May 5, 2024

Bhavana Tv

Its Your Channel

ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು – ಟಿ ಎಂ ಶಿವಕುಮಾರ್

ನಾಗಮಂಗಲ:– ನಾಗಮಂಗಲ ತಾಲೂಕಿನ ಕರ್ನಾಟಕ ಪ್ರೆಸ್ ಕ್ಲಬ್ ಸಹಯೋಗದೊಂದಿಗೆ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ಜರುಗಿತು

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಂ ಟಿ ಶಿವಕುಮಾರ್ ಹಿರಿಯ ಪರ್ತಕರ್ತರು ಮೈಸೂರು ಇವರು ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಈ ವಿಷಯ ಬಗ್ಗೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನಡೆಸಿದ್ದರು. ವಿದ್ಯಾರ್ಥಿಗಳು ಹೆಚ್ಚು ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ವಿದ್ಯಾರ್ಥಿಗಳು ಸುಳ್ಳು ಮಾಹಿತಿಗಳನ್ನು ಹೆಚ್ಚು ನೋಡುವುದನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಅತಿ ಮುಖ್ಯವಾಗಿ ಪತ್ರಿಕೆಯು ಅಗತ್ಯವಾಗಿದೆ
ಸುಳ್ಳು ಮಾಹಿತಿಗಳನ್ನು ಪರಿಶೀಲಿಸಿ ನಂತರ ಬೇರೆಯವರಿಗೆ ಕಲಿಸಿಕೊಡಬೇಕು ಮತ್ತು ವಿದ್ಯಾರ್ಥಿಗಳು ಹೆಚ್ಚು ಲೇಖನಗಳು ಗ್ರಂಥಗಳು ಇತಿಹಾಸದ ಬಗ್ಗೆ ತಿಳಿಯಲು ಪತ್ರಿಕೆಗಳು ಅಗತ್ಯವಿದೆ. ಪ್ರತಿನಿತ್ಯ ಪತ್ರಿಕೆ ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು..

ಈ ಕಾರ್ಯಕ್ರಮದಲ್ಲಿ ಎಸ್ ಎಸ್ಸಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬಿ ಕೆ ಲೋಕೇಶ್ ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಎನ್ ಆರ್ ದೇವಾನಂದ್ ಪ್ರೆಸ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: