May 5, 2024

Bhavana Tv

Its Your Channel

ಶ್ರೀ ಕ್ಷೇತ್ರದಲ್ಲಿ ಕಾಲಭೈರವಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮ

ನಾಗಮಂಗಲ:- ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಡಿಸೆಂಬರ್ 26 ಮತ್ತು 27 ರಂದು ಕಾಲಭೈರವಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಶ್ರೀ ಕ್ಷೇತ್ರದಲ್ಲಿ ಎರಡು ದಿನಗಳ ಭೈರವಮಾಲೆ, ಗಿರಿ ಪ್ರದಕ್ಷಿಣೆ, ಸಂಗೀತೋತ್ಸವ,ಭಜನಾ ಮೇಳ, ಜೋಗಿದೀಕ್ಷೆ ನಡೆಯಲಿವೆ

ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಡಿಸೆಂಬರ್ 26 ಭಾನುವಾರದಂದು ಸಂಜೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಗಿರಿ ಪ್ರದಕ್ಷಿಣೆ ನಡೆಯಲಿದೆ

ಡಿಸೆಂಬರ್ 27 ರಂದು ಸೋಮವಾರ ಬೆಳಿಗ್ಗೆ ಐದು ಮೂವತ್ತರಿಂದ ಕಾಲಭೈರವೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ. ಬಸ್ಮಾಅಭಿಷೇಕ. ಬಿಲ್ವಾ ಪುಷ್ಪಾಭಿಷೇಕ. ಸುಗಂಧ ದ್ರವ್ಯಗಳಿಂದ ಅಭಿಷೇಕ ಕ್ಷೇತ್ರಪಾಲಕ ಕಾಲಬೈರವೇಶ್ವರ ಸ್ವಾಮಿಗೆ ನೆರವೇರಲಿದೆ

ಭಜನಾ ಮೇಳ ಸ್ಪರ್ಧೆ ಡಿಸೆಂಬರ್ 27 ರಂದು ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದು ಒಂದು ತಂಡದಲ್ಲಿ 8 ರಿಂದ 12 ಮಂದಿಗೆ ಭಾಗವಹಿಸಲು ಅವಕಾಶವಿದೆ ಭಾಗವಹಿಸುವ ತಂಡಗಳು ಭಜನ ಪರಿಕರ. ಹಾಗೂ ಅಗತ್ಯ ವಸ್ತುಗಳನ್ನು ತಂಡವೇ ತರಬೇಕಾಗುತ್ತದೆ ನೃತ್ಯ ಭಜನೆಗೆ ಅವಕಾಶವಿದ್ದು ವಿಜೇತರಾದ ಭಜನಾ ತಂಡಕ್ಕೆ ಬಹುಮಾನವಿರುತ್ತದೆ

ಡಿಸೆಂಬರ್ 24 ರಿಂದ ಜನವರಿ 5 ರ ವರೆಗೆ ಅರ್ಚಕ ವೃತ್ತಿ ತರಬೇತಿ ಆಯೋಜಿಸಲಾಗಿದ್ದು ಜಾತಿಮತ ಲಿಂಗಮತ ಭೇದವಿಲ್ಲದೆ ಅರ್ಚಕರಿಗೆ ಮೂಲಭೂತ ವೈದಿಕ ಶಿಕ್ಷಣ ಕಲಿಸಲಾಗುವುದು ಈ ತರಬೇತಿಯಿಂದ ಸಮಯಪಾಲನೆ ಸ್ವಚ್ಛತೆ. ಶಿಸ್ತು.ಶ್ರದ್ಧೆ. ಅರ್ಚಕರು ಮತ್ತು ಸಂಸ್ಕಾರವoತ ಸಮಾಜದ ಭಕ್ತರಿಗೆ ಕೊಂಡಿಯಾಗಿ ಇರುವಂತೆ ರೂಪಿಸುವುದ ತರಬೇತಿಯಲ್ಲಿ ಕಲಿಸಲಾಗುವುದು
ವರದಿ: ಚಂದ್ರಮೌಳಿ ನಾಗಮಂಗಲ

error: