
ನಾಗಮಂಗಲ ತಾಲೂಕು ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆಯಾಗಿದ್ದಾರೆ..
ಕಾಂತಾಪುರ ಗ್ರಾಮ ಪಂಚಾಯಿತಿಯ ಸಾಮಾನ್ಯ ಕ್ಷೇತ್ರದ ಅಧ್ಯಕ್ಷರ ಚುನಾವಣೆಯಲ್ಲಿ ಸಂಕನಹಳ್ಳಿ ಗ್ರಾಮದ ಜೆ.ಡಿ.ಎಸ್.ಮುಖಂಡ ಸಿ.ಕೆ.ರಮೇಶಕುಮಾರ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು
ಕಾಂತಪುರ ಗ್ರಾಮ ಪಂಚಾಯತಿಯಲ್ಲಿ 14 ಕ್ಷೇತ್ರಗಳಿದ್ದು, 13 ಸದಸ್ಯರು, ಜೆ.ಡಿ.ಎಸ್.ಪಕ್ಷದ ಬೆಂಬಲಿತ ಅಭ್ಯರ್ಥಿಗಳು, ಒಬ್ಬ ಅಭ್ಯರ್ಥಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಇಂದು ನಡೆದ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಸಂಕನಹಳ್ಳಿ ಕ್ಷೇತ್ರದಿಂದ ರಮೇಶ ಕುಮಾರ್, ಕುಪ್ಪಹಳ್ಳಿ ಕ್ಷೇತ್ರದ ಸುಮಲತಾ ಮಂಜು ನಾಮಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದ್ದರು…
ಮೂರು ಜನ ಗ್ರಾಮ ಪಂಚಾಯತಿ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಿಲು ಗೈರಾದರೆ ಮೂರು ಮತಗಳನ್ನು ಸುಮಲತಾ ಮಂಜು ಪಡೆದು 8 ಮತಗಳನ್ನು ಸಿ ಕೆ ರಮೇಶಕುಮಾರ್ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಂದು ಚುನಾವಣೆ ಅಧಿಕಾರಿ ಚಂದ್ರಮೌಳಿ ತಿಳಿಸಿದರು…
ಅಧ್ಯಕ್ಷರ ಆಯ್ಕೆಯನ್ನು ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು ಜೆ.ಡಿ.ಎಸ್. ಪಕ್ಷ.
ಶಾಸಕ ಸುರೇಶ್ ಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಹಾಗೂ ಎಚ್ ಡಿ ದೇವೇಗೌಡರಿಗೆ
ಜೈಕಾರ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು
ನೂತನ ಅಧ್ಯಕ್ಷರಾದ ರಮೇಶ್ ಕುಮಾರ್ ಮಾತನಾಡಿ ಪಕ್ಷದ ನಾಯಕರು ಮತ್ತು ನಮ್ಮ ನೆಚ್ಚಿನ ಶಾಸಕರಾದ ಸುರೇಶಗೌಡರವರಿಗೆ ನನ್ನ ಮನಪೂರ್ವಕ ಧನ್ಯವಾದಗಳು ತಿಳಿಸಿದರು
ನಾನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಮುಖಂಡರಿಗೂ ಮತ್ತು ನನ್ನ ಕ್ಷೇತ್ರದ ಜನರಿಗೆ ಧನ್ಯವಾದಗಳು ಈ ಜವಾಬ್ದಾರಿತ ಹುದ್ದೆಯನ್ನು ಗ್ರಾಮ ಪಂಚಾಯತಿ ಸದಸ್ಯರ ಒಗ್ಗೂಡಿಸಿಕೊಂಡು ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡುವೆ ಎಂದು ತಿಳಿಸಿದರು
ಜೆಡಿಎಸ್ ಪಕ್ಷದ ಮುಖಂಡರಾದ ಕುಮಾರ್ ಮಾತನಾಡಿ ಅಧ್ಯಕ್ಷರ ಆಯ್ಕೆಯಿಂದ ನಮ್ಮ ಪಕ್ಷಕ್ಕೆ ಬಲ ಬಂದಿದೆ ಮುಂದಿನ ದಿನದಲ್ಲಿ ಇದೇ ರೀತಿ ಶಾಸಕ ಸುರೇಶಗೌಡರ ಆಯ್ಕೆಗೆ ಎಲ್ಲರೂ ಕೂಡ ಒಗ್ಗೂಡಿ ಬೆಂಬಲಿಸಬೇಕೆAದು ತಿಳಿಸಿದರು.
.
ಇದೇ ಸಂದರ್ಭದಲ್ಲಿ ಮುಖಂಡರಾದ ಕುಮಾರ, ಕಾರಹಳ್ಳಿ ಸುರೇಶ್.. ಕರಿಕ್ಯಾತನಹಳ್ಳಿ ಅಂಬರೀಶ, ಜಗದೀಶ. ನಾಗಮಂಗಲ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪನವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು..

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ:ಡಾ. ಎ ಟಿ ಶಿವರಾಮು