆಂದರು

ಇನ್ನು ತಾಲೂಕು ಕೇಂದ್ರ ಪ್ರದೇಶದಲ್ಲಿ ಕುರುಬ ಸಮುದಾಯ ಭವನ ಕಾರ್ಯವನ್ನು ನಡೆಯುತ್ತಿದ್ದು ನಿಧಾನಗತಿಯಲ್ಲಿ ಸಾಗುತ್ತಿದೆ ಹಿಂದೆ ನಾನು ಕೂಡ ಈ ಸಮುದಾಯ ಭವನಕ್ಕೆ ಅನುದಾನ ನೀಡಿದ್ದೇನೆ ಮುಂದಿನ ದಿನದಲ್ಲಿ ೨೫ ಲಕ್ಷ ರೂಪಾಯಿಗಳನ್ನು ಅನುದಾನ ನೀಡುತ್ತೇನೆ ಎಲ್ಲರೂ ಕೂಡ ಒಗ್ಗಟ್ಟಿನಿಂದ ಈ ಸಮುದಾಯ ಭವನದ ಕೆಲಸವನ್ನು ಶೀಘ್ರಗತಿಯಲ್ಲಿ ನಡೆಸಬೇಕು ಮುಂದಿನ ದಿನದಲ್ಲಿ ನನ್ನ ಎಲ್ಲ ರೀತಿಯ ಸಹಕಾರ ಕೂಡ ಇರುತ್ತದೆ ಎಂದು ತಿಳಿಸಿದರು

ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕುರುಬ ಸಮುದಾಯದ ಮುಖಂಡರಾದ ಪ್ರಸನ್ನರವರು ಮಾತನಾಡಿ ಕನಕ ಜಯಂತಿಯ ದಿವಸದಂದು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಕೂಡ ಕನಕ ಜಯಂತಿಯನ್ನು ಆಚರಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕುಲಬಾಂಧವರು ಒಂದೆಡೆ ಸೇರಲು ಅಸಾಧ್ಯವಾಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಬೇರೊಂದು ದಿನ ಜಯಂತಿಯನ್ನು ಆಚರಿಸುವುದರ ಮೂಲಕ ನಮ್ಮ ಸಮುದಾಯದ ಎಲ್ಲಾ ಕುಲಬಾಂಧವರು ಒಂದೆಡೆ ಸೇರಿಸುವುದರ ಮೂಲಕ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಿಳಿಸಿದರು

ತುಪ್ಪದಮಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಘುರವರು ಕನಕದಾಸರ ಜೀವನ ಚರಿತ್ರೆಯನ್ನು ವೇದಿಕೆಯಲ್ಲಿ ವಿವರಿಸಿದರು

ವೇದಿಕೆಯಲ್ಲಿ ಗಣ್ಯರಿಗೆ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಕುರುಬ ಸಮುದಾಯದ ಅಧ್ಯಕ್ಷರಾದ ಬಸವೇಗೌಡ. ಕಾರ್ಯದರ್ಶಿ ಆನಂದ. ಕೆ.ಪಿ.ಸಿ.ಸಿ. ಸದಸ್ಯರಾದ ಬಿದರಿಕೆರೆ ಮಂಜೇಗೌಡ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಕರೇಗೌಡ. ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ .ಕೃಷ್ಣೇಗೌಡ. ಪುಟ್ಟಸ್ವಾಮಿ.ಚಿಕ್ಕೋನಹಳ್ಳಿ ಮಂಜುನಾಥ್. ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕರಾದ ಪೂಜಾರಿ ಚಿಕ್ಕಣ್ಣ. ಜವರಪ್ಪ. ಸಿದ್ದರಾಮ .ಸಾವಿತ್ರಮ್ಮ. ಚಿಕ್ಕಮ್ಮ. ನೂರಾರು ಜನ ಕುರುಬ ಸಮುದಾಯದ ಮುಖಂಡರು ಭಾಗವಹಿಸಿದ್ದರು

error: