ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಇದ್ದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೇ 3ರ ಬಳಿಕವೂ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ. ಈಗಾಗಲೇ 6 ರಾಜ್ಯಗಳು ಲಾಕ್ ಡೌನ್ ನ್ನು ಮೇ 16ರವರೆಗೂ ವಿಸ್ತರಣೆ ಮಾಡಲು ಒಲವು ವ್ಯಕ್ತಪಡಿಸಿವೆ.
ಎರಡನೇ ಹಂತದ ಲಾಕ್ ಡೌನ್ ಮೇ 3ರಕ್ಕೆ ಮುಕ್ತಾಯವಾಗಲಿರುವ ಹಿನ್ನಲೆಯಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ, ಪಂಜಾಬ್, ದೆಹಲಿ, ಓಡಿಶಾ, ಪಶ್ಚಿಮ ಬಾಂಗಾಳ ಸೇರಿದಂತೆ 6 ರಾಜ್ಯಗಳು ಲಾಕ್ ಡೌನ್ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ.
ಲಾಕ್ ಡೌನ್ ಹಾಗೂ ಕೊರೊನಾ ಪರಿಸ್ಥಿತಿ ವಿಚಾರವಾಗಿ ನಾಳೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಿದ್ದಾರೆ. ಈ ವೇಳೆ ಲಾಕ್ಡೌನ್ ತೆರವುಗೊಳಿಸಿ ಕೊರೋನಾ ತಡೆ ಸಾಧ್ಯವೇ? ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಬೇಕೇ ಅಥವಾ ಇನ್ನಷ್ಟು ದಿನಗಳ ಕಾಲ ಲಾಕ್ ಡೌನ್ ಮುಂದುವರೆಸಬೇಕೆ ಹಾಗೂ ಗ್ರೀನ್ ಝೋನ್ ಗಳಲ್ಲಿ ಅನುಮತಿ ನೀಡಬೇಕೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಲಾಕ್ಡೌನ್ ವಿಸ್ತರಣೆ ಕುರಿತು ನಾಳೆ ಯಾವುದೇ ಚರ್ಚೆ ನಡೆದರೂ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಇನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 26 ಸಾವಿರ ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 19,868 ಆಕ್ಟಿವ್ ಕೇಸ್ಗಳಿವೆ. 824 ಜನರು ಮೃತಪಟ್ಟಿದ್ದಾರೆ.
source : ಪ್ರಗತಿವಾಹಿನಿ
More Stories
ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ
‘ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ – ಪ್ರಧಾನಿ ನರೇಂದ್ರ ಮೋದಿ ಘೋಷಣೆ
NEET-PG ಪರೀಕ್ಷೆ ಕನಿಷ್ಠ ʼ4 ತಿಂಗಳು ಮುಂದೂಡಿಕೆʼ; ಕೇಂದ್ರ ಸರ್ಕಾರ ಘೋಷಣೆ