May 19, 2024

Bhavana Tv

Its Your Channel

ದೇಶದಲ್ಲಿ ಜಾರಿಯಾಗುತ್ತಾ 3ನೇ ಹಂತದ ಲಾಕ್ ಡೌನ್?

ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಇದ್ದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೇ 3ರ ಬಳಿಕವೂ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ. ಈಗಾಗಲೇ 6 ರಾಜ್ಯಗಳು ಲಾಕ್ ಡೌನ್ ನ್ನು ಮೇ 16ರವರೆಗೂ ವಿಸ್ತರಣೆ ಮಾಡಲು ಒಲವು ವ್ಯಕ್ತಪಡಿಸಿವೆ.

ಎರಡನೇ ಹಂತದ ಲಾಕ್ ಡೌನ್ ಮೇ 3ರಕ್ಕೆ ಮುಕ್ತಾಯವಾಗಲಿರುವ ಹಿನ್ನಲೆಯಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ, ಪಂಜಾಬ್, ದೆಹಲಿ, ಓಡಿಶಾ, ಪಶ್ಚಿಮ ಬಾಂಗಾಳ ಸೇರಿದಂತೆ 6 ರಾಜ್ಯಗಳು ಲಾಕ್ ಡೌನ್ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ.

ಲಾಕ್ ಡೌನ್ ಹಾಗೂ ಕೊರೊನಾ ಪರಿಸ್ಥಿತಿ ವಿಚಾರವಾಗಿ ನಾಳೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಿದ್ದಾರೆ. ಈ ವೇಳೆ ಲಾಕ್​ಡೌನ್ ತೆರವುಗೊಳಿಸಿ ಕೊರೋನಾ ತಡೆ ಸಾಧ್ಯವೇ? ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಬೇಕೇ ಅಥವಾ ಇನ್ನಷ್ಟು ದಿನಗಳ ಕಾಲ ಲಾಕ್ ಡೌನ್ ಮುಂದುವರೆಸಬೇಕೆ ಹಾಗೂ ಗ್ರೀನ್ ಝೋನ್ ಗಳಲ್ಲಿ ಅನುಮತಿ ನೀಡಬೇಕೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಲಾಕ್​ಡೌನ್​ ವಿಸ್ತರಣೆ ಕುರಿತು ನಾಳೆ ಯಾವುದೇ ಚರ್ಚೆ ನಡೆದರೂ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಇನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 26 ಸಾವಿರ ಕೊರೋನಾ ವೈರಸ್​ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 19,868 ಆಕ್ಟಿವ್​ ಕೇಸ್​ಗಳಿವೆ. 824 ಜನರು ಮೃತಪಟ್ಟಿದ್ದಾರೆ.

source : ಪ್ರಗತಿವಾಹಿನಿ 

error: