
ನಾಗಮಂಗಲ. ಪಟ್ಟಣದಲ್ಲಿರುವ ಸ್ಟಾರ್ ಗ್ರೂಪ್ ಮಾಲೀಕ ಅಮಾನುಲ್ಲಾ ಮುರ್ತುಜಾ ಮನೆ ಹಾಗೂ ಕುಟುಂಬದವರ ಮನೆ ಹಾಗೂ ಕಛೇರಿಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಏಕ ಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಮಂಡ್ಯ ರಸ್ತೆಯಲ್ಲಿರುವ ಮನೆಗಳು ಹಾಗೂ ಕಛೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಟಾರ್ ಹ್ಯಾಚರೀಸ್ ಗ್ರೂಪ್ ಮಾಲೀಕರಾಗಿರುವ ಅಮಾನುಲ್ಲಾ ಮುರ್ತುಜಾ ಮನೆ ಹಾಗೂ ಕಛೇರಿ ಹಾಗೂ ಸಂಬAಧಿಕರ ಮನೆಗಳ ಮೇಲೆಯೂ ಇಂದು ಬೆಳ್ಳಂಬೆಳಗ್ಗೆ 20 ವಾಹನಗಳಲ್ಲಿ ಆಗಮಿಸಿ 10 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.
ಅಮಾನುಲ್ಲಾ ಮುರ್ತುಜಾ ನಾಗಮಂಗಲದಲ್ಲಿ ಕೋಳಿ ಸಾಕಾಣಿಕೆ, ಕೋಳಿ ಮೊಟ್ಟೆ, ಕೋಳಿ ಆಹಾರ ತಯಾರಿಕೆ ಘಟಕ ಹಾಗೂ ಹೋಲ್ ಸೇಲ್ ಮಾರಾಟಗಾರರಾಗಿದ್ದಾರೆ
ನಾಗಮಂಗಲದಲ್ಲಿ ಪೆಟ್ರೋಲ್ ಬಂಕ್ ಹಾಗೂ ಕೋಳಿ ಸಾಕಾಣಿಕೆ ಮತ್ತು ಸಾಗಣಿಕೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹಲವು ರಾಜ್ಯಗಳಿಗೆ ಬೃಹತ್ ಮಟ್ಟದಲ್ಲಿ ವ್ಯವಹಾರ ಹೊಂದಿದ್ದು ಕೋಳಿ ಸಾಗಣಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ..
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ