May 8, 2024

Bhavana Tv

Its Your Channel

ದೇಶದಲ್ಲಿ 2 ಲಕ್ಷ ಗಡಿ ದಾಟಿದ ಕೊರೊನಾ :24 ಗಂಟೆಯಲ್ಲಿ8909 ಹೊಸ ಸೋಂಕು

ನವದೆಹಲಿ: ಕಳೆದ 24 ಗಂಟೆಯಲ್ಲಿ 8909 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಲಾಕ್ ಡೌನ್ ಸಡಿಲಗೊಂಡ ಮೂರನೇ ದಿನ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿದೆ.

ಬುಧವಾರ ಬೆಳಿಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ ದೇಶದಲ್ಲಿ ಮತ್ತೆ ದಾಖಲೆ ಸಂಖ್ಯೆಯ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2,07,615 ಮುಟ್ಟಿದೆ.

ಒಂದೇ ದಿನದಲ್ಲಿ 217 ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 5815 ಆಗಿದೆ. ಮಹಾರಾಷ್ಟ್ರದಲ್ಲಿ 47 ಪೊಲೀಸ್ ಸಿಬ್ಬಂದಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ.

error: