
ನಾಗಮಂಗಲ: ಬಿಜೆಪಿಯವರ ಅಜೆಂಡಾಗಳಿAದ ಸಮಾಜ ಹಾಳಾಗಲಿದ್ದು ಪ್ರತಾಪ ಸಿಂಹ ನಿಂದ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಗವತ್ ಗೀತೆ ವಿಚಾರದಲ್ಲಿ ಮತ್ತೆ ಗುಡುಗಿದ್ದಾರೆ.
ನಾಗಮಂಗಲದಲ್ಲಿ ಜೆಡಿಎಸ್ ಕಾರ್ಯಕರ್ತರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ನಾನು ಚಿಕ್ಕವಯಸ್ಸಿನಿಂದಲೇ ರಾಮಾಯಣ ಮಹಾಭಾರತ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿತು ಬೆಳೆದಿದ್ದೇನೆ ಇವರ ದ್ವೇಷ ರಾಜಕಾರಣ ಗಳು ಸಮಾಜವನ್ನು ಹಾಳುಮಾಡುತ್ತವೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಶಾಸಕ ಸುರೇಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಪುರಸಭೆ ಸದಸ್ಯ ಮಲ್ಲೇನಹಳ್ಳಿ ಚನ್ನಪ್ಪ, ಬ್ರಹ್ಮದೇವರ ಹಳ್ಳಿ ತರಕಾರಿ ಸೋಮು ಇತರರು ಇದ್ದರು.
ವರದಿ: ಚಂದ್ರಮೌಳಿ ನಾಗಮಂಗಲ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ