
ನಾಗಮಂಗಲ. ಪಟ್ಟಣದ ಟಿ.ಬಿ. ಬಡಾವಣೆಯ ಕೋರ್ಟ್ ಆವರಣದ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಟಿ.ಕೆ. ರಾಮೇಗೌಡ ಉಪಾಧ್ಯಕ್ಷರಾಗಿ ಎಲ್.ಆರ್.ಪುರುಷೋತ್ತಮ್. ಪ್ರಧಾನ ಕಾರ್ಯದರ್ಶಿಯಾಗಿ ಚಿಕ್ಕಸ್ವಾಮಿ. ಖಜಾಂಚಿಯಾಗಿ ಚಿಕ್ಕವೀರನಕೊಪ್ಪಲು ರಮೇಶ್. ಜಂಟಿ ಕಾರ್ಯದರ್ಶಿಯಾಗಿ ಎಂ. ಎಸ್.ರವಿಕುಮಾರ್. ಇಂದು ನಡೆದ ವಕೀಲರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಲ್ಲಮಪ್ರಭು ಘೋಷಣೆ ಮಾಡಿದರು
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಕೆ. ರಾಮೇಗೌಡರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಆಯ್ಕೆ ಮಾಡಿದ ವಕೀಲರ ಸಂಘದ ಮಿತ್ರರಿಗೆ ನನ್ನ ನಮನಗಳು ಈ ಹುದ್ದೆಯಿಂದ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಿವೆ ಸಂಘದ ಹಿತಾಸಕ್ತಿಗೆ ಬದ್ಧರಾಗಿ ಎಲ್ಲಾ ಪದಾಧಿಕಾರಿಗಳು ಕೂಡ ಕಾರ್ಯನಿರ್ವಹಿಸುತ್ತೇವೆ ಮುಖ್ಯವಾಗಿ ಸಂಘದ ಮೂಲಭೂತ ಸೌಕರ್ಯಗಳು ಹಾಗೂ ನ್ಯಾಯಾಲಯದ ಮೊರೆ ಹೋಗಿ ಬಂದ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ ಪ್ರಮುಖವಾಗಿ ಸಂಘದ ಬಹುದಿನದ ಆಸೆಯಂತೆ ಜಿಲ್ಲಾ ನ್ಯಾಯಾಲಯ ನಾಗಮಂಗಲಕ್ಕೆ ತರಬೇಕೆಂಬುದು ನಮ್ಮ ಸಂಘದ ಗುರಿಯಾಗಿರುತ್ತದೆ ಎಂದರು
ಇದೇ ಸಂದರ್ಭದಲ್ಲಿ ಆಯ್ಕೆಯಾದ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು
ಸನ್ಮಾನಿತ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ದೇವಿಹಳ್ಳಿ ಮಂಜುನಾಥ್ ಜೆ.ಕೆ.ರಮೇಶಗೌಡ. ಚಂದ್ರು. ವಕೀಲರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು
ವರದಿ:- ಚಂದ್ರಮೌಳಿ ನಾಗಮಂಗಲ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ