May 7, 2024

Bhavana Tv

Its Your Channel

ನಾನು ರಾಜಕೀಯ ಕ್ಷೇತ್ರಕ್ಕೆ ಹಣ ಆಸ್ತಿ ಸಂಪಾದನೆ ಮಾಡಲು ಬಂದಿಲ್ಲ- ಸಚಿವ ನಾರಾಯಣಗೌಡ

ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿ ನಿಮ್ಮ ಆಶೀರ್ವಾದದ ಬಲದಿಂದ ಸತತವಾಗಿ 3ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಸಚಿವನಾಗಿದ್ದೇನೆ . ನನ್ನ ಕೊನೆಯ ಉಸಿರಿರುವವರೆಗೂ ಜನರ ಸೇವೆ ಮಾಡಿ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ . ನಾನು ಕೆ.ಆರ್.ಪೇಟೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ನನ್ನನ್ನು ಟೀಕೆ ಮಾಡುತ್ತಿರುವ ಜೆಡಿಎಸ್ ಮುಖಂಡರು ನನ್ನಿಂದ ಸಹಾಯ ಪಡೆದ ಫಲಾನುಭವಿಗಳಾಗಿದ್ದಾರೆ . ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೇ ಒಬ್ಬ ಸೇವಕನಂತೆ ಜನರ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ನಾರಾಯಣಗೌಡ ಭಾವುಕರಾಗಿ ಹೇಳಿದರು …

ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿ ಮಾತನಾಡಿದರು…

ವಿರೋಧಿಗಳು ಮಾಡುವ ಟೀಕೆಗಳು ದಿನಕಳೆದಂತೆ ಜನಮಾನಸದಲ್ಲಿ ಮಾಸುತ್ತವೆ. ಆದರೆ ನಾವು ಶಾಸಕರಾಗಿ, ಸಚಿವರಾಗಿ ಅನುಷ್ಠಾನ ಗೊಳಿಸಿದ ಅಭಿವೃದ್ಧಿ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಮುಂಬೈ ಮಹಾ ನಗರದಲ್ಲಿ ಉಧ್ಯಮಿಯಾಗಿದ್ದ ನಾನು ನನ್ನ ತಾಯಿಗೆ ಕೊಟ್ಟ ಮಾತಿನಂತೆ ಒಬ್ಬ ಸಮಾಜ ಸೇವಕನಂತೆ ಕೆಲಸ ಮಾಡಲು ಜನ್ಮಭೂಮಿಗೆ ಬಂದೆ. ಆದರೆ ನನ್ನ ವಿರೋಧಿಗಳು ನನ್ನ ವಿರುದ್ಧ ಪ್ರದರ್ಶಿಸುತ್ತಿದ್ದ ಅಸಹನೆ, ಟೀಕೆ-ಟಿಪ್ಪಣಿಗಳಿಗೆ ಬೇಸತ್ತು ರಾಜಕಾರಣಕ್ಕೆ ಬಂದೆ. ಆದರೆ ತಾಲ್ಲೂಕಿನ ಜನತೆ ನನ್ನ ಮೇಲೆ ವಿಶ್ವಾಸವನ್ನಿಟ್ಟು ಸತತವಾಗಿ ಮೂರು ಅವಧಿಗೆ ಶಾಸಕನನ್ನಾಗಿ ಆಯ್ಕೆ ಮಾಡಿ ನನ್ನ ಜೀವನದಲ್ಲಿಯೇ ಮರೆಯದ ಕಾಣಿಕೆಯನ್ನು ನೀಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಭಾವುಕರಾದ ಸಚಿವ ನಾರಾಯಣಗೌಡ ನಾನು ಹಣ ಆಸ್ತಿ ಸಂಪಾದನೆ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ನನ್ನ ಜೀವನದ ಕೊನೆಯ ಉಸಿರಿರುವವರೆಗೂ ಜನತೆಯ ಸೇವೆ ಮಾಡುತ್ತೇನೆ ಎಂದು ಸಚಿವ ನಾರಾಯಣಗೌಡ ಹೇಳಿದರು…

ನನ್ನನ್ನು ತಾಲ್ಲೂಕಿನ ಪ್ರಭಾವಿ ರಾಜಕಾರಣಿಯೊಬ್ಬರು ಎಂಜಲು ಲೋಟ ತೊಳೆಯುವವನು ರಾಜಕಾರಣ ಮಾಡಲು ಸಾಧ್ಯವೇ ಎಂದು ಹೀಯಾಳಿಸಿದ್ದರು. ಈ ಹಿಂದೆ ನಾನು ಜೆಡಿಎಸ್ ಪಕ್ಷವನ್ನು ಬಿಟ್ಟು ಬಿಜೆಪಿ ಪಕ್ಷ ಸೇರಿ ಉಪ ಚುನಾವಣೆಯನ್ನು ಎದುರಿಸಲು ನಾಮಪತ್ರ ಸಲ್ಲಿಸಲು ಮಿನಿ ವಿಧಾನಸೌಧಕ್ಕೆ ಬಂದಾಗ ಜೆಡಿಎಸ್ ಪಕ್ಷದ ಕೆಲವರು ನನ್ನ ಮೇಲೆ ಚಪ್ಪಲಿ ಎಸೆದು ಅವಮಾನಿಸಿದರು. ಆದರೂ ನಾನು ಜಗ್ಗಲಿಲ್ಲ. ಜನರ ಆಶೀರ್ವಾದದ ಬಲದಿಂದ ಶಾಸಕನಾಗಿ ಆಯ್ಕೆಯಾಗಿ ತಾಲ್ಲೂಕಿನ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬರಲು ಕಾರಣನಾಗುವ ಜೊತೆಗೆ ಸಂಪುಟ ದರ್ಜೆಯ ಸಚಿವನಾಗಿ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಯನ್ನು ಮೂಲ ಮಂತ್ರವನ್ನಾಗಿಸಿಕೊAಡು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ ಸಚಿವ ನಾರಾಯಣಗೌಡ ತಾಲ್ಲೂಕಿನ ವಿದ್ಯಾವಂತ ಯುವಜನರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಅನುಕೂಲವಾಗುವಂತೆ ಉಧ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಿರುದ್ಯೋಗಿ ಯುವಜನರು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಂಡು ಸ್ವ ಉದ್ಯೋಗ ಸಾಧಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಸಚಿವ ನಾರಾಯಣಗೌಡರು ಕೈಮುಗಿದು ಮನವಿ ಮಾಡಿದರು…

ಸಮಾಲೋಚನಾ ಸಭೆಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ತೋಟದ ಬೆಳೆಗಾರರ ಸಂಸ್ಕರಣಾ ಸಂಘದ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಮುಖಂಡರಾದ ಕೆ.ಎಸ್.ಬಸವೇಗೌಡ, ಬಿ.ಜವರಾಯಿಗೌಡ, ಕೊಡಗಹಳ್ಳಿ ಜಯರಾಮೇಗೌಡ, ಡಾ.ಎಸ್.ಕೃಷ್ಣಮೂರ್ತಿ, ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ಯುವಮುಖಂಡ ಬಿಲ್ಲೇನಹಳ್ಳಿ ಕುಮಾರ್, ಡಿ.ಪಿ.ಪರಮೇಶ್, ಡಿ.ಪಿ.ಕೃಷ್ಣಕುಮಾರ್, ಜಾಗಿನಕೆರೆ ನಾರಾಯಣ, ಎ.ಜೆ.ದಿವಾಕರ್, ಕೆ.ಎಸ್.ರಾಮೇಗೌಡ, ಲೋಕನಹಳ್ಳಿ ದಿನೇಶ್, ಭಾರತಿಪುರ ಪುಟ್ಟಣ್ಣ, ಸಾರಂಗಿ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: